ಆ್ಯಪ್ನಗರ

ನಿರ್ಭಯಾ ಅತ್ಯಾಚಾರ ಕೇಸ್‌: ಪವನ್‌ ಕುಮಾರ್‌ ಗುಪ್ತಾ ಅರ್ಜಿ ವಜಾಗೊಳಿಸಿದ ಸುಪ್ರೀಂ; ಗಲ್ಲು ಫಿಕ್ಸ್‌

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಗುರಿಯಾಗುವುದು ಕಾಯಂ ಆಗಿದೆ. ಅಪ್ರಾಪ್ತ ಎಂಬ ಪವನ್‌ ಕುಮಾರ್‌ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನಾಯಾಲಯ ತಿರಸ್ಕರಿಸಿದೆ.

TIMESOFINDIA.COM 20 Jan 2020, 4:11 pm
ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಎಲ್ಲ ಅತ್ಯಾಚಾರಿಗಳಿಗೂ ಗಲ್ಲು ಶಿಕ್ಷೆ ಮತ್ತೊಮ್ಮೆ ಕಾಯಂ ಆಗಿದೆ. 2012ರಲ್ಲಿ ಅತ್ಯಾಚಾರ ನಡೆದಾಗ ತಾನು ಅಪ್ರಾಪ್ತನಾಗಿದ್ದೆ ಎಂಬ ಪವನ್‌ ಕುಮಾರ್‌ ಗುಪ್ತಾ ಎಂಬಾತನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Vijaya Karnataka Web pawan gupta


ಅಪರಾಧಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿ (ಎಸ್‌ಎಲ್‌ಪಿ) ನ್ಯಾಯಾಲಯವು ಈ ವಿಷಯದಲ್ಲಿ ಯಾವುದೇ ಹೊಸ ಆಧಾರವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೆ, ಅಪರಾಧದ ಸಮಯದಲ್ಲಿ ತಾನು ಬಾಲಾಪರಾಧಿ ಎಂದು ಪವನ್ ಹೇಳಿಕೊಂಡಿದ್ದನ್ನು ದೆಹಲಿ ಹೈಕೋರ್ಟ್ ಸಹ ಈ ಸಂಗತಿಯನ್ನು ಕಡೆಗಣಿಸಿದೆ.

ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪವನ್ ಕುಮಾರ್ ಗುಪ್ತಾ ಅವರ ಮನವಿಯ ಕುರಿತು ನ್ಯಾಯಮೂರ್ತಿ ಆರ್ ಬಾನುಮತಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು.

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆಗೆ ಮುಹೂರ್ತ ಫಿಕ್ಸ್‌; ಫೆ.1, ಬೆಳಗ್ಗೆ 6 ಗಂಟೆಗೆ ನೇಣುಗಂಬಕ್ಕೆ


ನಿರ್ಭಯಾ ಅತ್ಯಾಚಾರಿಗಿಲ್ಲ ಕ್ಷಮಾದಾನ, ಅರ್ಜಿ ತಿರಸ್ಕರಿಸಿದ ರಾಷ್ಟ್ರಪತ


2012ರ ಡಿಸೆಂಬರ್‌ನಲ್ಲಿ ಅಪರಾಧ ನಡೆದ ಸಮಯದಲ್ಲಿ ಪವನ್‌ ಕುಮಾರ್‌ ಗುಪ್ತಾ ಅಪ್ರಾಪ್ತನಾಗಿದ್ದ ಮತ್ತು ಈ ಮನವಿಯನ್ನು ದಿಲ್ಲಿ ಹೈಕೋರ್ಟ್ ತಪ್ಪಾಗಿ ವಜಾಗೊಳಿಸಿದೆ ಎಂದು ಗುಪ್ತಾ ಪರ ವಕೀಲರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಆರ್ ಬಾನುಮತಿ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡಿದ್ದರು.

ಇತ್ಯರ್ಥವಾಗದ ಕ್ಷಮಾದಾನ ಅರ್ಜಿ, ನಿರ್ಭಯಾ ಅತ್ಯಾಚಾರಿಗಳ ಗಲ್ಲು ಮುಂದೂಡಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ