ಆ್ಯಪ್ನಗರ

ಎದೆ ಮೇಲೆ ಮಲಗಿ ನಗುತ್ತಿದ್ದ ದೇವತೆ: ನಿರ್ಭಯಾ ನೆನೆದು ಕಣ್ಣೀರಾದ ತಂದೆ

ನಿರ್ಭಯಾ ಹಂತಕರನ್ನು ಇಂದು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ನಾಲ್ವರೂ ಹಂತಕರು ಮೃತಪಟ್ಟಿದ್ದಾರೆ ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ಜಾರಿಯಾಗಿದೆ ಎಂದು ತಿಳಿಯುತ್ತಿದ್ದಂತೇ ನಿರ್ಭಯಾ ಪೋಷಕರು ಸೇರಿದಂತೆ ಜೈಲು ಮು ಭಾಗದಲ್ಲಿ ಸೇರಿದ್ದ ಸಾವಿರಾರು ಜನ ಕುಣಿದು ಕುಪ್ಪಳಿಸಿದರು. ಈ ವೇಳೆ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್ ಮಗಳನ್ನು ನೆನೆದು ಕಣ್ಣೀರಾದರು.

Vijaya Karnataka Web 20 Mar 2020, 8:41 am
ನವದೆಹಲಿ: ನಾನೆಂದೂ ಮಗ-ಮಗಳೆಂಬ ಭೇದಭಾವ ಮಾಡಿಲ್ಲ. ತಂದೆಯೋರ್ವನಿಗೆ ಮಗಳೆಂದರೆ ತುಸು ಹೆಚ್ಚೇ ಪ್ರೀತಿ. ಅದರಂತೆ ನಿರ್ಭಯಾ ಮೇಲೆ ನನಗೆ ಅತೀವ ಪ್ರೀತಿ ಇತ್ತು.
Vijaya Karnataka Web Badrinath
ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಬಳಿಕ ನಿರ್ಭಯಾ ತಂದೆ ಬದ್ರಿನಾತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.


ಚಿಕ್ಕವಳಿದ್ದಾಗ ಯಾವಾಗಲೂ ನನ್ನ ಬಳಿಯೇ ಮಲಗುತ್ತಿದ್ದ ನಿರ್ಭಯಾ, ಎದೆ ಮೇಲೆ ಮಲಗಿ ನಗುತ್ತಿದ್ದರೆ ನನ್ನ ದಿನದ ಎಲ್ಲಾ ದು:ಖ ದುಮ್ಮಾನಗಳನ್ನು ನಾನು ಮರೆತು ಬಿಡುತ್ತಿದೆ. ದೇವತೆಯಂತೆ ಮುಗುಳ್ನಗುತ್ತಾ ಎದೆ ಮೇಲೆ ಮಲಗಿದ್ದರೆ ಅದಕ್ಕಿಂತ ಸಮಾಧಾನದ ಸಂಗತಿ ಮತ್ತೊಂದಿರಲಿಲ್ಲ...

ಇದು ಪಾಪಿಗಳ ಹೀನ ಕೃತ್ಯಕ್ಕೆ ಬಲಿಯಾದ ಈ ದೇಶದ ಮಗಳು ನಿರ್ಭಯಾ ಅವರ ತಂದೆಯ ಪ್ರತಿಕ್ರಿಯೆ. ತಿಹಾರ್ ಜೈಲಿನ ಹೊರಗೆ ಹಂತಕರ ಗಲ್ಲುಶಿಕ್ಷೆ ಜಾರಿಯಾದ ಕುರಿತು ಖಚಿತತೆಗಾಗಿ ಕಾಯುತ್ತಿದ್ದ ನಿರ್ಭಯಾ ಪೋಷಕರು, ಹಂತಕರಿಗೆ ಗಲ್ಲುಶಿಕ್ಷೆ ನೀಡಲಾಗಿದೆ ಎಂದು ಕೇಳುತ್ತಿದ್ದಂತೇ ಕಣ್ಣೀರಾದರು.

ನಿರ್ಭಯಾ ಪ್ರಕರಣ Live: ನೇಣಿಗೇರಿದ ನಾಲ್ವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ ವೈದ್ಯರು!

ಈ ವೇಳೆ ಮಾತನಾಡಿದ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್, ಮಗಳನ್ನು ನೆನೆದು ಭಾವುಕರಾದರು. ನನ್ನ ಬದುಕಾಗಿದ್ದ ಮಗಳನ್ನೇ ಕಸಿದುಕೊಂಡಿದ್ದ ಪಾಪಿಗಳುಗೆ ಗಲ್ಲುಶಿಕ್ಷೆ ಜಾರಿಯಾಗುವುದನ್ನು ಏಳು ವರ್ಷಗಳಿಂದ ಕಾಯುತ್ತಿದೆ ಎಂದು ಬದ್ರಿನಾಥ್ ಹೇಳಿದರು.



ನಾನೆಂದೂ ಮಗ-ಮಗಳೆಂಬ ಭೇದಭಾವ ಮಾಡಿಲ್ಲ. ಮಗನಿಗೆ ಏನು ಸೌಲಭ್ಯ ನೀಡಿದ್ದೆವೋ ಅದೇ ಸೌಲಭ್ಯವನ್ನು ಆಕೆಗೂ ನೀಡಿದ್ದೇವು. ಆಕೆ ಕೇಳಿದ್ದನ್ನೆಲ್ಲಾ ತಂದು ಕೊಡದಿದ್ದರೆ ನನಗೆ ಸಮಾಧಾನವೇ ಆಗುತ್ತಿರಲಿಲ್ಲ ಎಂದು ಹೇಳುತ್ತಾ ಬದ್ರಿನಾಥ್ ಕಣ್ಣೀರಾದರು.

ಇದೇ ವೇಳೆ ನ್ಯಾಯ ವಿಳಂಬವಾಗಿ ದೊರೆಯಿತು ಎಂದು ಹೇಳಿರುವ ನಿರ್ಭಯಾ ತಂದೆ ಬದ್ರಿನಾಥ್, ಇಂತಹ ಹೀನ ಕೃತ್ಯಗಳ ವಿಚಾರಣೆ ಅತ್ಯಂತ ತ್ವರಿತವಾಗಿ ಮಾಡಬೇಕು ಎಂದು ಆಗ್ರಹಿಸಿದರು. ನಾವೆಂದೂ ನ್ಯಾಯಾಲಯದ ಮೇಲಿನ ಭರವಸೆ ಕಳೆದಿಕೊಂಡಿರಲಿಲ್ಲ. ಆದರೆ ವಿಳಂಬ ನ್ಯಾಯ ನಮ್ಮ ದುಗುಡವನ್ನು ಹೆಚ್ಚಿಸಿತ್ತು ಎಂದು ಬದ್ರಿನಾಥ್ ಹೇಳಿದರು.

ಭಾರತದ ಹೆಣ್ಣುಮಕ್ಕಳಿಗಾಗಿ ಶುಕ್ರವಾರದ ಸೂರ್ಯ ಉದಯಿಸುತ್ತಾನೆ: ನಿರ್ಭಯಾ ತಾಯಿ

ಈ ದೇಶದಲ್ಲಿ ಅತ್ಯಾಚಾರಕ್ಕೆ ನಲುಗಿರುವ ಅದೆಷ್ಟೋ ಹೆಣ್ಣುಮಕ್ಕಳು ಇನ್ನೂ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರೊಂದಿಗೆ ಕೈ ಜೋಡಿಸಿ ನ್ಯಾಯಕ್ಕಾಗಿ ಹೋರಾಡುವುದು ನಮ್ಮ ಮುಂದಿನ ಗುರಿ ಎಂದು ನಿರ್ಭಯಾ ತಂದೆ ಬದ್ರಿನಾಥ್ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ