ಆ್ಯಪ್ನಗರ

ನಿತ್ಯಾನಂದ ಪಾಸ್‌ಪೋರ್ಟ್‌ ರದ್ದು, ವೆಬ್‌ಸೈಟ್‌ ಮಾಡಿದಷ್ಟು ಸುಲಭವಲ್ಲ, ದೇಶ ಕಟ್ಟೋದು: ಕೇಂದ್ರ ಸರಕಾರ

ಬಾಲಕಿಯರಿಬ್ಬರ ಅಪಹರಣ, ಅತ್ಯಾಚಾರ ಹಾಗೂ ಆಶ್ರಮದಲ್ಲಿ ಬಾಲಕರನ್ನು ಇಟ್ಟುಕೊಂಡ ಆರೋಪ ಹೊತ್ತಿರುವ ನಿತ್ಯಾನಂದ ಈಗ ದೇಶ ಬಿಟ್ಟು ಪರಾರಿಯಾಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

Vijaya Karnataka Web 6 Dec 2019, 6:44 pm
ಹೊಸದಿಲ್ಲಿ: ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪ ಹೊತ್ತು ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನ ನಿತ್ಯಾನಂದ ಪಾಸ್‌ಪೋರ್ಟ್‌ ರದ್ದು ಮಾಡಲಾಗಿದೆ. ಹೊಸದಾಗಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯ ಸ್ಪಷ್ಟಪಡಿಸಿದೆ.
Vijaya Karnataka Web ನಿತ್ಯಾನಂದ
ನಿತ್ಯಾನಂದ


ಈ ಕುರಿತು ವಿದೇಶಾಂಗ ವ್ಯವಹಾರ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ಈಗಾಗಲೇ ನಿತ್ಯಾನಂದ ಪಾಸ್‌ಪೋರ್ಟ್‌ ರದ್ದುಪಡಿಸಲಾಗಿದೆ. ಪಾಸ್‌ಪೋರ್ಟ್‌ಗಾಗಿ ಹೊಸ ಅರ್ಜಿ ಕೂಡ ಸಲ್ಲಿಸಲಾಗಿತ್ತು. ಆದರೆ ಪೊಲೀಸ್‌ ಪರಿಶೀಲನೆ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ವಕ್ತಾರ ರವೀಶ್ ಕುಮಾರ್‌ ತಿಳಿಸಿದ್ದಾರೆ.

2008ರ ಅಕ್ಟೋಬರ್‌ನಲ್ಲಿ ನಿತ್ಯಾನಂದಗೆ ಪಾಸ್‌ಪೋರ್ಟ್‌ ನೀಡಲಾಗಿತ್ತು. ಹತ್ತು ವರ್ಷಗಳ ಅವಧಿಯ ಈ ಪಾಸ್‌ಪೋರ್ಟ್‌ 2018ರ ಸೆಪ್ಟೆಂಬರ್‌ಗೆ ನವೀಕರಿಸಬೇಕಾಗಿತ್ತು. ಆದರೆ ಅದಕ್ಕೂ ಮುನ್ನವೇ ಪಾಸ್‌ಪೋರ್ಟ್‌ ರದ್ದುಗೊಳಿಸಲಾಯಿತು. ನಂತರ ಸಲ್ಲಿಸಿದ ಹೊಸ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ನಿತ್ಯಾನಂದ ವಿರುದ್ಧ ಭಾರತದಲ್ಲಿ ಹಲವಾರು ಪ್ರಕರಣ ದಾಖಲಾಗಿದೆ. ಯಾವುದೇ ದೇಶದಲ್ಲಿ ಇದ್ದರೂ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ ಎಂದು ವಕ್ತಾರ ರವೀಶ್‌ ಕುಮಾರ್‌ ತಿಳಿಸಿದರು.

ಪರಾರಿಯಾಗಿರುವ ನಿತ್ಯಾನಂದ ಹೊಸ ದೇಶ ಕಟ್ಟುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ವೆಬ್‌ಸೈಟ್‌ ಮಾಡಿದಷ್ಟು ಸುಲಭವಲ್ಲ ದೇಶ ಕಟ್ಟೋದು. ವೆಬ್‌ಸೈಟ್‌ ಮಾಡೋದು ಬೇರೆ, ದೇಶ ಕಟ್ಟೋದು ಬೇರೆ ಎಂದು ರವೀಶ್ ಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ