ಆ್ಯಪ್ನಗರ

ಪತ್ನಿಯನ್ನು ಸಿಎಂ ಮಾಡಿದವರು ಮಹಿಳೆಯರ ಅಭಿವೃದ್ಧಿಗೆ ಏನು ಮಾಡಿದರು? ಲಾಲು ವಿರುದ್ಧ ನಿತೀಶ್‌ ಕಿಡಿ

ಹಿಂದಿನ ಸರಕಾರಗಳು ಪರಿಶಿಷ್ಟರು, ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿಯನ್ನೂ ಕಡೆಗಣಿಸಿತ್ತು. ತಾವು ಮುಖ್ಯಮಂತ್ರಿಯಾದ ಬಳಿಕ ಈ ಸಮುದಾಯಗಳ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ನಿತೀಶ್‌ ಕುಮಾರ್‌ ತಿಳಿಸಿದರು.

Agencies 30 Oct 2020, 6:43 pm
ಪಟನಾ: ಈಗ ಮಹಿಳಾ ಅಭಿವೃದ್ಧಿ ಕುರಿತು ಮಾತನಾಡುವವರು ತಾವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web Nitish Kumar


ಪರ್‌ಬತ್ತಾದಲ್ಲಿಶುಕ್ರವಾರ ಜೆಡಿಯು ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ನಿತೀಶ್‌ ಅವರು ನೇರವಾಗಿ ಲಾಲು ಹೆಸರು ಪ್ರಸ್ತಾಪಿಸಲಿಲ್ಲ. ಆದರೆ ಭಾಷಣದುದ್ದಕ್ಕೂ ಲಾಲು ಮತ್ತು ಆರ್‌ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಅವರು (ಲಾಲು) ತಾವು ಜೈಲಿಗೆ ಹೋಗುವಾಗ ಪತ್ನಿಯನ್ನು (ರಾಬ್ರಿ ದೇವಿ) ಮುಖ್ಯಮಂತ್ರಿ ಖುರ್ಚಿಯಲ್ಲಿ ಕೂರಿಸಿದರು. ಇಬ್ಬರೂ ಮಹಿಳೆಯರ ಅಭಿವೃದ್ಧಿಗ ಸಂಬಂಧಿಸಿ ಏನನ್ನೂ ಮಾಡಲಿಲ್ಲ. ತಾವು ಅಧಿಕಾರದಲ್ಲಿದ್ದಾಗ ಮಹಿಳೆಯರನ್ನು ಕಡೆಗಣಿಸಿದವರು ಈಗ ಮಹಿಳಾ ಅಭಿವೃದ್ಧಿ ಕುರಿತು ಮಾತನಾಡುತ್ತಾರೆ," ಎಂದು ಟೀಕಿಸಿದರು. "ಬಿಹಾರ ಈಗ ಅಭಿವೃದ್ಧಿ ಹೊಂದಿದ್ದರೆ ಅದಕ್ಕೆ ಕಾರಣ ಮಹಿಳೆಯರ ಸಹಭಾಗಿತ್ವ," ಎಂದು ಹೇಳಿಕೊಂಡರು.

10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ಕೇವಲ ಭೋಗಸ್: ತೇಜಸ್ವಿ ವಿರುದ್ಧ ನಿತೀಶ್ ವಾಗ್ದಾಳಿ!
ಹಿಂದಿನ ಸರಕಾರಗಳು ಪರಿಶಿಷ್ಟರು, ಮಹಾದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿಯನ್ನೂ ಕಡೆಗಣಿಸಿತ್ತು. ತಾವು ಮುಖ್ಯಮಂತ್ರಿಯಾದ ಬಳಿಕ ಈ ಸಮುದಾಯಗಳ ಸಬಲೀಕರಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರದ ಸಹಕಾರದ ಕುರಿತು ಪ್ರಸ್ತಾಪಿಸಿದ ಅವರು, "ಕೇಂದ್ರ ಸರಕಾರವು ರಾಜ್ಯಕ್ಕೆ ಹಲವು ಬೃಹತ್‌ ಯೋಜನೆಗಳನ್ನು ಮಂಜೂರು ಮಾಡಿದೆ. ಮತ್ತೊಂದು ಅವಧಿಗೆ ಆಡಳಿತ ನಡೆಸುವ ಅವಕಾಶ ಸಿಕ್ಕರೆ ಕೇಂದ್ರದ ಸಹಕಾರದೊಂದಿಗೆ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವಾಗಿ ರೂಪಿಸುವೆ,’’ ಎಂದು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ