ಆ್ಯಪ್ನಗರ

ಬಿಗಿ ಭದ್ರತೆಯ ಮ್ಯೂಸಿಯಂನಲ್ಲಿ ಚಿನ್ನದ ಟಿಫನ್‌ ಬಾಕ್ಸ್‌ ಕಳವು

ನಗರದ ಪುರಾನಿ ಹವೇಲಿಯಲ್ಲಿರುವ ನಿಜಾಮರ ವಸ್ತುಸಂಗ್ರಹಾಲಯದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನದ ಟಿಫನ್‌ ಬಾಕ್ಸ್‌, ವಜ್ರ ಖಚಿತ ಟೀ-ಕಪ್‌, ಸಾಸರ್‌ ಮತ್ತು ಚಮಚ ಸೇರಿದಂತೆ ಒಂದಷ್ಟು ಅತ್ಯಮೂಲ್ಯ ಐತಿಹಾಸಿಕ ಕಲಾತ್ಮಕ ವಸ್ತುಗಳು ಕಳುವಾಗಿವೆ.

Vijaya Karnataka 5 Sep 2018, 11:10 am
ಹೈದರಾಬಾದ್‌: ನಗರದ ಪುರಾನಿ ಹವೇಲಿಯಲ್ಲಿರುವ ನಿಜಾಮರ ವಸ್ತುಸಂಗ್ರಹಾಲಯದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನದ ಟಿಫನ್‌ ಬಾಕ್ಸ್‌, ವಜ್ರ ಖಚಿತ ಟೀ-ಕಪ್‌, ಸಾಸರ್‌ ಮತ್ತು ಚಮಚ ಸೇರಿದಂತೆ ಒಂದಷ್ಟು ಅತ್ಯಮೂಲ್ಯ ಐತಿಹಾಸಿಕ ಕಲಾತ್ಮಕ ವಸ್ತುಗಳು ಕಳುವಾಗಿವೆ.
Vijaya Karnataka Web Gold Cup


ಶನಿವಾರ ತಡರಾತ್ರಿ ಇಲ್ಲವೇ ಭಾನುವಾರ ತಡರಾತ್ರಿ ಕಳುವಾಗಿರುವ ಸಾಧ್ಯತೆ ಇದ್ದು, ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ವಸ್ತುಸಂಗ್ರಹಾಲಯದ ಆಡಳಿತಾಧಿಕಾರಿ ಶೌಕತ್‌ ಹುಸೇನ್‌ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಾಗಿರುವ ಚಿನ್ನದ ಟಿಫಿನ್‌ ಬಾಕ್ಸ್‌ 2 ಕೆ.ಜಿ. ತೂಕದ್ದಾಗಿದೆ. ಮ್ಯೂಸಿಯಂನ ಮೊದಲ ಮಹಡಿಯ ವೆಂಟಿಲೇಟರ್‌ನ ಕಬ್ಬಿಣದ ಸಲಾಕೆ ಮುರಿದು ಕಳ್ಳರು ಒಳಪ್ರವೇಶಿಸಿದ್ದು, ಇದಕ್ಕೆ ಅವರು ಹಗ್ಗ ಬಳಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ