ಆ್ಯಪ್ನಗರ

ಭಾರತ-ಚೀನಾ ಗಡಿ ಬಿಕ್ಕಟ್ಟು: ಎಲ್‌ಎಸಿಯಿಂದ 600 ಮೀಟರ್‌ ಹಿಂದೆ ಸರಿದ ಉಭಯ ಸೇನೆಗಳು

ಪೂರ್ವ ಲಡಾಖ್‌ನಲ್ಲಿ ಭಾರತ - ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬಳಿಕ ಗಲ್ವಾನ್‌ ವ್ಯಾಲಿ, ಹಾಟ್‌ಸ್ಟ್ರಿಂಗ್ಸ್‌, ಗೋಗ್ರಾ ಪಾಯಿಂಟ್‌ ಮತ್ತು ಪಾಂಗೊಂಗ್‌ ತ್ಸೊ ನಾಲ್ಕು ಸೂಕ್ಷ್ಮ ತಾಣಗಳಿಂದ ಸೇನಾ ಪಡೆಗಳು ಹಿಂದಕ್ಕೆ ಸರಿದಿವೆ. ಆದರೆ ಉಭಯ ಕಡೆ ಯೋಧರು ಎತ್ತರದ ನೆಲೆಗಳ ಮೇಲೆ ಕುಳಿತು ಕಾವಲು ಕಾಯುವುದನ್ನು ಮುಂದುವರಿಸಿದ್ದಾರೆ.

Agencies 12 Jul 2020, 11:58 pm
ಹೊಸದಿಲ್ಲಿ: ವಾಸ್ತವ ಗಡಿ ನಿಯಂತ್ರಣ ರೇಖೆಯ ಸಂಘರ್ಷದ ನೆಲೆಗಳಿಂದ ಚೀನಾ-ಭಾರತ ಪಡೆಗಳ ವಾಪಸಾತಿ ಕಾರ್ಯ ಸಂಪೂರ್ಣಗೊಂಡಿದೆ. ಆದರೆ ಗಡಿಯಲ್ಲಿ ಘರ್ಷಣೆಯೇ ಘಟಿಸದ ರೀತಿಯಲ್ಲಿ ಬಫರ್‌ ಝೋನ್‌ ಸೃಷ್ಟಿಯಾಗಿಲ್ಲ. ಉದ್ವಿಗ್ನತೆ ತಡೆಯ ತಾತ್ಕಾಲಿಕ ಕ್ರಮವನ್ನಷ್ಟೇ ಕೈಗೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
Vijaya Karnataka Web no buffer zone on lac only suspended patrolling to avoid flareup on border
ಭಾರತ-ಚೀನಾ ಗಡಿ ಬಿಕ್ಕಟ್ಟು: ಎಲ್‌ಎಸಿಯಿಂದ 600 ಮೀಟರ್‌ ಹಿಂದೆ ಸರಿದ ಉಭಯ ಸೇನೆಗಳು


ಇತ್ತೀಚೆಗೆ ಉಭಯ ಪಡೆಗಳ ತೀವ್ರ ಮಾರಾಮಾರಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ನಾಲ್ಕು ಪೆಟ್ರೋಲಿಂಗ್‌ ಪಾಯಿಂಟ್‌ಗಳಿಂದ ಸದ್ಯಕ್ಕೆ ಸೇನಾ ತುಕಡಿಗಳು ಹಿಂದಕ್ಕೆ ಸರಿದಿವೆ. ಚೀನಾ ಸೇನೆ ಸುಮಾರು 600 ಮೀಟರ್‌ ತನ್ನ ಗಡಿಯೊಳಕ್ಕೆ ಹಿಂದೆ ಸರಿದಿದ್ದರೆ, ಭಾರತೀಯ ಯೋಧರು ಕೂಡ ಅಷ್ಟೇ ಅಂತರ ಹಿಂದಕ್ಕೆ ಬಂದಿದ್ದಾರೆ. ಈ ಮೊದಲು 1.5 ಕಿ.ಮೀ ಹಿಂದಕ್ಕೆ ಸೇನೆ ವಾಪಸಾಗಿವೆ ಎಂದು ಹೇಳಲಾಗಿತ್ತು.

''ಅದು ಸುಳ್ಳು. ಕೇವಲ 600 ಮೀಟರ್‌ ಮಾತ್ರ ಹಿಂದೆ ಸರಿದಿವೆ. ಗಡಿಯಲ್ಲಿ ಬಫರ್‌ ಝೋನ್‌ ಸೃಷ್ಟಿಯಾಗಿಲ್ಲ. ತಾತ್ಕಾಲಿಕ ಸೇನಾ ಅಮಾನತು ಮಾತ್ರ ಸಾಧ್ಯವಾಗಿದೆ. ಸೇನಾ ಸಂಘರ್ಷ ತಪ್ಪಿಸಲಷ್ಟೇ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ'' ಎಂದು ಸೇನೆಯ ಹಿರಿಯ ಕಮಾಂಡರ್‌ವೊಬ್ಬರು ಹೇಳಿದ್ದಾರೆ.

ಗಲ್ವಾನ್‌ ಕಣಿವೆಯಲ್ಲಿನ ಹೆಪ್ಪು ಕಟ್ಟುವ ಚಳಿಗೆ ಬೆಚ್ಚಿಬಿದ್ದ ಚೀನಾ ಸೇನೆ, ಸ್ಥಳ ಖಾಲಿ ಮಾಡುವ ಸಾಧ್ಯತೆ!

ಗಲ್ವಾನ್‌ ವ್ಯಾಲಿ, ಹಾಟ್‌ಸ್ಟ್ರಿಂಗ್ಸ್‌, ಗೋಗ್ರಾ ಪಾಯಿಂಟ್‌ ಮತ್ತು ಪಾಂಗೊಂಗ್‌ ತ್ಸೊ ನಾಲ್ಕು ಸೂಕ್ಷ್ಮ ತಾಣಗಳಿಂದ ಸೇನಾ ಪಡೆಗಳು ಹಿಂದಕ್ಕೆ ಸರಿದಿವೆ. ಆದರೆ ಉಭಯ ಕಡೆ ಯೋಧರು ಎತ್ತರದ ನೆಲೆಗಳ ಮೇಲೆ ಕುಳಿತು ಕಾವಲು ಕಾಯುವುದನ್ನು ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ-ಚೀನಾ ಸೇನಾ ಘರ್ಷಣೆ: ಕನಿಷ್ಠ 20 ಭಾರತೀಯ ಸೈನಿಕರು ಹುತಾತ್ಮ

ದೇಶದ ಗಡಿ ಸುರಕ್ಷಿತ
ದೇಶದ ಗಡಿಗಳು ಸಂಪೂರ್ಣ ಸುರಕ್ಷಿತವಾಗಿವೆ. ಈ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಐಟಿಬಿಪಿ ಮತ್ತು ಬಿಎಸ್‌ಎಫ್‌ ಮಹಾ ನಿರ್ದೇಶಕ ಎಸ್‌.ಎಸ್‌.ದೆಸ್ವಾಲ್‌ ಭಾನುವಾರ ಹೇಳಿದ್ದಾರೆ. ''ದೇಶದ ಸಮಗ್ರ ಭೂಪ್ರದೇಶ ನಮ್ಮ ಸುಪರ್ದಿಯಲ್ಲಿಯೇ ಇದೆ. ಭದ್ರತಾ ಪಡೆಗಳ ಶಕ್ತಿ ಮೀರಿ ಅದನ್ನು ಯಾರೂ ಅತಿಕ್ರಮಿಸಲಾರರು. ದೇಶದ ಎಲ್ಲಾ ಗಡಿ ಪ್ರದೇಶಗಳೂ ಸುರಕ್ಷಿತವಾಗಿವೆ. ಸಾರ್ವಭೌಮತೆಗೆ ಧಕ್ಕೆ ಒದಗಲು ಬಿಡುವುದಿಲ್ಲ. ನಮ್ಮ ಸೇನಾ ಪಡೆಗಳು ಸಮರ್ಥವಾಗಿವೆ,'' ಎಂದು ದೆಸ್ವಾಲ್‌ ಸುದ್ದಿಗಾರರಿಗೆ ತಿಳಿಸಿದರು.

ಚೀನಾ ವಿರುದ್ಧ ದೇಶಾದ್ಯಂತ ಆಕ್ರೋಶ; ತಕ್ಕ ಪಾಠ ಕಲಿಸಲು ವಿಪಕ್ಷಗಳ ಒತ್ತಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ