ಆ್ಯಪ್ನಗರ

ದಿಲ್ಲಿಯಲ್ಲಿ ದಿನಕ್ಕೆ 11 ಮಹಿಳೆಯರು ನಾಪತ್ತೆ: ಆರ್‌ಟಿಐ

ಕಳೆದ ವರ್ಷ ಕೇವಲ ದಿಲ್ಲಿ ನಗರವೊಂದರಲ್ಲೇ ದಿನಕ್ಕೆ 11 ಮಹಿಳೆಯರ ಅಪಹರಣ ಅಥವಾ ಕಾಣೆಯಾಗುವ ಪ್ರಕರಣ ದಾಖಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದ್ದು ಎಲ್ಲರನ್ನೂ ಬೆಚ್ಚಿಬೀಳಿಸುವಂತೆದೆ.

Indiatimes 24 Nov 2017, 4:39 pm
ಹೊಸದಿಲ್ಲಿ: ಕಳೆದ ವರ್ಷ ದಿಲ್ಲಿ ನಗರವೊಂದರಲ್ಲೇ ದಿನಕ್ಕೆ 11 ಮಹಿಳೆಯರ ಅಪಹರಣ ಅಥವಾ ಕಾಣೆಯಾಗುವ ಪ್ರಕರಣ ದಾಖಲಾಗಿದೆಯೆಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸುವಂತೆದೆ.
Vijaya Karnataka Web no country for women 11 women kidnapped or abducted every day in delhi in 2016 reveals rti
ದಿಲ್ಲಿಯಲ್ಲಿ ದಿನಕ್ಕೆ 11 ಮಹಿಳೆಯರು ನಾಪತ್ತೆ: ಆರ್‌ಟಿಐ


ಪ್ರಜಾ ಫೌಂಡೇಶನ್‌ ನೀಡಿರುವ ಮಾಹಿತಿಗಳ ಪ್ರಕಾರ, 2016ರಲ್ಲಿ ದಿಲ್ಲಿಯಲ್ಲಿ ದಾಖಲಾಗಿರುವ ಅಪಹರಣ ಮತ್ತು ನಾಪತ್ತೆ ಪ್ರಕರಣದಲ್ಲಿ ಶೇ50ಕ್ಕೂ ಅಧಿಕ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿದ್ದೇ ಆಗಿದ್ದು, ಒಟ್ಟಾರೆ ದಾಖಲಾಗಿದ್ದ 6707 ಅಪಹರಣ ಪ್ರಕರಣದಲ್ಲಿ 4,101 ಪ್ರಕರಣಗಳಲ್ಲಿ ಮಹಿಳೆಯರೇ ಸಂತ್ರಸ್ಥರಾಗಿದ್ದಾರೆ.

'ಕಳೆದ ವರ್ಷ 699 ಅಪಹರಣ ಪ್ರಕರಣ ದಾಖಲಾಗಿತ್ತು, ಇದರಲ್ಲಿ 524 ಪ್ರಕರದಲ್ಲಿ ಮಹಿಳೆಯರೇ ಬಲಿಪಶುಗಳಾಗಿದ್ದಾರೆ, ಶೇ.75 ಪ್ರಕರಣಗಳನ್ನು ಮಹಿಳೆಯರಿಗೆ ಸಂಬಂಧಿಸಿದ್ದೇ ಆಗಿವೆ' ಎಂದು ಎನ್‌ಜಿಒ ಹೇಳಿಕೊಂಡಿದೆ.

2015ರಲ್ಲಿ ದಿಲ್ಲಿಯಲ್ಲಿ 7937 ಅಪಹರಣ ಪ್ರಕರಣ ದಾಖಲಾಗಿತ್ತು. ಇದರಲ್ಲಿ 792 ಪ್ರಕರಣ ಮಹಿಳೆಯರಿಗೇ ಸಂಬಂಧಿಸಿದ್ದು, ಆದರೆ ಕಳೆದ ವರ್ಷ ಅಪಹರಣ ಪ್ರಕರಣ ದಾಖಲೆ ಕಡಿಮೆಯಾಗಿದ್ದರೂ ಮಹಿಳೆಯರ ಅಪಹರಣ ವಿಚಾರದಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ ಎಂದು ಎನ್‌ಜಿಒ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ