ಆ್ಯಪ್ನಗರ

ಶಿವಸೇನೆ ಜತೆ ಮತ್ತೆ ಮೈತ್ರಿ ಇಲ್ಲವೆಂದ ದೇವೇಂದ್ರ ಫಡ್ನವಿಸ್‌, ರಾವತ್‌ ಜೊತೆಗಿನ ಭೇಟಿಗೆ ಸ್ಪಷ್ಟನೆ!

​​ಶನಿವಾರ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರು ಫಡ್ನವಿಸ್‌ರನ್ನು ಭೇಟಿ ಮಾಡಿದ್ದರು. ಇಬ್ಬರ ನಡುವೆ ದೀರ್ಘ ಮಾತುಕತೆ ನಡೆದಿತ್ತು. ಆ ಬಳಿಕ ಮೈತ್ರಿ ಸರಕಾರ ಉರುಳಿಸುವ ಸಂಚು ನಡೆದಿದೆ, ಪುನಃ ಬಿಜೆಪಿ-ಶಿವಸೇನೆ ಜತೆಗೂಡಿ ಸರಕಾರ ರಚಿಸಲಿವೆ ಎಂಬ ವದಂತಿ ಹರಿದಾಡಿದೆ.

Vijaya Karnataka Web 28 Sep 2020, 6:58 am
ಮುಂಬಯಿ: ರಾಜ್ಯದಲ್ಲಿಆಡಳಿತ ನಡೆಸುತ್ತಿರುವ ಉದ್ಧವ್‌ ಠಾಕ್ರೆ ನೇತೃತ್ವದ ಸರಕಾರ ಉರುಳಿಸುವ ಅಥವಾ ಶಿವಸೇನೆ ಜತೆಗೆ ಮತ್ತೆ ಕೈಜೋಡಿಸಿ ಸರಕಾರ ರಚಿಸುವಂತಹ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲಎಂದು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಭಾನುವಾರ ಸ್ಪಷ್ಟಪಡಿಸಿದ್ದಾರೆ.
Vijaya Karnataka Web Devendra Fadnavis
Devendra Fadnavis (L), Sanjay Raut


ಶನಿವಾರ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರು ಫಡ್ನವಿಸ್‌ರನ್ನು ಭೇಟಿ ಮಾಡಿದ್ದರು. ಇಬ್ಬರ ನಡುವೆ ದೀರ್ಘ ಮಾತುಕತೆ ನಡೆದಿತ್ತು. ಆ ಬಳಿಕ ಮೈತ್ರಿ ಸರಕಾರ ಉರುಳಿಸುವ ಸಂಚು ನಡೆದಿದೆ, ಪುನಃ ಬಿಜೆಪಿ-ಶಿವಸೇನೆ ಜತೆಗೂಡಿ ಸರಕಾರ ರಚಿಸಲಿವೆ ಎಂಬ ವದಂತಿ ಹರಿದಾಡಿದೆ.

ಅದಕ್ಕೆ ಸ್ಪಷ್ಟನೆ ನೀಡಿರುವ ಫಡ್ನವಿಸ್‌, ''ಮತ್ತೆ ಶಿವಸೇನೆ ಜತೆ ಮೈತ್ರಿ ಸದ್ಯಕ್ಕಂತೂ ಅಸಾಧ್ಯ,'' ಎಂದು ತಿಳಿಸಿದ್ದಾರೆ.''ರಾಜಕೀಯ ಉದ್ದೇಶದಿಂದ ರಾವತ್‌ ನನ್ನನ್ನು ಭೇಟಿ ಮಾಡಿರಲಿಲ್ಲ. ಅವರು ಶಿವಸೇನೆ ಮುಖವಾಣಿ 'ಸಾಮ್ನಾ'ಗಾಗಿ ಸಂದರ್ಶನ ನೀಡುವಂತೆ ಕೇಳಲು ಬಂದಿದ್ದರು.

ಮುಂಬೈನ ಸ್ಟಾರ್‌ ಹೋಟೆಲ್‌ನಲ್ಲಿ ಫಡ್ನವೀಸ್-ರಾವತ್ ಭೇಟಿ: 'ಪರ್ಸನಲ್ ಟಾಕ್ಸ್' ಎಂದ ಬಿಜೆಪಿ!

ಕೆಲವು ಷರತ್ತುಗಳನ್ನು ವಿಧಿಸಿ ಸಂದರ್ಶನಕ್ಕೆ ಒಪ್ಪಿಗೆ ಸೂಚಿಸಿದ್ದೇನೆ. ಆದರೆ ಇದನ್ನೇ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ,'' ಎಂದು ಫಡ್ನವಿಸ್‌ ತಿಳಿಸಿದ್ದಾರೆ. ಇನ್ನು ರಾವತ್‌ ಮತ್ತು ಫಡ್ನವಿಸ್‌ ಭೇಟಿ ಬೆನ್ನಲ್ಲೆ ಸದ್ಯ ಮೈತ್ರಿ ಸರಕಾರ ನಡೆಸುತ್ತಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಭೇಟಿ ನಡೆಸಿರುವುದು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ