ಆ್ಯಪ್ನಗರ

ಖಾತೆ ಹಂಚಿಕೆ ಸೋಮವಾರಕ್ಕೆ ಪೂರ್ಣ: ಮಹಾ ಖಾತೆಗಳು ಯಾರಿಗೆ?

ಸರಕಾರ ರಚಿಸಿ ತಿಂಗಳಾದರೂ ಸಂಪುಟ ರಚಿಸುವ ಹಂಗಾಮಕ್ಕೆ ಮಹಾ ಮೈತ್ರಿ ಸರಕಾರ ಮುಂದಾಗಲೇ ಇರಲಿಲ್ಲ. ಇದೀಗ ಸಂಪುಟ ವಿಸ್ತರಣೆ ಮಾಡಿರುವ ಶಿವಸೇನೆ ನೇತೃತ್ವದ ಮೈತ್ರಿ ಸರಕಾರ, ಇದೀಗ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲು ಮುಂದಾಗಿದೆ.

Times Now 4 Jan 2020, 7:15 pm
ಮುಂಬಯಿ: ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ವಿಧವಾದ ಆಂತರಿಕ ಕಲಹಗಳಿಲ್ಲ ಎಂದು ಎನ್‌ಸಿಬಿ ನವಾಬ್‌ ಮಲಿಕ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web NCP


ಶಿವ ಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿಯಲ್ಲಿ ಹೊಸ ಖಾತೆಗಳ ಹಂಚಿಕೆಯ ವಿಚಾರದಲ್ಲಿ ಗೊಂದಲಗಳಿಲ್ಲ. ಯಾರಿಗೆ ಯಾವ ಖಾತೆ ಎಂಬ ವಿಚಾರದಲ್ಲಿ ವಿಚಾರ ವಿಮರ್ಶೆ ನಡೆಯುತ್ತಿದೆ. ಜ.6 ರೊಳಗಾಗಿ ಖಾತೆಗಳ ಹಂಚಿಕೆ ಕಾರ್ಯ ಪೂರ್ಣವಾಗಲಿದೆ ಎಂದು ನವಾಬ್‌ ಮಲಿಕ್‌ ಹೇಳಿದ್ದಾರೆ.

2019, ಡಿ.30 ರಂದು ಮಹಾ ಮೈತ್ರಿ ಸರಕಾರ ಸಂಪುಟ ವಿಸ್ತರಣೆ ನಡೆಸಿದ್ದು, ಎನ್‌ಸಿಪಿಯಿಂದ ಅತಿಹೆಚ್ಚು ಸಚಿವರನ್ನು ಆಯ್ಕೆ ಮಾಡಲಾಗಿತ್ತು. ಅಂತೆಯೇ ಶಿವಸೇನೆಗೆ 15, ಕಾಂಗ್ರೆಸ್‌ 12 ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗಿತ್ತು.
ಮಹಾರಾಷ್ಟ್ರದ ಒಟ್ಟಾರೆ 288 ಸ್ಥಾನಗಳ ಪೈಕಿ, ಶಿವಸೇನೆಗ 56, ಎನ್‌ಸಿಪಿ 54 ಹಾಗೂ ಕಾಂಗ್ರೆಸ್‌ 44 ಸೀಟುಗಳನ್ನು ಗಳಿಸಿತ್ತು.
ಮೂಲಗಳ ಪ್ರಕಾರ ಮಹಾ ಮೈತ್ರಿ ಸರಕಾರದಲ್ಲಿ ಗೃಹ, ಹಣಕಾಸು, ನೀರಾವರಿ, ವಸತಿ ಸಚಿವಾಲಯ ಎನ್‌ಸಿಪಿಗೆ ನೀಡುವಂತೆ ಸರಕಾರಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಇಷ್ಟೇ ಅಲ್ಲದೆ, ಖಾತೆ ಹಂಚಿಕೆಯಲ್ಲಿ ಇನ್ನಷ್ಟು ಹೆಸರುಗಳೂ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಅಂತಿಮ ಪಟ್ಟಿಗೆ ವಿಳಂಬ ಮಾಡಲಾಗುತ್ತಿದೆ ಎನ್ನಲಾಗಿದೆ.

ಎನ್‌ಸಿಪಿಯ ಅನಿಲ್‌ ದೇಶ್‌ಮುಖ್‌ ಗೃಹ ಇಲಾಖೆಯ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾಹಿತಿಯೂ ಇದ್ದು, ನಗರಾಭಿವೃದ್ಧಿಯ ಹೊಣೆಗಾರಿಕೆ ಶಿವಸೇನೆಯ ಏಕ್‌ನಾಥ್‌ ಶಿಂಧೆಗೆ ಹೆಗಲಿಗೆ, ಕೈಗಾರಿಕಾ ಇಲಾಖೆ ಶಿವಸೇನೆಯ ಸುಭಾಶ್‌ ಸೇಸಾಯಿ ಹಾಗೂ ಕಾಂಗ್ರೆಸ್‌ನ ಬಾಲಸಾಹೇಬ್‌ಗೆ ಕಂದಾಯ ಇಲಾಖೆ ಜವಾಬ್ದಾರಿ ಸಿಗಲಿದೆ ಎಂದು ತಿಳಿದು ಬಂದಿದೆ.

ಎನ್‌ಸಿಪಿಯ ದಿಲೀಪ್‌ ವಾಲ್ಸೆ ಪಾಟೀಲ್‌ ಅವರಿಗೆ ಅಬಕಾರಿ ಹಾಗೂ ಕಾರ್ಮಿಕ ಇಲಾಖೆ, ಜಿತೇಂದ್ರ ಅಹವಾದ್‌ಗೆ ವಸತಿ ಹಾಗೂ ಕಾಂಗ್ರೆಸ್‌ನ ವರ್ಷ ಗಾಯಕ್‌ವಾಡ್‌ಗೆ ವೈದ್ಯಕೀಯ ಶಿಕ್ಷಣ ಇಲಾಖೆ ದಕ್ಕಲಿದೆ. ಎನ್‌ಸಿಪಿಯ ಧನಂಜಯ್‌ ಮುಂಡೆ ಸಾಮಾಜಿಕ ನ್ಯಾಯ ಸಚಿವಾಲಯ ಹಾಗೂ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹಣಕಾಸು ಇಲಾಖೆ ನೋಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ