ಆ್ಯಪ್ನಗರ

WHO ನಿಷೇಧದ ನಡುವೆಯೂ ಭಾರತದಲ್ಲಿ ಹೈಡ್ರಾಕ್ಷಿಕ್ಲೊರೋಕ್ವಿನ್ ಬಳಕೆ ಮುಂದುವರಿಕೆ

ಹೈಡ್ರಾಕ್ಷಿಕ್ಲೊರೋಕ್ವಿನ್‌ ಮಾತ್ರೆಯ ಬಳಕೆಯನ್ನು ಭಾರತದಲ್ಲಿ ಕೊರೊನಾ ಚಿಕಿತ್ಸೆಗೆ ಮುಂದುವರೆಸಲಾಗುವುದು ಎಂದು ಐಸಿಎಂಆರ್‌ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ದೃಷ್ಟಿಯಿಂದ ಈ ಮಾತ್ರೆಯನ್ನು ಕೊರೊನಾ ಚಿಕಿತ್ಸೆಗೆ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ ಬೆನ್ನಲ್ಲಿಯೇ ಐಸಿಎಂಆರ್‌ ಈ ನಿರ್ಧಾರ ಕೈಗೊಂಡಿದೆ.

Agencies 26 May 2020, 7:50 pm
ಹೊಸದಿಲ್ಲಿ: ಹೈಡ್ರಾಕ್ಷಿಕ್ಲೊರೋಕ್ವಿನ್‌ ಮಾತ್ರೆಯ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೈಡ್ರಾಕ್ಷಿಕ್ಲೊರೋಕ್ವಿನ್‌ ಬಳಕೆಯನ್ನು ಮುಂದುವರೆಸುತ್ತೇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.
Vijaya Karnataka Web ಕೊರೊನಾ ಮಾತ್ರೆ
ಹೈಡ್ರಾಕ್ಷಿಕ್ಲೊರೋಕ್ವಿನ್


ಆರೋಗ್ಯದ ಸುರಕ್ಷತಾ ದೃಷ್ಟಿಯಿಂದ ಜಾಗತಿಕ ವರದಿಯನ್ನಾಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಹೈಡ್ರಾಕ್ಷಿಕ್ಲೊರೋಕ್ವಿನ್‌ ಮಾತ್ರೆಯನ್ನು ಕೊರೊನಾ ವೈರಸ್‌ ರೋಗಿಗಳಿಗೆ ಬಳಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ ಬೆನ್ನಲ್ಲಿಯೇ ಐಸಿಎಂಆರ್‌ನಿಂದ ಈ ಹೇಳಿಕೆ ಹೊರಹೊಮ್ಮಿದೆ.

ಕೊರೊನಾ ವೈರಸ್‌ ಇನ್ನು ಅಭಿವೃದ್ಧಿ ಹಂತದಲ್ಲಿದ್ದು, ಅದಕ್ಕೆ ಯಾಔ ಮಾತ್ರೆ ಪ್ರಭಾವ ಬೀರುತ್ತದೆ. ಯಾವ ಮಾತ್ರೆ ಪ್ರಭಾವ ಬೀರುವುದಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಬಹಳಷ್ಟಯ ಔಷಧಿಗಳು ಕೊರೊನಾ ವೈರಸ್‌ ಚಿಕಿತ್ಸೆಗಾಗಿ ಮತ್ತೆ ಅಭಿವೃದ್ಧಿಯಾಗುತ್ತಿವೆ ಎಂದು ಐಸಿಎಂಆರ್‌ ನಿರ್ದೇಶಕ ಬಲರಾಮ್‌ ಭಾರ್ಗವ ಹೇಳಿದ್ದಾರೆ.

ಕೆಲವು ಸಂದರ್ಭಗಳಲ್ಲಿ ವಾಕರಿಕೆ, ವಾಂತಿ ಹಾಗೂ ಹೃದಯ ಬಡಿತ ಹೆಚ್ಚಾಗುವುದನ್ನು ಬಿಟ್ಟರೆ ದೊಡ್ಡ ಅಡ್ಡ ಪರಿಣಾಮ ಇಲ್ಲ. ಅದಕ್ಕಾಗಿ ನಾವು ಹೈಡ್ರಾಕ್ಷಿಕ್ಲೊರೋಕ್ವಿನ್‌ ಮಾತ್ರೆಯನ್ನು ಕೊರೊನಾ ಚಿಕಿತ್ಸೆಗಾಗಿ ಮುಂದುವರೆಸುತ್ತೇವೆ ಎಂದು ಐಸಿಎಂಆರ್‌ ಜನರಲ್‌ ನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ಎಚ್ಚರ..! ಪುರುಷರಿಗಿಂತಾ ಹೆಚ್ಚಾಗಿ ಮಹಿಳೆಯರನ್ನೇ ಕಾಡುತ್ತಿದೆ ಕೊರೊನಾ ವೈರಸ್‌..!

ಹೈಡ್ರಾಕ್ಷಿಕ್ಲೊರೋಕ್ವಿನ್‌ ಮಾತ್ರೆಯನ್ನು ಆಹಾರದ ಜೊತೆ ತೆಗೆದುಕೊಳ್ಳಬೇಕು, ಬರೀ ಹೊಟ್ಟೆಯಲ್ಲಿ ತೆಗೆದುಕೊಳ್ಳಬಾರದು ಎಂದು ಸ್ಪಷ್ಟವಾಗಿ ಮಾರ್ಗಸೂಚಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಇದರ ಜೊತೆ ಚಿಕಿತ್ಸೆಯ ಸಂದರ್ಭದಲ್ಲಿ ಇಸಿಜಿ ಮಾಡಬೇಕೆಂದು ಹೇಳಲಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ.

ಸೋಂಕು ಹೆಚ್ಚುವಾಗ ಲಾಕ್‌ಡೌನ್‌ ಸಡಿಲಗೊಳಿಸಿದ ಏಕೈಕ ದೇಶ ಭಾರತ: ರಾಹುಲ್ ವಾಗ್ದಾಳಿ

ಹೈಡ್ರಾಕ್ಷಿಕ್ಲೊರೋಕ್ವಿನ್‌ ಮಾತ್ರೆಯನ್ನು ಆರೋಗ್ಯ ಸಿಬ್ಬಂದಿ ಸೇರಿ ಕೊರೊನಾ ಯುದ್ಧದಲ್ಲಿ ಮುನ್ನೆಲೆಯಲ್ಲಿ ನಿಂತು ಹೋರಾಡುತ್ತಿರುವವರಿಗೆ ಬಳಸಲಾಗುತ್ತಿದೆ. ಕೊರೊನಾ ಪರಿಸ್ಥಿತಿಯನ್ನು ವಿವರಿಸುವ ಸುದ್ದಿಗೋಷ್ಠಿಯಲ್ಲಿ ಭಾರ್ಗವ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ