ಆ್ಯಪ್ನಗರ

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ರಚನೆಗೆ ಹೊಸ ಕಾಯಿದೆ ಅನಗತ್ಯ: ಕೇಂದ್ರ ಸರ್ಕಾರ ಸ್ಪಷ್ಟನೆ

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿಗೆ ಟ್ರಸ್ಟ್‌ ರಚಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದ್ದು, ಇದಕ್ಕೆ ನೂತನ ಕಾನೂನು ರಚಿಸುವ ಅಗತ್ಯ ಇಲ್ಲಎಂದು ಕೇಂದ್ರ ಸರಕಾರದ ಗುರುವಾರ ಸ್ಪಷ್ಟಪಡಿಸಿದೆ.

Vijaya Karnataka Web 14 Nov 2019, 10:54 pm
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿಗೆ ಟ್ರಸ್ಟ್‌ ರಚಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದ್ದು, ಇದಕ್ಕೆ ನೂತನ ಕಾನೂನು ರಚಿಸುವ ಅಗತ್ಯ ಇಲ್ಲಎಂದು ಕೇಂದ್ರ ಸರಕಾರದ ಗುರುವಾರ ಸ್ಪಷ್ಟಪಡಿಸಿದೆ.
Vijaya Karnataka Web ayodya trust
ಸಾಂದರ್ಭಿಕ ಚಿತ್ರ


ಹೊಸ ಕಾಯಿದೆ ಮೂಲಕವೇ ಟ್ರಸ್ಟ್‌ ರಚನೆ ಮತ್ತು ಜಮೀನು ಹಸ್ತಾಂತರ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎನ್ನುವ ಕುರಿತು ಇತ್ತೀಚೆಗೆ ಎದ್ದಿದ್ದ ಊಹಾಪೋಹಗಳನ್ನು ಹಿರಿಯ ಅಧಿಕಾರಿಗಳು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ''ಅಯೋಧ್ಯೆ ಕಾಯಿದೆ- 1993 ಅಂತಹ ಎಲ್ಲಅಧಿಕಾರವನ್ನು ನೀಡಿದೆ. ಈ ಕಾಯಿದೆಯ ಸೆಕ್ಷನ್‌ 6ರ ಅಡಿಯಲ್ಲಿಭೂ ಸ್ವಾಧೀನಕ್ಕೂ ಅವಕಾಶ ಇದೆ. ಟ್ರಸ್ಟ್‌ ರಚನೆಗೂ ಇದೇ ಕಾಯಿದೆ ಸಾಕಾಗುತ್ತದೆ. ಮತ್ತೊಂದು ವಿಧೇಯಕ ಸಿದ್ಧಪಡಿಸಿ ಸಂಸತ್ತಿನ ಅನುಮೋದನೆ ಪಡೆಯುವ ಅಗತ್ಯ ಇಲ್ಲ,'' ಎಂದು ಅವರು ತಿಳಿಸಿದ್ದಾರೆ. ಅಯೋಧ್ಯೆ ಕಾಯಿದೆಯ ಸೆಕ್ಷನ್‌ 6 ಮತ್ತು 7ರ ಅಡಿಯಲ್ಲಿದತ್ತವಾಗಿರುವ ಅಧಿಕಾರವನ್ನು ಕಾರ್ಯರೂಪಕ್ಕೆ ತರುವ ಸೂಕ್ತ ಯೋಜನೆಯನ್ನು ಅಥವಾ ಟ್ರಸ್ಟ್‌ ಅನ್ನು ರೂಪಿಸಿ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಆ ಅನುಸಾರ ಇರುವ ಕಾಯಿದೆ ಅಡಿಯಲ್ಲಿಯೇ ಕಾರ್ಯಸಾಧ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಾಮ ಮಂದಿರ ನಿರ್ಮಾ­ಣಕ್ಕೆ ಟ್ರಸ್ಟ್‌ ರಚನೆ ಅಗತ್ಯವೇ ಇಲ್ಲ ಎಂದ ರಾಮ­ಜನ್ಮಭೂಮಿ ನ್ಯಾಸ್‌!

ಭೂಮಿ ತಿರಸ್ಕಾರಕ್ಕೆ ಸಲಹೆ: ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಅಯೋಧ್ಯೆಯಲ್ಲಿಮಸೀದಿ ನಿರ್ಮಾಣಕ್ಕೆ ನೀಡಲಿರುವ 5 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ ಸ್ವೀಕರಿಸಬಾರದು ಎಂದು ಜಮಾತೆ ಉಲೇಮಾ ಇ ಹಿಂದ್‌ ಸಂಘಟನೆಯ ಮುಖ್ಯಸ್ಥ ಮೌಲಾನ ಅರ್ಶದ್‌ ಮದನಿ ಸಲಹೆ ಮಾಡಿದ್ದಾರೆ. ''ಅಯೋಧ್ಯೆ ಭೂ ವ್ಯಾಜ್ಯ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ಪುರಾವೆ ಆಧರಿಸಿ ನೀಡಲಾಗಿದೆ. ಅದನ್ನು ಗೌರವಿಸುತ್ತೇನೆ. ಆದರೆ ಮಸೀದಿ ನಿರ್ಮಾಣಕ್ಕೆ ವಿವಾದಿತ ಸ್ಥಳದಿಂದ ಬೇರೆಡೆ 5 ಎಕರೆ ಭೂಮಿ ನೀಡಲು ಆದೇಶಿಸಲಾಗಿದೆ. ಅದನ್ನು ಸುನ್ನಿ ಮಂಡಳಿ ಒಪ್ಪಬಾರದು. ಇದು ನಮ್ಮ ಸಲಹೆ ಅಷ್ಟೇ,'' ಎಂದು ಮದನಿ ತಿಳಿಸಿದ್ದಾರೆ.

ರಾಮಮಂದಿರ ನಿರ್ಮಾಣ: ಸಕ್ರಾಂತಿಗೆ ಪೂರ್ವ ಸಿದ್ಧತೆ, ರಾಮನವಮಿಗೆ ಆರಂಭ, 2022ಕ್ಕೆ ಪೂರ್ಣ!

ಮರು ಪರಿಶೀಲನೆ ಅರ್ಜಿ ಗೊಂದಲ: ಅಯೋಧ್ಯೆ ತೀರ್ಪು ಮರು ಪರಿಶೀಲನೆ ಅರ್ಜಿ ವಿಷಯದಲ್ಲಿಮುಸ್ಲಿಂ ಮುಖಂಡರ ನಡುವೆ ಸಹಮತ ಮೂಡದೇ ಗೊಂದಲ ಸೃಷ್ಟಿಯಾಗಿದೆ. ಅರ್ಜಿ ಸಲ್ಲಿಕೆ ಕುರಿತು ಚರ್ಚಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಭಾನುವಾರ ಸಭೆ ಸೇರಲು ನಿರ್ಧರಿಸಿದ್ದು, ಈ ಕುರಿತು ಪ್ರಕರಣದ ಪ್ರಮುಖ ಕಕ್ಷಿದಾರ ಇಕ್ಬಾಲ್‌ ಅನ್ಸಾರಿ ಅವರಿಗೆ ಯಾವುದೇ ಮಾಹಿತಿ ನೀಡದೇ ಹೊರಗಿಡಲಾಗಿದೆ. ''ಬರುವ ಭಾನುವಾರ ಎಐಎಂಪಿಎಲ್‌ಬಿ ಸಭೆ ಸೇರಲು ನಿರ್ಧರಿಸಿರುವ ಬಗ್ಗೆ ತಿಳಿದಿದೆ. ನನಗೆ ಆ ಬಗ್ಗೆ ಮಂಡಳಿಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಬಂದರೂ ನಾನು ಹೋಗುವುದಿಲ್ಲ. ಮರು ಪರಿಶೀಲನೆ ಕೋರಿ ನಾನು ಅರ್ಜಿ ಸಲ್ಲಿಸುವುದಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ,'' ಎಂದು ಅನ್ಸಾರಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ