ಆ್ಯಪ್ನಗರ

ಮಗನಷ್ಟು ಮೋಸ ಮತ್ಯಾರು ಮಾಡಿಲ್ಲ: ಮುಲಾಯಂ ಸಿಂಗ್‌

ಅಖಿಲೇಶ್‌ ತನಗೆ ಮಾಡಿದ ಅವಮಾನ ಮತ್ತು ದ್ರೋಹ ಎಂದೂ ಮರೆಯಲು ಸಾಧ್ಯವಿಲ್ ಎಂದು ಮುಲಾಯಂ ಸಿಂಗ್‌ ಯಾದವ್‌ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 1 Apr 2017, 8:09 pm
ಲಖನೌ: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಮಗ ಅಖಿಲೇಶ್ ಯಾದವ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಬೀದಿಗೆ ಬಂದಿದ್ದು, ಅಖಿಲೇಶ್‌ ತನಗೆ ಮಾಡಿದ ಅವಮಾನ ಮತ್ತು ದ್ರೋಹ ಎಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
Vijaya Karnataka Web no one has humiliated me as much as akhilesh mulayam yadav says
ಮಗನಷ್ಟು ಮೋಸ ಮತ್ಯಾರು ಮಾಡಿಲ್ಲ: ಮುಲಾಯಂ ಸಿಂಗ್‌


'ನಾನು ಮೂರು ಬಾರಿ ಸತತ ಮುಖ್ಯಮಂತ್ರಿಯಾಗಿದ್ದೆ, ಅಲ್ಲದೇ ರಾಜಕೀಯದಲ್ಲಿ ಸಕ್ರಿಯವಾಗಿದ್ದುಕೊಂಡೇ ತನ್ನ ಮಗನಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಇತಿಹಾಸವಿಲ್ಲ.ಆದರೆ ಅಖಿಲೇಶ್ ಯಾದವ್ ನನಗೆ ಯಾರೂ ಮಾಡದ ರೀತಿಯಲ್ಲಿ ಅವಮಾನ ಮಾಡಿದ್ದಾರೆ' ಎಂದು ಮುಲಾಯಂ ತಮಗಾದ ಅವಮಾನವನ್ನು ಜನರ ಮುಂದೆ ಹೇಳಿಕೊಂಡಿದ್ದಾರೆ.

'ನನಗೆ ಅಖಿಲೇಶ್ ಯಾದವ್ ಮಾಡಿರುವಷ್ಟು ಅವಮಾನವನ್ನು ಬೇರೆ ಯಾರೂ ಮಾಡಿಲ್ಲ. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಉ.ಪ್ರದೇಶ ಚುನಾವಣೆ ಸಮಯದಲ್ಲಿ ತಂದೆಗೆ ಅವಮಾನ ಮಾಡಿದವರು ರಾಜ್ಯದ ಜನತೆಗೆ ಹೇಗೆ ನಿಷ್ಠರಾಗಿರುತ್ತಾರೆ, ಎಂದು ಪ್ರಶ್ನಿಸಿದ್ದರು. ಹೀಗಾಗಿ ಜನರೂ ಕೂಡಾ ಇದನ್ನೇ ಒಪ್ಪಿಕೊಂಡು ಬಿಜೆಪಿಯನ್ನು ಗೆಲ್ಲಿಸಿದ್ದಾರೆ' ಎಂದು ಸಿಂಗ್‌ ಹೇಳಿದರು.

ಮೋದಿಯ ಪ್ರಶ್ನೆಯನ್ನೇ ಮರು ಪ್ರಶ್ನಿಸಿದ ಮುಲಾಯಾಂ, 'ಮೋದಿ ಹೇಳಿರುವುದು ಸರಿಯಾಗಿದೆ. ತಂದೆಗೇ ಅವಮಾನ ಮಾಡಿದವರು ಉಳಿದವರಿಗೆ ನಿಷ್ಠರಾಗಿರುವುದಕ್ಕೆ ಹೇಗೆ ಸಾಧ್ಯ? ಎಂದು ಕೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ