ಆ್ಯಪ್ನಗರ

ಲಾಭ ಪಡೆಯುವ ಹುನ್ನಾರ: ಬಾರ್‌ ಕೌನ್ಸಿಲ್‌ ಎಚ್ಚರಿಕೆ

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಂಡೆದ್ದಿರುವ ಪರಿಸ್ಥಿತಿಯ ಲಾಭ ಪಡೆಯುವ ಯತ್ನ ನಡೆಸದಂತೆ ಭಾರತೀಯ ಬಾರ್‌ ಕೌನ್ಸಿಲ್‌ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಎಚ್ಚರಿಕೆ ನೀಡಿದೆ.

Vijaya Karnataka Web 14 Jan 2018, 8:03 am

ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಂಡೆದ್ದಿರುವ ಪರಿಸ್ಥಿತಿಯ ಲಾಭ ಪಡೆಯುವ ಯತ್ನ ನಡೆಸದಂತೆ ಭಾರತೀಯ ಬಾರ್‌ ಕೌನ್ಸಿಲ್‌ ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ಎಚ್ಚರಿಕೆ ನೀಡಿದೆ.

ನ್ಯಾಯಾಂಗದೊಳಗಿನ ಈ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಬಾರ್‌ ಕೌನ್ಸಿಲ್‌ನ ಏಳು ಮಂದಿ ಸದಸ್ಯರ ತಂಡ ಉನ್ನತ ಐವರು ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಉಳಿದವರ ಜತೆ ಚರ್ಚೆ ನಡೆಸಲಿದೆ ಎಂದು ಪ್ರಕಟಿಸಿತು.

17 ಸದಸ್ಯರ ಬಾರ್‌ ಕೌನ್ಸಿಲ್‌ನ ತುರ್ತು ಸಭೆ ಶನಿವಾರ ನಡೆದಿದ್ದು, ಬಳಿಕ ಮಾತನಾಡಿದ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು, ಭಾನುವಾರವೇ ಸಭೆ ಎಲ್ಲ ನ್ಯಾಯಮೂರ್ತಿಗಳ ಜತೆ ಮಾತನಾಡುವುದಾಗಿ ಹೇಳಿದರು. ಅವರ ಜತೆಗಿನ ಮಾತುಕತೆಯ ನಂತರ ಉಳಿದ ಐವರು ಹಿರಿಯ ನ್ಯಾಯಮೂರ್ತಿಗಳ ಜತೆ ಚರ್ಚಿಸುವುದಾಗಿ ಹೇಳಿದರು.

ಬಿಸಿಐ ಅಭಿಪ್ರಾಯವೇನು?

* ನ್ಯಾಯಮೂರ್ತಿಗಳು ಎತ್ತಿದ ಅಂಶಗಳು ತುಂಬ ಪ್ರಾಮುಖ್ಯತೆ ಹೊಂದಿವೆ. ಇವುಗಳನ್ನು ಜಾಗರೂಕತೆಯಿಂದ ಗಮನಿಸಬೇಕು.

* ಕೇಸುಗಳ ಹಂಚಿಕೆ ವಿವಾದವನ್ನು ಆಂತರಿಕ ವ್ಯವಸ್ಥೆ ಮೂಲಕ ಸರಿಪಡಿಸಿಕೊಳ್ಳಬೇಕು, ಸಾರ್ವಜನಿಕವಾಗಿ ಅಭಿಪ್ರಾಯ ಮಂಡಿಸಬಾರದು.

* ಸುಪ್ರೀಂಕೋರ್ಟ್‌ನ ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂಬ ಕೇಂದ್ರದ ನಿಲುವಿಗೆ ಸ್ವಾಗತ.

ಸಾಂವಿಧಾನಿಕ ಬಿಕ್ಕಟ್ಟು ಇಲ್ಲ: ನ್ಯಾಯಮೂರ್ತಿಗಳ ಸ್ಪಷ್ಟನೆ

ಕೊಚ್ಚಿ/ಕೋಲ್ಕೊತಾ: 'ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿಲ್ಲ. ಸಮಸ್ಯೆ ಪರಿಹಾರಕ್ಕೆ ಹೊರಗಿನವರ ಮಧ್ಯಪ್ರವೇಶ ಅಗತ್ಯವಿಲ್ಲ,' ಎಂದು ಬಹಿರಂಗ ಬಂಡಾಯ ಸಾರಿದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಜಸ್ಟೀಸ್‌ ಕುರಿಯನ್‌ ಜೋಸೆಫ್‌ ಸ್ಪಷ್ಟಪಡಿಸಿದ್ದಾರೆ. ''ಸಿಜೆಐ ಅವರು ಸಂವಿಧಾನ ಉಲ್ಲಂಘಿಸಿಲ್ಲ. ನಿಯಮ ಪಾಲನೆ ಮಾಡಬೇಕು ಅಷ್ಟೆ,'' ಎಂದು ಜೋಸೆಫ್‌ ಹೇಳಿದರು. ಇದಕ್ಕೆ ಇನ್ನೊಬ್ಬ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಸಹಮತ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ