ಆ್ಯಪ್ನಗರ

ನಾನಾ ವಿರುದ್ಧದ ಆರೋಪ ಸುಳ್ಳು

2008ರಲ್ಲಿ 'ಹಾರ್ನ್‌ ಓಕೆ ಪ್ಲೀಸ್‌' ಚಿತ್ರದ ಶೂಟಿಂಗ್‌ ವೇಳೆ ನಾನಾ ಪಾಟೇಕರ್‌ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ಚಿತ್ರೀಕರಣದ ವೇಳೆ ಪಾಟೇಕರ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ತನುಶ್ರಿ ದತ್ತಾ ಅವರು ಕೆಲದಿನಗಳ ಹಿಂದೆ ಆರೋಪಿಸಿದ್ದರು.

Agencies 14 Jun 2019, 5:00 am
ಮುಂಬಯಿ: ಬಾಲಿವುಡ್‌ ನಟ ನಾನಾ ಪಾಟೇಕರ್‌ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿರುವ ಲೈಂಗಿಕ ಕಿರುಕುಳದ ಆರೋಪದಲ್ಲಿ ಹುರುಳಿಲ್ಲ ಎಂದು ಮುಂಬಯಿ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. 2008ರಲ್ಲಿ 'ಹಾರ್ನ್‌ ಓಕೆ ಪ್ಲೀಸ್‌' ಚಿತ್ರದ ಶೂಟಿಂಗ್‌ ವೇಳೆ ನಾನಾ ಪಾಟೇಕರ್‌ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ ಎಂದು ಚಿತ್ರೀಕರಣದ ವೇಳೆ ಪಾಟೇಕರ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ತನುಶ್ರಿ ದತ್ತಾ ಅವರು ಕೆಲದಿನಗಳ ಹಿಂದೆ ಆರೋಪಿಸಿದ್ದರು. ಅಲ್ಲದೇ ಪೊಲೀಸ್‌ ದೂರು ಸಹ ದಾಖಲಿಸಿದ್ದರು. ಇದು ದೇಶಾದ್ಯಂತ ಸುದ್ದಿಯಾಗಿತ್ತು. ಪೊಲೀಸರ ವರದಿಯನ್ನು ಒಪ್ಪಿದ ನ್ಯಾಯಾಲಯವು, ಆರೋಪಿ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಕಾರಣ ದುರುದ್ದೇಶ ಪೂರ್ವಕವಾಗಿ ದೂರು ದಾಖಲಿಸಲಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತಲ್ಲದೇ ತನುಶ್ರೀ ದತ್ತಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ