ಆ್ಯಪ್ನಗರ

ಗೋವಾ ಬೀಚ್‌ಗಳಲ್ಲಿ ‘ನೋ ಸೆಲ್ಫಿ’ ವಲಯ

ರಾಜ್ಯದ ಬೀಚ್‌ಗಳಲ್ಲಿ ಸೆಲ್ಫಿ ಸಂಬಂಧ ಸಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ತಾಣಗಳನ್ನು ಗುರುತಿಸಲು ಗೋವಾ ಸರಕಾರ ನೇಮಕ ಮಾಡಿದ್ದ ಖಾಸಗಿ ಸಂಸ್ಥೆಯು 'ನೋ ಸೆಲ್ಫಿ' ವಲಯಗಳನ್ನು ಪಟ್ಟಿ ಮಾಡಿದೆ.

Vijaya Karnataka 24 Jun 2018, 8:50 am
ಪಣಜಿ: ರಾಜ್ಯದ ಬೀಚ್‌ಗಳಲ್ಲಿ ಸೆಲ್ಫಿ ಸಂಬಂಧ ಸಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ತಾಣಗಳನ್ನು ಗುರುತಿಸಲು ಗೋವಾ ಸರಕಾರ ನೇಮಕ ಮಾಡಿದ್ದ ಖಾಸಗಿ ಸಂಸ್ಥೆಯು 'ನೋ ಸೆಲ್ಫಿ' ವಲಯಗಳನ್ನು ಪಟ್ಟಿ ಮಾಡಿದೆ.
Vijaya Karnataka Web Goa Beach


ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಬಿದ್ದು ಸಾಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೀವರಕ್ಷಕ ಸಂಸ್ಥೆ ಗೋವಾ ಕರಾವಳಿಯ ಬೀಚ್‌ಗಳಲ್ಲಿ ಅಲ್ಲಲ್ಲಿ ಕೆಂಪು ಧ್ವಜ ನೆಟ್ಟು 'ನೋ ಸ್ವಿಮ್‌' (ಈಜು ನಿರ್ಬಂಧ) ವಲಯಗಳನ್ನು ಈಗಾಗಲೇ ಘೋಷಣೆ ಮಾಡಿದೆ.

''ನೊ ಸೆಲ್ಫಿ ವಲಯಗಳಲ್ಲಿ ಜೀವರಕ್ಷಕರು ಮಳೆಗಾಲದಾದ್ಯಂತ ಪ್ರತಿದಿನ ಬೆಳಗ್ಗೆ 7.30ರಿಂದ ಸಂಜೆ 6ರ ತನಕ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ ಮತ್ತು ವಾತಾವರಣದ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಇದರ ಜತೆಗೆ, ಇಬ್ಬರು ದೃಷ್ಟಿ ಲೈಫ್‌ಗಾರ್ಡ್‌ಗಳು ರಾತ್ರಿ 8 ಗಂಟೆ ತನಕ ಪ್ರತಿಯೊಂದು ಲೈಫ್‌ಗಾರ್ಡ್‌ ಗೋಪುರದಲ್ಲಿದ್ದುಕೊಂಡು ತುರ್ತು ಸ್ಥಿತಿಗಳಲ್ಲಿ ನೆರವಿಗೆ ಧಾವಿಸುತ್ತಾರೆ. ಸೂರ್ಯಾಸ್ತದ ಬಳಿಕ ಅಂದರೆ ಸಂಜೆ 6ರಿಂದ ಮಧ್ಯರಾತ್ರಿ 12ವರೆಗೆ ಕಡಲತೀರ ಸುರಕ್ಷತಾ ಪಡೆ ಬೀಚ್‌ಗಳಲ್ಲಿ ಗಸ್ತು ತಿರುಗುತ್ತಿರುತ್ತದೆ,'' ಎಂದು ಸರಕಾರ ನೇಮಕ ಮಾಡಿದ್ದ ದೃಷ್ಟಿ ಮರೀನ್‌ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ರವಿಶಂಕರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ನೋ ಸೆಲ್ಫಿ ವಲಯ?


ಉತ್ತರ ಗೋವಾ:
ಬ್ಯಾಂಬೊಲಿಂ ಮತ್ತು ಸಿರಿಡಾವೊ ನಡುವಣ ಬಾಗಾ ನದಿ, ದೋನಾ ಪೌಲಾ ಜೆಟ್ಟಿ, ಸಿಂಕ್ವೆರಿಂ ಕೋಟೆ, ಅಂಜುನಾ, ವಗಾಟರ್‌, ಮೋರ್ಜಿಂ, ಅಶ್ವೆಮ್‌, ಅರಂಬೋಲ್‌, ಕೆರಿಂ.

ದಕ್ಷಿಣ ಗೋವಾ:
ಅಗೊಂಡಾ, ಬಾಗ್‌ಮಾಲೊ, ಹೊಲ್ಯಾಂಟ್‌, ಬೈನಾ, ಜಪಾನೀಸ್‌ ಗಾರ್ಡನ್‌, ಬೆತುಲ್‌, ಕೆನಾಗ್ವಿನಿಂ, ಪಾಲೊಲೆಮ್‌, ಖೋಲಾ, ಕ್ಯಾಬೊ ಡೆ ರಾಮಾ, ಪೊಲೆಮ್‌, ಗಲ್ಜಿಬಾಗ್‌, ತಾಲ್ಪೋನಾ ಮತ್ತು ರಾಜ್‌ಬಾಗ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ