ಆ್ಯಪ್ನಗರ

ಲಾಲುಗೆ ಬೇಲ್‌ ಸಿಗೋದು ಕಷ್ಟ: ಕಾನೂನು ತಜ್ಞರು

ಮೇವು ಹಗರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್ ಎರಡನೇ ಬಾರಿಗೆ ಜೈಲು ಪಾಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.

Vijaya Karnataka Web 24 Dec 2017, 12:22 pm
ಪಟನಾ: ಮೇವು ಹಗರಣದಲ್ಲಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್ ಎರಡನೇ ಬಾರಿಗೆ ಜೈಲು ಪಾಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.
Vijaya Karnataka Web not easy for lalu to get bail now legal experts
ಲಾಲುಗೆ ಬೇಲ್‌ ಸಿಗೋದು ಕಷ್ಟ: ಕಾನೂನು ತಜ್ಞರು


1990ರ ಮಧ್ಯಭಾಗದ ಈ ಹಗರಣದಲ್ಲಿ ಲಾಲು ಪದೇ ಪದೇ ತಪ್ಪು ಎಸಗಿದ ವ್ಯಕ್ತಿ (habitual offender) ಎಂಬ ನೆಲೆಯಲ್ಲಿ ಜಾಮೀನು ದೊರೆಯುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ.

2013ರಲ್ಲಿ ಲಾಲು ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ ದಂಡ ವಿಧಿಸಲಾಗಿತ್ತು. ಚೈಬಾಸಾ ಖಜಾನೆಯಿಂದ ಅಕ್ರಮವಾಗಿ 37.5 ಕೋಟಿ ರೂ ಡ್ರಾ ಮಾಡಿಕೊಂಡ ಪ್ರಕರಣದ ಕೇಸು ಅದಾಗಿತ್ತು. (CBI Case number RC-20). ಶನಿವಾರದಂದು ಲಾಲು ಯಾದವ್‌ ಅವರಿಗೆ RC 64-(A) ಕೇಸಿನಲ್ಲಿ ಶಿಕ್ಷೆಯಾಗಿದೆ. ಇದು ದೇವಘರ್‌ ಜಿಲ್ಲಾ ಖಜಾನೆಯಿಂದ 89.27 ಲಕ್ಷ ರೂ.ಗಳನ್ನು ಅಕ್ರಮವಾಗಿ ಡ್ರಾ ಮಾಡಿಕೊಂಡ ಪ್ರಕರಣವಾಗಿದೆ. ಶಿಕ್ಷೆಯ ಪ್ರಮಾಣವನ್ನು ಜನವರಿ 3ರಂದು ಪ್ರಕಟಿಸುವುದಾಗಿ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ.

'ಪದೇ ಪದೇ ಅಪರಾಧ ಎಸಗುವ ವ್ಯಕ್ತಿಗಳಿಗೆ ಜಾಮೀನು ನೀಡುವಲ್ಲಿ ಉನ್ನತ ನ್ಯಾಯಾಲಯಗಳು ಈ ಹಿಂದೆ ಬಿಗಿ ನಿಲುವು ಅನುಸರಿಸಿವೆ. ಲಾಲು ಇದೀಗ ಎರಡನೇ ಬಾರಿಗೆ ದೋಷಿ ಎಂದು ಪರಿಗಣಿತರಾಗಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ಸಿಗುವ ಸಾಧ್ಯತೆ ದೂರವಿದೆ' ಎಂದು ಹಿರಿಯ ನ್ಯಾಯವಾದಿ ವೈ.ವಿ. ಗಿರಿ ಹೇಳುತ್ತಾರೆ. 2013ರಲ್ಲಿ ಲಾಲು ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು.

ಮೇವು ಹಗರಣದಲ್ಲಿ ಲಾಲು ವಿರುದ್ಧ ಐದು ಕೇಸುಗಳು ಜಾರ್ಖಂಡ್‌ನಲ್ಲಿ ದಾಖಲಾಗಿದ್ದರೆ, ಒಂದು ಕೇಸು ಮಾತ್ರ ಬಿಹಾರದಲ್ಲಿ ದಾಖಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ. ಈಗ ಎರಡು ಕೇಸುಗಳಲ್ಲಿ ಶಿಕ್ಷೆಯಾಗಿದ್ದು, ಇನ್ನೂ ಮೂರು ಕೇಸುಗಳು ವಿಚಾರಣೆಯ ನಾನಾ ಹಂತಗಳಲ್ಲಿವೆ ಎಂದು ಸಿಬಿಐ ಹೇಳಿದೆ.

ಡುಮ್ಕಾ ಖಜಾನೆಯಿಂದ 3.97 ಕೋಟಿ ರೂ ಅಕ್ರಮವಾಗಿ ಡ್ರಾ ಮಾಡಿಕೊಂಡ ಪ್ರಕರಣ (RC-38(A), ಚೈಬಾಸಾ ಖಜಾನೆಯಿಂದ 36 ಕೋಟಿ ಡ್ರಾ ಮಾಡಿಕೊಂಡ ಪ್ರಕರಣ (RC-68(A), ದೊರಾಂಡಾ ಖಜಾನೆಯಿಂದ 184 ಕೋಟಿ ರೂ ಅಕ್ರಮ ಡ್ರಾ ಮಾಡಿಕೊಂಡ ಪ್ರಕರಣ (RC-47(A) ಮತ್ತು ಭಾಗಲ್ಪುರ ಖಜಾನೆಯಿಂದ 45 ಲಕ್ಷ ರೂ ಅಕ್ರಮ ಡ್ರಾ ಮಾಡಿಕೊಂಡ ಪ್ರಕರಣ (RC-63) ವಿಚಾರಣೆಯ ನಾನಾ ಹಂತಗಳಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ