ಆ್ಯಪ್ನಗರ

ಪಂಚರಾಜ್ಯ ಚುನಾವಣೆಗಳಲ್ಲಿ ‘ನೋಟಾ’ ಜಾದೂ

ಮಧ್ಯಪ್ರದೇಶದ ಒಟ್ಟು ಮತ ಗಳಿಕೆಯಲ್ಲಿ ಶೇ.1.5ರಷ್ಟು ನೋಟಾ ಪಾಲಾಗಿವೆ. ಕಾಂಗ್ರೆಸ್‌ -ಬಿಜೆಪಿ ಕೂದಳೆಯ ಗೆಲುವಿನ ಅಂತರದ ಮೇಲೆ ನೋಟಾ ಸ್ಪಷ್ಟ ಪರಿಣಾಮ ಬೀರಿದೆ.

Vijaya Karnataka Web 13 Dec 2018, 5:00 am
ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಪಕ್ಷಗಳ ಗೆಲುವು ಹಾಗೂ ಸೋಲಿನಲ್ಲಿ 'ನೋಟಾ' ಮತಗಳು ಸಾಕಷ್ಟು ಪ್ರಲಬ ಪರಿಣಾಮ ಬೀರಿದವು.
Vijaya Karnataka Web nota


ಮಧ್ಯಪ್ರದೇಶದ ಒಟ್ಟು ಮತ ಗಳಿಕೆಯಲ್ಲಿ ಶೇ.1.5ರಷ್ಟು ನೋಟಾ ಪಾಲಾಗಿವೆ. ಕಾಂಗ್ರೆಸ್‌ -ಬಿಜೆಪಿ ಕೂದಳೆಯ ಗೆಲುವಿನ ಅಂತರದ ಮೇಲೆ ನೋಟಾ ಸ್ಪಷ್ಟ ಪರಿಣಾಮ ಬೀರಿದೆ. ಮಧ್ಯೆಪ್ರದೇಶದಲ್ಲಿ ಬಿಜೆಪಿ ಶೇ.41.0ರಷ್ಟು ಮತ ಗಳಿಸಿದರೆ, ಕಾಂಗ್ರೆಸ್‌ ಶೇ.40.9ರಷ್ಟು ಮತ ಪಡೆದಿದೆ. ಬಿಜೆಪಿ ಕಾಂಗ್ರೆಸ್‌ಗಿಂತ ಶೇ.0.1ರಷ್ಟು ಹೆಚ್ಚು ಮತಗಳನ್ನು ಪಡೆದರೂ ಸೋಲುಂಡಿತು. ನೋಟಾ ಮತಗಳು ಬಿಜೆಪಿ ಪರ ಬಿದ್ದಿದ್ದರೆ ಕಮಲ ಪಕ್ಷದ ನಾಲ್ಕನೇ ಅವಧಿ ಅಧಿಕಾರ ಕನಸು ಕೈಗೂಡುತ್ತಿತ್ತು.

ಮಧ್ಯಪ್ರದೇಶದಲ್ಲಿ ನೋಟಾ ಮತಗಳಿಗಿಂತ ಸಮಾಜವಾದಿ ಪಾರ್ಟಿ(ಶೇ.1.01) ಮತ್ತು ಆಮ್‌ ಆದ್ಮಿ ಪಾರ್ಟಿ(ಶೇ.0.7) ಕಡಿಮೆ ಮತ ಗಳಿಸಿವೆ.

ಐದು ರಾಜ್ಯಗಳಿಗೆ ಹೋಲಿಸಿದರೆ ಛತ್ತೀಸಗಢದಲ್ಲಿ ಅತಿ ಹೆಚ್ಚು ಅಂದರೆ, ಶೇ.2.1ರಷ್ಟು ನೋಟಾ ಮತಗಳು ಬಿದ್ದಿವೆ.

ತೆಲಂಗಾಣದಲ್ಲಿ ಶೇ.1.1ರಷ್ಟು ನೋಟಾ ಮತ ಚಲಾವಣೆಯಾಗಿವೆ.

ಮಿಜೋರಾಂನಲ್ಲಿ ಅತಿ ಕಡಿಮೆ ಅಂದರೆ, ಶೇ.0.5ರಷ್ಟು ನೋಟಾ ಚಲಾವಣೆಯಾಗಿದೆ.

......

ಕೋಟ್ಯಾಧಿಪತಿ ಶಾಸಕರು

ವಿಜೋರಾಂ ಚುನಾವಣೆಯಲ್ಲಿ ಗೆದ್ದ 40 ಶಾಸಕರ ಪೈಕಿ 36 ಶಾಸಕರು ಕೋಟ್ಯಾಧಿಪತಿಗಳು. 2013ರಲ್ಲಿ 3.10 ಕೋಟಿ ರೂ.ಇದ್ದ ಶಾಸಕರ ಸರಾಸರಿ ಆಸ್ತಿ 2018ರಲ್ಲಿ 4.84 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಕರೋಡ್‌ಪತಿಗಳಲ್ಲಿ 22 ಶಾಸಕರು ಮಿಜೋ ನ್ಯಾಷನಲ್‌ ಫ್ರಂಟ್‌ ಪಕ್ಷದವರಾಗಿದ್ದಾರೆ. 8 ಪಕ್ಷೇತರ, 5 ಕಾಂಗ್ರೆಸ್‌ ಮತ್ತು ಒಬ್ಬರು ಬಿಜೆಪಿ ಶಾಸಕರಾಗಿದ್ದಾರೆ. ನೂತನ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೂನ್ಯ.

ಸುಳ್ಳಾದ ಮತಗಟ್ಟೆ ಸಮೀಕ್ಷೆ

ಪಂಚರಾಜ್ಯ ಚುನಾವಣೆಯಲ್ಲಿ ಅನೇಕ ಮತಗಟ್ಟೆ ಸಮೀಕ್ಷೆಗಳು ಬಹುತೇಕ ನಿಜವಾಗಿದೆ. ಆದರೆ ಛತ್ತೀಸಗಢ ರಾಜ್ಯಕ್ಕೆ ಸಂಬಂಧಿಸಿದಂತೆ ಮತಗಟ್ಟೆ ಸಮೀಕ್ಷೆ ಸಂಪೂರ್ಣ ಸುಳ್ಳಾಗಿದೆ. ಇಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದಾಗಿ ಸಮೀಕ್ಷೆಗಳು ಹೇಳಿದ್ದವು. ಆದರೆ ಫಲಿತಾಂಶ ವ್ಯತಿರಿಕ್ತವಾಗಿದ್ದು, ಅಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾ ಸಮೀಕ್ಷೆಗಳು ಪಕ್ಕಾ ಆಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ