ಆ್ಯಪ್ನಗರ

AI ವಿಮಾನದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟ್‌

ಏರ್‌ ಇಂಡಿಯಾ ತನ್ನ ದೇಶೀಯ ವಿಮಾನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನು ಕಾಯ್ದಿರಿಸಲಿದೆ.

ಟೈಮ್ಸ್ ಆಫ್ ಇಂಡಿಯಾ 12 Jan 2017, 3:21 pm
ಹೊಸದಿಲ್ಲಿ: ಏರ್‌ ಇಂಡಿಯಾ ತನ್ನ ದೇಶೀಯ ವಿಮಾನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನು ಕಾಯ್ದಿರಿಸಲಿದೆ.
Vijaya Karnataka Web now air india to reserve seats for women on domestic flights
AI ವಿಮಾನದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸೀಟ್‌


ಜನವರಿ 18ರಿಂದ ಎಲ್ಲ ದೇಶೀಯ ವಿಮಾನಗಳಲ್ಲಿ 6 ಸೀಟ್‌ಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಲಾಗುವುದು. ವಿಮಾನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಆಸನಗಳನ್ನು ಕಾಯ್ದಿರಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ದೇಶದಲ್ಲಿ ದೂರ ಪ್ರಯಾಣದ ರೈಲು, ಮೆಟ್ರೊ ಹಾಗೂ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಇದೆ. ರೈಲುಗಳಲ್ಲಿ ಕೆಲವು ಬೋಗಿಗಳನ್ನೇ ಮಹಿಳೆಯರಿಗೆ ಕಾಯ್ದಿರಿಸಲಾಗಿದೆ.

ಏರ್‌ಇಂಡಿಯಾದ ಮುಂಬಯಿ-ನೆವಾರ್ಕ್‌ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಕಿರುಕುಳ ಎದುರಿಸಿದ್ದಾಗಿ ಮಹಿಳೆ ದೂರಿದ ನಂತರ ಏರ್‌ ಇಂಡಿಯಾ ಈ ಕ್ರಮಕ್ಕೆ ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ