ಆ್ಯಪ್ನಗರ

ಪುರುಷರಿಗೂ ಗರ್ಭಗುಡಿಗೆ ಪ್ರವೇಶ ನಿರ್ಬಂಧ

ಪ್ರಸಿದ್ಧ ತ್ರೈಂಬಕೇಶ್ವರ ದೇಗುಲದ ಗರ್ಭಗುಡಿ ಪ್ರವೇಶವನ್ನು ಪುರುಷರಿಗೂ ನಿರ್ಬಂಧಿಸಲಾಗಿದೆ.

ಏಜೆನ್ಸೀಸ್ 4 Apr 2016, 4:16 pm
ನಾಸಿಕ್‌: ಪ್ರಸಿದ್ಧ ತ್ರೈಂಬಕೇಶ್ವರ ದೇಗುಲದ ಗರ್ಭಗುಡಿ ಪ್ರವೇಶವನ್ನು ಪುರುಷರಿಗೂ ನಿರ್ಬಂಧಿಸಲಾಗಿದೆ.
Vijaya Karnataka Web now men too cant enter core area in trimbakeshwar temple
ಪುರುಷರಿಗೂ ಗರ್ಭಗುಡಿಗೆ ಪ್ರವೇಶ ನಿರ್ಬಂಧ


ದೇಗುಲ ಪ್ರವೇಶದ ವಿಷಯದಲ್ಲಿ ಪುರುಷರಂತೆ ಮಹಿಳೆಯರಿಗೂ ಸಮಾನ ಹಕ್ಕಿದೆ ಎಂಬ ಬಾಂಬೆ ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ತ್ರೈಂಬಕೇಶ್ವರ ದೇಗುಲದ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

'ಮಹಿಳೆ ಮತ್ತು ಪುರುಷರನ್ನು ಸಮಾನವಾಗಿ ಕಾಣಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ,'ಎಂದು ದೇವಸ್ಥಾನದ ಟ್ರಸ್ಟಿ ಲಲಿತಾ ಶಿಂದೆ ಹೇಳಿದ್ದಾರೆ.

ಹೈಕೋರ್ಟ್‌ ತೀರ್ಪಿನ ಬಳಿಕ, ಪುಣೆಯ ರಣ್‌ರಾಗಿನಿ ಭೂಮಾತಾ ಬ್ರಿಗೇಡ್‌ (ಆರ್‌ಬಿಬಿ)ನ ಸುಮಾರು 25 ಕಾರ್ಯಕರ್ತರ ಗುಂಪು ಶನಿವಾರ ಬೆಳಗ್ಗೆ ಶನಿ ದೇವಾಲಯದ ಗರ್ಭಗುಡಿಯೊಳಗೆ ನುಗ್ಗಲು ಯತ್ನಿಸಿತು. ಆದರೆ, ಸುತ್ತಮುತ್ತಲ ಗ್ರಾಮಸ್ಥರು ಮತ್ತು ದೇವಾಲಯದ ಸಿಬ್ಬಂದಿ ಅವರನ್ನು ದೇವರ ಹತ್ತಿರ ಹೋಗದಂತೆ ತಡೆದಿದ್ದರು. ಈ ಬೆಳವಣಿಗೆ ನಂತರ ತ್ರೈಂಬಕೇಶ್ವರ ದೇವಾಲಯದ ಆಡಳಿತ ಮಂಡಳಿ ಸಭೆ ಕರೆದು ಈ ನಿರ್ಧಾರ ಕೈಗೊಂಡಿದೆ.

ವೈಜ್ಞಾನಿಕ ಕಾರಣವೂ ಇದೆ:

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ತ್ರೈಂಬಕೇಶ್ವರ ದೇಗುಲದಲ್ಲಿ ಈವರೆಗೆ ಪ್ರತಿದಿನ ಬೆಳಗ್ಗೆ 6-7 ಗಂಟೆವರೆಗೆ ಶಿವಲಿಂಗ ಇರುವ ಸ್ಥಳಕ್ಕೆ ಪುರುಷರಿಗೆ ಪ್ರವೇಶ ಇತ್ತು. ಮಹಿಳೆಯರು ಹೊರಗಿನಿಂದ ದರ್ಶನ ಮಾಡಬಹುದಿತ್ತು. 'ಹೆಚ್ಚಿನ ಮಹಿಳಾ ಭಕ್ತರು ಈ ಪದ್ಧತಿ ಮುರಿಯಲು ಬಯಸುವುದಿಲ್ಲ,' ಎಂದು ಅರ್ಚಕರು ಹೇಳಿದ್ದಾರೆ. ಗರ್ಭಗುಡಿಯಲ್ಲಿರುವ ಕೆಲ ಕಿರಣಗಳು ಮಹಿಳೆಯರ ಆರೋಗ್ಯಕ್ಕೆ ಹಾನಿಕಾರಕ ಎಂಬ ವೈಜ್ಞಾನಿಕ ಕಾರಣವನ್ನೂ ಅವರು ಮುಂದಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ