ಆ್ಯಪ್ನಗರ

ಹೊಸದಲ್ಲಿಯಲ್ಲಿ ಮತ್ತೆ ಸರಿ ಬೆಸ ವಾಹನ ಸಂಖ್ಯೆ ಸಾರಿಗೆ ವ್ಯವಸ್ಥೆ

ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಮತ್ತೆ ಸರಿ ಬೆಸ ವಾಹನ ಸಂಖ್ಯೆ ನಿಯಮ ಜಾರಿಗೆ ಬರಲಿದೆ.

Vijaya Karnataka Web 13 Sep 2019, 9:29 pm
ಹೊಸದಿಲ್ಲಿ: ಕಳೆದ ಬಾರಿ ಜಾರಿಗೆ ತಂದಿದ್ದ ಸರಿ ಬೆಸ ವಾಹನ ಸಂಖ್ಯೆ ಸಾರಿಗೆ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ಹೊಸದಿಲ್ಲಿ ಸರಕಾರ ಮುಂದಾಗಿದೆ.
Vijaya Karnataka Web ಅರವಿಂದ್ ಕೇಜ್ರಿವಾಲ್‌
ಅರವಿಂದ್ ಕೇಜ್ರಿವಾಲ್‌


ಈ ವಿಷಯವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ತಿಳಿಸಿದ್ದಾರೆ.

ನವೆಂಬರ್‌ 4 ರಿಂದ 15ರ ತನಕ ದಿಲ್ಲಿಯಲ್ಲಿ ಸರಿ-ಬೆಸ ಸಂಖ್ಯೆಯ ವಾಹನ ಸಂಚಾರ ಯೋಜನೆ ಜಾರಿಗೆ ತರಲಾಗುವುದು ಎಂದು ಕೇಜ್ರಿವಾಲ್‌ ಪ್ರಕಟಟಿಸಿದರು.

ಚಳಿಗಾಲದ ಸಂದರ್ಭದಲ್ಲಿ ನೆರೆ ಹೊರೆಯ ರಾಜ್ಯಗಳಲ್ಲಿ ತ್ಯಾಜಕ್ಕೆ ಬೆಂಕಿ ಹಚ್ಚುವುದರಿಂದ ವಾಯುಮಾಲಿನ್ಯ ಹೆಚ್ಚಾಗಲಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯಡಿ ಸರಿ - ಬೆಸ ಸಂಖ್ಯೆಯ ವಾಹನಗಳು ದಿನಬಿಟ್ಟು ದಿನ ಸಂಚರಿಸಲು ಅವಕಾಶವಿರುತ್ತದೆ. ಊ ಹಿಂದೆಯೂ ಹೊಸದಿಲ್ಲಿಯಲ್ಲಿ ಈ ರೀತಿಯ ಪ್ರಯತ್ನ ಮಾಡಲಾಗಿತ್ತು.

ಹೊಸದಿಲ್ಲಿಯ ಹೊಸ ಯೋಜನೆ ಬಗ್ಗೆ ಪ್ರತಿಕ್ರಯಿಸಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ತಡೆಗೆ ಕೇಂದ್ರ ಸರಕಾರ ಈಗಾಗಲೇ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಇದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ