ಆ್ಯಪ್ನಗರ

ಮೊಸಳೆ ಬಾಯಿಂದ ಚಿಕ್ಕಪ್ಪನ ರಕ್ಷಿಸಿದ ಒಡಿಶಾ ಪೋರನಿಗೆ ಶೌರ್ಯ ಪ್ರಶಸ್ತಿ

ಮೊಸಳೆಯ ಬಾಯಿಯಿಂದ ತನ್ನ ಚಿಕ್ಕಪ್ಪನನ್ನು ರಕ್ಷಿಸಿ ಸಾಹಸ ಮೆರೆದ ಒಡಿಶಾದ 15 ವರ್ಷದ ಪೋರನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಲಭಿಸಿದೆ. ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಕಂದಿರಾ ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿ ಸೀತು ಮಲಿಕ್‌(15) ಅವರಿಗೆ 2019ರ ಜ. 23ರಂದು ಭಾರತೀಯ ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಳೆದ ಫೆ. 20ರಂದು ಸೀತು ಅವರ ಚಿಕ್ಕಪ್ಪ ಬಿನೋದ್‌ ಮಲಿಕ್‌ರನ್ನು ಸೀತು ರಕ್ಷಿಸಿದ್ದರು.

Vijaya Karnataka 14 Dec 2018, 8:59 am
ಕೇಂದ್ರಪಾರಾ: ಮೊಸಳೆಯ ಬಾಯಿಯಿಂದ ತನ್ನ ಚಿಕ್ಕಪ್ಪನನ್ನು ರಕ್ಷಿಸಿ ಸಾಹಸ ಮೆರೆದ ಒಡಿಶಾದ 15 ವರ್ಷದ ಪೋರನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಲಭಿಸಿದೆ.
Vijaya Karnataka Web national bravery award


ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಕಂದಿರಾ ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿ ಸೀತು ಮಲಿಕ್‌(15) ಅವರಿಗೆ 2019ರ ಜ. 23ರಂದು ಭಾರತೀಯ ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಳೆದ ಫೆ. 20ರಂದು ಸೀತು ಅವರ ಚಿಕ್ಕಪ್ಪ ಬಿನೋದ್‌ ಮಲಿಕ್‌ ಗ್ರಾಮದ ಕೆರೆಯಲ್ಲಿ ಈಜುತ್ತಿದ್ದಾಗ ಮೊಸಳೆ ಬಾಯಿಗೆ ಸಿಕ್ಕಿದ್ದರು. ಆಗ ಅವರು ಗಾಬರಿಯಿಂದ ಕಿರುಚಿದಾಗ ಸ್ಥಳಕ್ಕೆ ಧಾವಿಸಿದ್ದ ಸೀತು, ಬಿದಿರು ಕೋಲಿನಿಂದ ಮೊಸಳೆ ಹಣೆಗೆ ಹೊಡೆದು ಚಿಕ್ಕಪ್ಪನನ್ನು ರಕ್ಷಿಸಿದ್ದರು.

ಸೀತು ಈ ಸಾಹಸಕ್ಕೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ