ಆ್ಯಪ್ನಗರ

ಅನಿರೀಕ್ಷಿತ ಕಾರಣಗಳಿಂದಂತೆ ಗಾಂಧಿ ಸತ್ತಿದ್ದು! : ಒಡಿಶಾ ಶಾಲಾ ಕೈಪಿಡಿಯಲ್ಲಿದೆ ಈ ಹೊಸ ಮಾಹಿತಿ!

ಗಾಂಧಿ ಸತ್ತಿದ್ದು ಹೇಗೆ ಎಂಬುದು ಇಡೀ ದೇಶಕ್ಕಲ್ಲ, ಇಡೀ ವಿಶ್ವಕ್ಕೇ ತಿಳಿದಿರುವ ವಿಚಾರ. ಆದರೆ, ಒಡಿಶಾದ ಶಾಲೆಯ ಕೈಪಿಡಿಯಲ್ಲಿ ಗಾಂಧಿ ಸಾವು ಅನಿರೀಕ್ಷಿತ ಕಾರಣಗಳಿಂದ ಸಂಭವಿಸಿದ್ದು ಎಂಬ ಹೊಸ ವಿಚಾರ ತಿಳಿಸಿಸಿದೆ. ಇದೀಗ ಒಡಿಶಾ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದೆ.

TIMESOFINDIA.COM 15 Nov 2019, 4:28 pm
ಭುವನೇಶ್ವರ: ಗಾಂಧಿ ಸತ್ತಿದ್ದು ಹೇಗೆ ಎಂಬುದು ಇಡೀ ದೇಶಕ್ಕಲ್ಲ, ಇಡೀ ವಿಶ್ವಕ್ಕೇ ತಿಳಿದಿರುವ ವಿಚಾರ. ಆದರೆ, ಒಡಿಶಾದ ಶಾಲೆಯ ಕೈಪಿಡಿಯಲ್ಲಿ ಗಾಂಧಿ ಸಾವು ಅನಿರೀಕ್ಷಿತ ಕಾರಣಗಳಿಂದ ಸಂಭವಿಸಿದ್ದು ಎಂಬುದಾಗಿ ಪ್ರಕಟಗೊಂಡಿದೆ. ಇದೀಗ ವಿವಾದಕ್ಕೆ ಕಾರಣವಾಗಿದ್ದು, ಅಲ್ಲಿನ ರಾಜ್ಯ ಸರಕಾರದ ಬುಡಕ್ಕೇ ಬಂದಿದೆ.
Vijaya Karnataka Web gandhi 1
ಸಾಂದರ್ಭಿಕ ಚಿತ್ರ

ಈ ಕುರಿತು ನವೀನ್‌ ಪಾಟ್ನಾಯಕ್ ಸರ್ಕಾರ ಈ ಕೈಪಿಡಿ ಪ್ರಕಟವಾಗಿರುವುದರ ಕುರಿತು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ. ಆದರೂ ಕೂಡ ಗಾಂಧಿ ಕುರಿತು ಇಂತಹ ಗೊಂದಲ ಮೂಡಿಸುವ ಮಾಹಿತಿ ಪ್ರಕಟಿಸಿರುವುದು ಹಲವರ ಕೋಪಕ್ಕೆ ಕಾರಣವಾಗಿದೆ.

ಗಾಂಧೀಜಿ, ಸಾವರ್ಕರ್‌ ನಡುವೆ ಭಿನ್ನತೆ, ಬೆಸುಗೆಗಳ ಸಮರ

ಏನಿದು ಕೈಪಿಡಿ: ಇದೇನು ಪುಟಕಟ್ಟಲೆ ಕೈಪಿಡಿಯಲ್ಲ. ಕೇವಲ ಎರಡು ಪುಟಗಳ ಬ್ರೋಚರ್‌ ಆಗಿದ್ದು 'ನಮ್ಮ ಬಾಪೂಜಿ : ಮಿನುಗು ನೋಟ' ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಈ ಕೈಪಿಡಿಯನ್ನು ಒಡಿಶಾ ರಾಜ್ಯದ 'ಶಾಲಾ ಮತ್ತು ಸಮೂಹ ಶಿಕ್ಷಣ ಇಲಾಖೆ ಸಿದ್ದಪಡಿಸಿದೆ. 1948ರ ಜನವರಿ 30 ರಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಉಂಟಾದ ಅನಿರೀಕ್ಷಿತ ಬೆಳವಣಿಗೆಗಳಿಂದ ಗಾಂಧಿ ಸಾವಿಗೀಡಾದರು ಎಂದು ಈ ಕೈಪಿಡಿಯಲ್ಲಿ ಹೇಳಲಾಗಿದೆ.

ಹೊತ್ತಿದ ಸಾವರ್ಕರ್ ಕಿಡಿ- ಸಿದ್ದು ಮಾತು ಹಿಂಪಡೆಯಲಿ ಎಂದ ಶ್ರೀನಿವಾಸ್ ಪೂಜಾರಿ

ಈ ಕೈಪಿಡಿಯಲ್ಲಿ ಗಾಂಧಿ ಅವರ ಸಂದೇಶಗಳು, .ಗಾಂಧಿ ಮತ್ತು ಒಡಿಶಾ ನಡುವಿನ ಸಂಬಂಧಗಳ ಬಗ್ಗೆಯೂ ತಿಳಿಸಲಾಗಿದೆ. ಕಳೆದ ಅಕ್ಟೋಬರ್‌ 2ರ 150ನೇ ಗಾಂಧಿ ಜಯಂತಿಯಂದು ಒಡಿಶಾದ ಎಲ್ಲ ಸರಕಾರಿ ಶಾಲೆಗಳಿಗೆ ಈ ಕೈಪಿಡಿಯನ್ನು ವಿತರಿಸಲಾಗಿತ್ತು.

ಮಕ್ಕಳಿಗೆ ಗಾಂಧಿ ಹೇಗೆ ಸತ್ತರು, ಗಾಂಧಿ ಯಾರಿಂ ದಕೊಲೆಯಾದರು ಎಂಬ ಮಾಹಿತಿಯನ್ನು ತಿಳಿಯಬೇಕು. ಈ ಕೈಪಿಡಿ ಸಿದ್ಧಪಡಿಸುವವರ ಹಿಂದೆ ಗಾಂಧಿ ದ್ವೇಷಿಗಳ ಕೈವಾಡವಿದೆ. ಸರ್ಕಾರ ಇದಕ್ಕೆ ಕ್ಷಮೆ ಯಾಚಿಸಬೇಕು ಮತ್ತು ಕೈಪಿಡಿಯನ್ನು ಹಿಂಪಡೆಯಬೇಕು ಎಂದು ಅಲ್ಲಿನ ಕಾಂಗ್ರೆಸ್‌ ಶಾಸಕ ನರಸಿಂಗ ಮಿಶ್ರಾ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ