ಆ್ಯಪ್ನಗರ

ಸಯಾಮಿ ಅವಳಿಗಳ ಶಸ್ತ್ರ ಚಿಕಿತ್ಸೆ ಯಶಸ್ವಿ: ಭಾಗಶಃ ಬೇರ್ಪಟ್ಟ ಸಹೋದರರು

ಸಯಾಮಿ ಅವಳಿ ಸಹೋದರರನ್ನು ಬೇರ್ಪಡಿಸುವ ಪ್ರಾಥಮಿಕ ಚಿಕಿತ್ಸೆ ಯಶಸ್ವಿಯಾಗಿದೆ.

TNN 29 Aug 2017, 8:11 pm
ಹೊಸದಿಲ್ಲಿ: ಒಡಿಶಾದ ಕಂದಮಲ್‌ ಮೂಲದ ಸಯಾಮಿ ಸಹೋದರರನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
Vijaya Karnataka Web odisha twins separated partially
ಸಯಾಮಿ ಅವಳಿಗಳ ಶಸ್ತ್ರ ಚಿಕಿತ್ಸೆ ಯಶಸ್ವಿ: ಭಾಗಶಃ ಬೇರ್ಪಟ್ಟ ಸಹೋದರರು


ಅತ್ಯಂತ ಸುದೀರ್ಘವಾದ ಶಸ್ತ್ರಚಿಕಿತ್ಸೆಯನ್ನು ಹೊಸದಿಲ್ಲಿಯ ಏಮ್ಸ್‌ನ 20 ತಜ್ಞ ವೈದ್ಯರ ತಂಡ ನಡೆಸಿತು. ಜಪಾನ್‌ನಿಂದ ಆಗಮಿಸಿದ್ದ ಸ್ಪೆಷಲಿಸ್ಟ್‌ ಮಾರ್ಗದರ್ಶನದಲ್ಲಿ ಸುಮಾರು 24 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಇಬ್ಬರ ಮೆದುಳನ್ನು ಈಗ ತಾತ್ಕಾಲಿಕವಾಗಿ ಬೇರ್ಪಡಿಸಲಾಗಿದೆ. ಸದ್ಯ ಈ ಸಯಾಮಿ ಅವಳಿಗಳನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ. ಮುಂದಿನ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಮತ್ತೊಂದು ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ತಜ್ಞ ವೈದ್ಯರ ತಂಡ ತಿಳಿಸಿದೆ.

ಸೋಮವಾರ ಬೆಳಗಿನ ಜಾವ 9 ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆ ಮುಗಿದದ್ದು ಮಂಗಳವಾರ ಬೆಳಗಿನ ಜಾವ ಐದು ಗಂಟೆಗೆ.

ಒಡಿಶಾದ ಸಯಾಮಿ ಅವಳಿಗಳಾದ ಎರಡೂವರೆ ವರ್ಷದ ಜಗ ಮತ್ತು ಬಲಿಯಾ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನ್ಯೂರೋ ಸರ್ಜರಿ, ನ್ಯೂರೋ ಅನಸ್ತೇಸಿಯಾ, ಪ್ಲಾಸ್ಟಿಕ್‌ ಸರ್ಜರಿ ತಜ್ಞರು ಸೇರಿದಂತೆ 20 ತಜ್ಞ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿತು. ರಾಜ್ಯ ಹಾಗೂ ದಿಲ್ಲಿ ಸರಕಾರ ನಮ್ಮ ನೆರವಿಗೆ ಬಂದಿದೆ. ಸಕಲ ವೆಚ್ಚವನ್ನು ಭರಿಸುತ್ತಿದೆ ಎಂದು ಅವಳಿ ಮಕ್ಕಳ ತಂದೆ ಭುಯನ್ ಕನ್ಹರ್‌ ತಿಳಿಸಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹಾಗೂ ಆರೋಗ್ಯ ಸಚಿವ ಪ್ರತಾಪ್‌ ಜೆನಾ ಕೂಡ ಈ ಶಸ್ತ್ರ ಚಿಕಿತ್ಸೆ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿದ್ದು, ಸೂಕ್ತ ಮಾಹಿತಿಗಳನ್ನು ಸಕಾಲದಲ್ಲಿ ಪಡೆದುಕೊಳ್ಳುತ್ತಿದ್ದಾರೆ.

1952ರಿಂದ ಇದುವರೆಗೆ ಕೇವಲ 50 ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. 20 ವರ್ಷದ ಹಿಂದೆ ಪಟನಾದ ಸಬಾ ಮತ್ತು ಫರ್ಹಾನ್‌ ಅವಳಿ ಸಹೋದರಿಯರಿಗೆ ಶಸ್ತ್ರಚಿಕಿತ್ಸೆ ನಡೆಸಿದರೆ ಅಪಾಯ ಇದೆ ಎಂಬ ಕಾರಣಕ್ಕಾಗಿ ಅದನ್ನು ಕೈಬಿಡಲಾಗಿತ್ತು. ಇಬ್ಬರೂ ಬೇರ್ಪಡದೇ ಜೀವನ ಸಾಗಿಸುತ್ತಿದ್ದಾರೆ.

ಈ ರೀತಿಯ ಸಯಾಮಿ ಅವಳಿಗಳ ಶಸ್ತ್ರಚಿಕಿತ್ಸೆ ಯಶಸ್ವಿ ಶೇಕಡ 25ರಷ್ಟು ಮಾತ್ರ ತಜ್ಞರ ವೈದ್ಯರು ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಇತ್ತೀಚಿಗೆ 13 ವರ್ಷದ ಸಯಾಮಿ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿತ್ತು.

Odisha twins separated partially

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ