ಆ್ಯಪ್ನಗರ

6 ದಿನಗಳ ಬಳಿಕ ಪತ್ತೆಯಾದ ಕಾನೂನು ವಿದ್ಯಾರ್ಥಿನಿ, ಜಡ್ಜ್‌ಗಳ ಭೇಟಿ

ವಿದ್ಯಾರ್ಥಿನಿ ಶುಕ್ರವಾರ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾಳೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಆಕೆಯನ್ನು ತಕ್ಷಣವೇ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಮೂರ್ತಿಗಳು ಆಕೆಯೊಂದಿಗೆ ಮುಚ್ಚಿದ ಕೊಠಡಿಯಲ್ಲಿ ಸಮಾಲೋಚನೆ ನಡೆಸಿದರು

PTI 31 Aug 2019, 5:00 am
ಹೊಸದಿಲ್ಲಿ: ಕೇಂದ್ರದ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಅವರ ವಿರುದ್ಧ ಲೈಂಗಿಕ ದೌಜರ್ನ್ಯದ ಆರೋಪ ಮಾಡಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಉತ್ತರಪ್ರದೇಶದ ಶಹಜನ್‌ಪುರದ 23 ವರ್ಷದ ಕಾನೂನು ವಿದ್ಯಾರ್ಥಿನಿ ಶುಕ್ರವಾರ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾಳೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಆಕೆಯನ್ನು ತಕ್ಷಣವೇ ಕೋರ್ಟ್‌ಗೆ ಹಾಜರುಪಡಿಸಿದ್ದು, ನ್ಯಾಯಮೂರ್ತಿಗಳು ಆಕೆಯೊಂದಿಗೆ ಮುಚ್ಚಿದ ಕೊಠಡಿಯಲ್ಲಿ ಸಮಾಲೋಚನೆ ನಡೆಸಿದರು. ಇದೇ ವೇಳೆ, 6 ದಿನಗಳ ಬಳಿಕ ಸಿಕ್ಕ ಆಕೆಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪಾಲಕರು ಬಂದು ತನ್ನನ್ನು ಭೇಟಿ ಮಾಡುವವರೆಗೂ ಮನೆಗೆ ಹಿಂದಿರುಗುವುದಿಲ್ಲ ಎಂದು ಯುವತಿ ಹಠ ಹಿಡಿದ ಕಾರಣ, ಆಕೆಯ ಬೇಡಿಕೆಯನ್ನು ಮನ್ನಿಸುತ್ತಿದ್ದೇವೆ. ಉತ್ತರಪ್ರದೇಶದಿಂದ ಯುವತಿಯ ಪಾಲಕರನ್ನು ಕರೆತರುವಂತೆ ದಿಲ್ಲಿ ಪೊಲೀಸ್‌ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ನ್ಯಾ. ಆರ್‌. ಭಾನುಮತಿ ಮತ್ತು ನ್ಯಾ.ಎ.ಎಸ್‌. ಬೋಪಣ್ಣ ಅವರಿದ್ದ ನ್ಯಾಯಪೀಠ ತಿಳಿಸಿದೆ.
Vijaya Karnataka Web supreme.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ