ಆ್ಯಪ್ನಗರ

ವಿಶ್ವಸಂಸ್ಥೆ 'ವಿಶ್ವಾಸದ ಬಿಕ್ಕಟ್ಟ'ನ್ನು ಎದುರಿಸುತ್ತಿದೆ: ಪ್ರಧಾನಿ ಮೋದಿ

ಸದ್ಯದ ಜಗತ್ತಿಗೆ ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ನೀಡುವ, ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣವನ್ನು ಕೇಂದ್ರೀಕರಿಸುವ ಸುಧಾರಿತ ಬಹುಪಕ್ಷೀಯತೆಯ ಅಗತ್ಯವಿದೆ. ಇದನ್ನು ವಿಶ್ವಸಂಸ್ಥೆ ಮಾಡಬೇಕಿದೆ ಎಂದು ಇದೆ ವೇಳೆ ಪ್ರಧಾನಿ ಮೋದಿ ಪ್ರತಿಪಾದಿಸಿದರು.

Agencies 22 Sep 2020, 10:35 am
ಹೊಸದಿಲ್ಲಿ: ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆ "ವಿಶ್ವಾಸದ ಬಿಕ್ಕಟ್ಟ"ನ್ನು ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಯಲ್ಲಿ ವಿಡಿಯೋ ಮೂಲಕ ಭಾಷಣ ಮಾಡಿದ ಪ್ರಧಾನಿ ಮೋದಿ, ವಿಶ್ವಸಂಸ್ಥೆ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದರು.
Vijaya Karnataka Web EiLpRbEVoAAN-MQ


ಇನ್ನು ಸದ್ಯದ ಜಗತ್ತಿಗೆ ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ನೀಡುವ, ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣವನ್ನು ಕೇಂದ್ರೀಕರಿಸುವ ಸುಧಾರಿತ ಬಹುಪಕ್ಷೀಯತೆಯ ಅಗತ್ಯವಿದೆ. ಇದನ್ನು ವಿಶ್ವಸಂಸ್ಥೆ ಮಾಡಬೇಕಿದೆ ಎಂದು ಇದೆ ವೇಳೆ ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಇನ್ನು ನಾವು ಇಂದಿನ ಸವಾಲುಗಳನ್ನು ಹಳೆಯ ರಚನೆಗಳನ್ನು ಹಿಡಿದುಕೊಂಡು ಹೋರಾಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದ ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸ್ಥಾನಕ್ಕಾಗಿ ಮಂಡಳಿಯ ಐದು ಖಾಯಂ ಸದಸ್ಯರಲ್ಲಿ ನಾಲ್ವರಾದ ಅಮೆರಿಕ, ಬ್ರಿಟನ್‌, ಫ್ರಾನ್ಸ್ ಮತ್ತು ರಷ್ಯಾ ಬೆಂಬಲಿಸುತ್ತಿದೆ. ಅಲ್ಲದೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಭಿವಾಂಡಿ ಕಟ್ಟಡ ಕುಸಿತ: 20ಕ್ಕೇರಿದ ಮೃತರ ಸಂಖ್ಯೆ, ಮುಂದುವರಿದ ರಕ್ಷಾಣಾ ಕಾರ್ಯಾಚರಣೆ

ವಿಶ್ವಸಂಸ್ಥೆಯಂತೆ ಭಾರತವು ವಸುದೈವ ಕುಟುಂಬಕಂ ಅನ್ನು ಪ್ರತಿಬಿಂಬಿಸುತ್ತದೆ ಜಗತ್ತಿನ ಎಲ್ಲಾ ಸೃಷ್ಟಿಯನ್ನು ಒಂದೇ ಕುಟುಂಬವಾಗಿ ನೋಡುತ್ತಿದೆ ಎಂದು ತಿಳಿಸಿದರು. ವಿಶ್ವಸಂಸ್ಥೆಯಲ್ಲಿ ಭಾರತದ ತನ್ನದೆ ಆದ ಸ್ಥಾನವಿದೆ. ಉತ್ತಮ ಕಾರ್ಯಗಳ ಮೂಲಕ ಭಾರತ ಹಲವು ಬಾರಿ ವಿಶ್ವಸಂಸ್ಥೆಯ ವಿಶ್ವಾಸ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ