ಆ್ಯಪ್ನಗರ

ಆನ್‌ಲೈನ್‌ ಮಾರ್ಕೆಟಿಂಗ್‌ ಗ್ರಾಹಕ ಕಾಯಿದೆ ವ್ಯಾಪ್ತಿಗೆ

ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್‌ ಮಾರ್ಕೆಟಿಂಗ್‌ (ಇ-ಕಾಮರ್ಸ್‌) ವ್ಯವಹಾರಗಳನ್ನು ಗ್ರಾಹಕ ಕಾಯಿದೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಇದೂ ಸೇರಿದಂತೆ ಹಲವು ಹೊಸ ಪ್ರಸ್ತಾವನೆಗಳಿರುವ ಗ್ರಾಹಕ ರಕ್ಷಣಾ ವಿಧೇಯಕ 2018 ಮುಂದಿನ ಮಳೆಗಾಲದ ಸಂಸತ್‌ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.

Vijaya Karnataka 19 Jun 2018, 9:41 am
ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್‌ ಮಾರ್ಕೆಟಿಂಗ್‌ (ಇ-ಕಾಮರ್ಸ್‌) ವ್ಯವಹಾರಗಳನ್ನು ಗ್ರಾಹಕ ಕಾಯಿದೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಇದೂ ಸೇರಿದಂತೆ ಹಲವು ಹೊಸ ಪ್ರಸ್ತಾವನೆಗಳಿರುವ ಗ್ರಾಹಕ ರಕ್ಷಣಾ ವಿಧೇಯಕ 2018 ಮುಂದಿನ ಮಳೆಗಾಲದ ಸಂಸತ್‌ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ.
Vijaya Karnataka Web Laptop


ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ಖಾತೆ ಸಚಿವ ಸಿ.ಆರ್‌. ಚೌಧರಿ ಸೋಮವಾರ ಇಲ್ಲಿ ಈ ವಿಷಯ ತಿಳಿಸಿದರು. ಗ್ರಾಹಕ ರಕ್ಷಣಾ ಕಾಯಿದೆ 2016ಕ್ಕೆ ಪರಾರ‍ಯಯವಾಗಿ ಜಾರಿಗೆ ಬರಲಿರುವ ಈ ವಿಧೇಯಕವನ್ನು 2018ರ ಜನವರಿ 5ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಮಳೆಗಾಲದ ಅಧಿವೇಶನ ಜುಲೈ ಮಧ್ಯಭಾಗದಲ್ಲಿ ಆರಂಭವಾಗಲಿದೆ.

ಬಜೆಟ್‌ ಅಧಿವೇಶನದಲ್ಲಿ ನಿರಂತರ ಗದ್ದಲಗಳೇ ಇದ್ದುದರಿಂದ ಚರ್ಚೆಗೆ ಎತ್ತಿಕೊಳ್ಳಲಾಗಿರಲಿಲ್ಲ. ಈ ಬಾರಿ ಅದಕ್ಕೆ ಅನುಮೋದನೆ ಸಿಗುವಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಸಚಿವರು ತಿಳಿಸಿದರು.

ವಿಶೇಷಗಳೇನು?


ಹಾಲಿ ಕಾಯಿದೆಯಲ್ಲಿ ಆನ್‌ಲೈನ್‌ ವ್ಯವಹಾರದಿಂದ ಆಗುವ ತೊಂದರೆಗಳಿಗೆ ಯಾವುದೇ ರಕ್ಷಣೆ ಇರಲಿಲ್ಲ. ಇನ್ನು ಮುಂದೆ ಡಿಜಿಟಲ್‌ ಉತ್ಪನ್ನಗಳು ಸೇರಿದಂತೆ ಆನ್‌ಲೈನ್‌ನಲ್ಲಿ ಖರೀಸಿದ ಯಾವುದೇ ವಸ್ತುವಿನಲ್ಲಿ ಸಮಸ್ಯೆ ಕಂಡುಬಂದರೆ ಕಾನೂನಿನ ರಕ್ಷಣೆ ಸಿಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ