ಆ್ಯಪ್ನಗರ

100 ಕೋಟಿ ರೂ.ಗೂ ಅಧಿಕ ಆದಾಯ ಉಳ್ಳವರು 61 ಜನ ಮಾತ್ರ!

ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಖಾತೆಗಳಲ್ಲಿನ ಠೇವಣಿಗಳು, ಜಮೀನು, ಫ್ಲಾಟ್‌, ಜ್ಯುವೆಲ್ಲರಿ ಸೇರಿದಂತೆ ಬೇನಾಮಿ ಆಸ್ತಿಯನ್ನು 1,800 ಪ್ರಕರಗಳಲ್ಲಿ ಜಪ್ತಿ ಮಾಡಲಾಗಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪೊನ್‌ ರಾಧಾಕೃಷ್ಣನ್‌ ಮಾಹಿತಿ ನೀಡಿದ್ದಾರೆ.

Vijaya Karnataka 9 Feb 2019, 11:16 am
ಹೊಸದಿಲ್ಲಿ: 2017-18ನೇ ಅಸೆಸ್‌ಮೆಂಟ್‌ ವರ್ಷದಲ್ಲಿ ವೈಯಕ್ತಿವ ವಿಭಾಗದಲ್ಲಿ ಕೇವಲ 61 ಜನರಷ್ಟೇ ತಮಗೆ 100 ಕೋಟಿ ರೂ.ಗೂ ಅಧಿಕ ಆದಾಯವಿದೆ ಎಂದು ಘೋಷಿಸಿಕೊಂಡಿದ್ದಾರೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಗಣನೀಯ ಏರಿಕೆ ಕಂಡು ಬಂದಿದೆ. ಹಿಂದಿನ ವರ್ಷ ಕೇವಲ 38 ಜನರಷ್ಟೇ ಈ ಬಗ್ಗೆ ಘೋಷಿಸಿಕೊಂಡಿದ್ದರು.
Vijaya Karnataka Web cash


2014-15ರಲ್ಲಿ ಇಂಥ ಕುಬೇರರ ಸಂಖ್ಯೆ ಕೇವಲ 24 ಇತ್ತು. ಲೋಕಸಭೆಗೆ ಹಣಕಾಸು ಖಾತೆ ಸಹಾಯಕ ಸಚಿವ ಪೊನ್‌ ರಾಧಾಕೃಷ್ಣನ್‌ ಈ ಮಾಹಿತಿ ನೀಡಿದ್ದಾರೆ. ಶತಕೋಟ್ಯಧಿಪತಿ(ಬಿಲಿಯನೇರ್‌) ಎನ್ನುವುದಕ್ಕೆ ಅಧಿಕೃತ ಅಥವಾ ಏಕೀಕೃತ ವಿವರಣೆ ಮತ್ತು ವರ್ಗೀಕರಣ ಇಲ್ಲ ಎಂದಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಇದೇ ಖಾತೆಯ ಮತ್ತೊಬ್ಬ ಸಹಾಯಕ ಸಚಿವ ಶಿವ ಪ್ರತಾಪ್‌ ಶುಕ್ಲಾ, ಬೇನಾಮಿ ಆಸ್ತಿ ವರ್ಗಾವಣೆ ಕಾಯ್ದೆಯನ್ವಯ ಕಾಳಧನಿಕರ ವಿರುದ್ಧ ಸರಕಾರ ಕ್ರಮ ಜರುಗಿಸುತ್ತಿದೆ. 6,900 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿವೆ. 2018ರ ಡಿಸೆಂಬರ್‌ ತನಕ ಆದಾಯ ತೆರಿಗೆ ಅಧಿಕಾರಿಗಳು 2,000 ಬೇನಾಮಿ ವರ್ಗಾವಣೆಗಳನ್ನು ಗುರ್ತಿಸಿವೆ ಎಂದು ವಿವರಣೆ ನೀಡಿದ್ದಾರೆ.

ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಖಾತೆಗಳಲ್ಲಿನ ಠೇವಣಿಗಳು, ಜಮೀನು, ಫ್ಲಾಟ್‌, ಜ್ಯುವೆಲ್ಲರಿ ಸೇರಿದಂತೆ ಬೇನಾಮಿ ಆಸ್ತಿಯನ್ನು 1,800 ಪ್ರಕರಗಳಲ್ಲಿ ಜಪ್ತಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ