ಆ್ಯಪ್ನಗರ

ಅಡ್ವಾಣಿಯನ್ನು ಮರೆತ ಮೋದಿ, ಗೌರವ ಸಲ್ಲಿಸಿದ ಯೋಗಿ, ಭಾಗವತ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಮೋಹನ್‌ ಭಾಗವತ್‌ ಇಬ್ಬರೂ ಅಡ್ವಾಣಿ ಹೆಸರನ್ನು ಭಾಷಣದ ವೇಳೆ ಪ್ರಸ್ತಾಪಿಸಿ ಬಿಜೆಪಿ ಹಿರಿಯ ನಾಯಕನನ್ನು ಸ್ಮರಿಸಿದರು. ಆದರೆ ಮೋದಿ ಮಾತ್ರ ಹಾಗೆ ಮಾಡಲಿಲ್ಲ.

Agencies 5 Aug 2020, 10:17 pm

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಎಲ್‌.ಕೆ. ಅಡ್ವಾಣಿಯವರ ಹೆಸರು ಪ್ರಸ್ತಾಪಿಸದೇ ಇರುವುದು ಅಚ್ಚರಿ ಮೂಡಿಸಿದೆ. ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಮೋಹನ್‌ ಭಾಗವತ್‌ ಇಬ್ಬರೂ ಅಡ್ವಾಣಿ ಹೆಸರನ್ನು ಭಾಷಣದ ವೇಳೆ ಪ್ರಸ್ತಾಪಿಸಿ ಗೌರವ ಸಲ್ಲಿಸಿದರು.
Vijaya Karnataka Web LK Advani Narendra mOdi


ಕಾರ್ಯಕ್ರಮದಲ್ಲಿ ಮೋದಿಗಿಂತ ಮೊದಲು ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, "ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಕಾರಣಾಂತರಗಳಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ರಾಮಮಂದಿರಕ್ಕೆ ಸಂಬಂಧಿಸಿದ ಮುಂದಿನ ಕಾರ್ಯಕ್ರಮಗಳಲ್ಲಿಅವರನ್ನು ತೊಡಗಿಸಿಕೊಳ್ಳಲಾಗುವುದು,’’ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೂ ಅಡ್ವಾಣಿಯವರ ಕೊಡುಗೆ ಸ್ಮರಿಸಿಕೊಂಡರು. ಅಡ್ವಾಣಿ ಮತ್ತ ಜೋಶಿ ಇಬ್ಬರಿಗೂ ದೂರವಾಣಿ ಮೂಲಕ ಆಹ್ವಾನ ನೀಡಲಾಗಿತ್ತು ಹಾಗೂ ಇಬ್ಬರೂ ವಿಡಿಯೊ ಕಾನ್ಫರೆನ್ಸ್‌‌ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

ಕರಸೇವಕರನ್ನು ಮರೆತವರು ರಾಮದ್ರೋಹಿಗಳು - ಶಿವಸೇನೆ ಕಿಡಿ

ಆದಿತ್ಯ ಯೋಗಿನಾಥ್‌!

ಪ್ರಧಾನಿಯವರು ಯೋಗಿ ಆದಿತ್ಯನಾಥರನ್ನು ‘ಆದಿತ್ಯ ಯೋಗಿನಾಥ್‌’ ಎಂದು ಸಂಬೋಧಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಯಿತು. ‘‘ಉತ್ತರ ಪ್ರದೇಶದ ಐತಿಹಾಸಿಕ ನಗರಗಳ ಹೆಸರುಗಳನ್ನು ಯೋಗಿ ಆದಿತ್ಯನಾಥ್‌ ಬದಲಿಸಿದ್ದಾರೆ. ಈಗ ಅವರ ಹೆಸರನ್ನೇ ಪ್ರಧಾನಿಯವರು ಬದಲಿಸಿಬಿಟ್ಟಿದ್ದಾರೆ,’’ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ