ಆ್ಯಪ್ನಗರ

ಕೇವಲ ಒಂದೇ ಒಂದು ಸಹಿಯಿಂದ ವಿಧಿವಶವಾಯಿತು 370 ಕಲಂ!

ಜಮ್ಮು ಮತ್ತು ಕಾಶ್ಮೀರಕ್ಕೆ ಅಸೆಂಬ್ಲಿ ಇರುತ್ತದೆ. ಕ್ಷೇತ್ರಗಳ ಸಂಖ್ಯೆ 107ರಿಂದ 114ಕ್ಕೆ ಏರಿಕೆ. ಇದರಲ್ಲಿ 24 ಸ್ಥಾನ ತಾಂತ್ರಿಕವಾಗಿ ಪಿಒಕೆಗೆ ಮೀಸಲು, ಲಡಾಖ್‌‌ಗೆ ಸಂಸತ್ ಸ್ಥಾನ ಮಾತ್ರ , ಶಾಸಕರು ಇರುವುದಿಲ್ಲ.

Vijaya Karnataka Web 6 Aug 2019, 8:02 am
ಹೊಸದಿಲ್ಲಿ: ಕಳೆದ 72 ವರ್ಷಗಳಿಂದ ಚರ್ಚೆಯಲ್ಲಿರುವ, ಅಷ್ಟು ಸುಲಭದಲ್ಲಿ ರದ್ದು ಪಡಿಸಲಾಗದು ಎಂದೆಲ್ಲ ಹೇಳಲಾಗುತ್ತಿದ್ದ 370ನೇ ವಿಧಿ ಕೇವಲ ರಾಷ್ಟ್ರಪತಿಗಳ ಒಂದು ಸಹಿಯಿಂದ ಇತಿಹಾಸದ ಪುಟ ಸೇರಿತು.
Vijaya Karnataka Web kashmir


370ನೇ ವಿಧಿಯ ಮೂರನೇ ಅಂಶದ-370(3)ಪ್ರಕಾರ, ರಾಷ್ಟ್ರಪತಿಗಳು ಈ ವಿಧಿ ರದ್ದಾಗಿದೆ ಎಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಅಸೆಂಬ್ಲಿಯ ಅನುಮತಿಯೊಂದು ಬೇಕಷ್ಟೆ. ಈಗ ಅಲ್ಲಿರುವುದು ರಾಜ್ಯಪಾಲರ ಆಡಳಿತ. ಅದನ್ನೇ ಬಳಸಿಕೊಂಡು ಮೋದಿ-ಶಾ ಕಮಾಲ್‌ ಮಾಡಿದ್ದಾರೆ. ಇದನ್ನು ಕೇವಲ ನಿರ್ಣಯವಾಗಿ ಸಂಸತ್ತಿನ ಮುಂದೆ ಮಂಡಿಸಲಿಕ್ಕಿದೆಯೇ ಹೊರತು ವಿಧೇಯಕವಾಗಿ ಅಲ್ಲ. ಸಂಸತ್ತು ಇದಕ್ಕೆ ಒಪ್ಪಬೇಕೆಂದೂ ಇಲ್ಲ!

ಸೀಕ್ರೆಟ್‌ ಆಗಿ ನಡೆಯಿತು ಕಾಶ್ಮೀರ ಕ್ರಾಂತಿ

ಕಾಶ್ಮೀರ ಕ್ರಾಂತಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಸೂಚನೆ ಇತ್ತಾದರೂ ಏನು ಎಂಬ ಬಗ್ಗೆ ಟಾಪ್‌ ಸೀಕ್ರೆಟ್‌ ಕಾಯ್ದುಕೊಂಡಿದ್ದು ಸರಕಾರದ ಹೆಗ್ಗಳಿಕೆ. ಭಾರಿ ಪ್ರಮಾಣದ ಸೇನೆ ನಿಯೋಜನೆ, ಉಗ್ರರ ಭೀತಿ ಹೆಸರಲ್ಲಿ ಅಮರನಾಥ ಯಾತ್ರೆ ರದ್ದು.. ಹೀಗೆ ಭದ್ರತೆ ಹೆಚ್ಚಿಸಿ ಅಂತಿಮವಾಗಿ ಮಾಸ್ಟರ್‌ ಸ್ಟ್ರೋಕ್‌ ನೀಡಲಾಗಿದೆ.

ದೇಶದೆಲ್ಲೆಡೆ ಸಂಭ್ರಮ

ಕಾಶ್ಮೀರ ಕ್ರಾಂತಿ ಸಂಭವಿಸುತ್ತಿದ್ದಂತೆಯೇ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ದಿಲ್ಲಿಯಲ್ಲಿ ಕಾಶ್ಮೀರಿ ಪಂಡಿತರು ಸಂಭ್ರಮೋಲ್ಲಾಸ ಆಚರಿಸಿದರು.

ನಿನ್ನೆ (ಸೋಮವಾರ) ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದ ಜಮ್ಮು-ಕಾಶ್ಮೀರ ಪುನರ್‌ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಜಮ್ಮು-ಕಾಶ್ಮೀರ ವಿಧಾನಸಭೆ ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ವಿಧಾನಸಭೆ ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ