Please enable javascript.Terrorists,ಜಮ್ಮುನಲ್ಲಿ ಪ್ರಧಾನಿ, ಕಾಶ್ಮೀರದಲ್ಲಿ ಗುಂಡಿನ ಮಾರ್ದನಿ..! 3 ಲಷ್ಕರ್ ಉಗ್ರರು ಮಟಾಷ್..! - operation terror in pulwama jammu and kashmir: 3 lashkar terrorists killed - Vijay Karnataka

ಜಮ್ಮುನಲ್ಲಿ ಪ್ರಧಾನಿ, ಕಾಶ್ಮೀರದಲ್ಲಿ ಗುಂಡಿನ ಮಾರ್ದನಿ..! 3 ಲಷ್ಕರ್ ಉಗ್ರರು ಮಟಾಷ್..!

Authored byದಿಲೀಪ್ ಡಿ. ಆರ್. | Vijaya Karnataka Web 24 Apr 2022, 6:48 pm
Subscribe

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ನೆಲೆ ಪತ್ತೆಯಾದ ಹಿನ್ನೆಲೆಯಲ್ಲಿ, ಪೊಲೀಸರು ನಡೆಸುತ್ತಿದ್ದ ಹುಡುಕಾಟ ಕಾರ್ಯಾಚರಣೆಯು ಎನ್‌ಕೌಂಟರ್‌ ಆಗಿ ಬದಲಾಯ್ತು ಎಂದು ತಿಳಿದುಬಂದಿದೆ. ರಹಸ್ಯ ತಾಣದಲ್ಲಿ ಅಡಗಿ ಕುಳಿತಿದ್ದ ಉಗ್ರರು, ಭದ್ರತಾ ಪಡೆಗಳನ್ನು ಕಂಡ ಕೂಡಲೇ ಮೊದಲು ಗುಂಡಿನ ದಾಳಿ ನಡೆಸಿದರು. ಈ ವೇಳೆ ಪ್ರತಿ ದಾಳಿ ನಡೆಸಿದ ಭದ್ರತಾ ಪಡೆಯ ಯೋಧರು, ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಸಿದರು. ಅಂತಿಮವಾಗಿ ಉಗ್ರರನ್ನು ನಿಗ್ರಹಿಸುವಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಯಶಸ್ವಿಯಾಗಿದೆ.

ಹೈಲೈಟ್ಸ್‌:

  • ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಹೂ ಎಂಬಲ್ಲಿ ಅಡಗಿದ್ದ ಉಗ್ರರು
  • ಖಚಿತ ಮಾಹಿತಿ ಬೆನ್ನತ್ತಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ
  • ಉಗ್ರರ ಹತ್ಯೆಗೂ ಮುನ್ನ ಹಲವು ಸುತ್ತಿನ ಗುಂಡಿನ ಚಕಮಕಿ
Encounter in J-K
ಜಮ್ಮುನಲ್ಲಿ ಪ್ರಧಾನಿ, ಕಾಶ್ಮೀರದಲ್ಲಿ ಗುಂಡಿನ ಮಾರ್ದನಿ..! 3 ಲಷ್ಕರ್ ಉಗ್ರರು ಮಟಾಷ್..!
ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ದಿನವೇ ಭದ್ರತಾ ಪಡೆಗಳು ಉಗ್ರರ ವಿರುದ್ಧ ಮುಗಿಬಿದ್ದಿವೆ..! ಪುಲ್ವಾಮಾ ಜಿಲ್ಲೆಯ ಪಹೂ ಎಂಬಲ್ಲಿ ಭದ್ರತಾ ಪಡೆಗಳು ನಿಷೇಧಿತ ಲಷ್ಕರ್ - ಎ - ತೊಯ್ಬಾ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಕಳೆದ ಮೂರು ದಿನಗಳಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ನಾಲ್ಕನೇ ಎನ್‌ಕೌಂಟರ್ ಇದಾಗಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಹೂ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಬೆನ್ನತ್ತಿದ ರಕ್ಷಣಾ ಪಡೆಗಳು ಮೂವರು ಖತರ್ನಾಕ್ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಉಗ್ರರ ಹತ್ಯೆಗೂ ಮುನ್ನ ಭದ್ರತಾ ಪಡೆಗಳ ಜೊತೆ ಉಗ್ರರು ಹಲವು ಸುತ್ತಿನ ಗುಂಡಿನ ಚಕಮಕಿ ನಡೆಸಿದರು ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರ: ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಬಾಂಬ್ ಎಸೆದ ಬುರ್ಖಾಧಾರಿ ಮಹಿಳೆ!
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಏಪ್ರಿಲ್ 24 ರಂದು ಜಮ್ಮುಗೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಕೆಲವೇ ಗಂಟೆಗಳ ಮುನ್ನ ಜಮ್ಮುವಿನ ಪಲ್ಲಿ ಎಂಬ ಗ್ರಾಮದಿಂದ ಕೇವಲ 8 ಕಿ. ಮೀ. ದೂರದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿರುವ ತುರ್ತು ಕಾರ್ಯಾಚರಣೆ ಗಮನ ಸೆಳೆದಿದೆ.


ಭಾನುವಾರ ಬೆಳಗಿನ ಜಾವವೇ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ದೊಡ್ಡ ಪ್ರಮಾಣದ ಹುಡುಕಾಟ ಆರಂಭಿಸಿದ್ದವು. ಈ ಭಾಗದಲ್ಲಿ ಉಗ್ರರು ಇರುವ ಕುರಿತಾಗಿ ಬೇಹುಗಾರಿಕಾ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಈ ಕಾರ್ಯಾಚರಣೆ ಕೈಗೊಂಡಿತ್ತು.

ಕಾಶ್ಮೀರಿ ಪಂಡಿತರ ನರಮೇಧವಾದ 10 ವರ್ಷಗಳ ಬಳಿಕ ಸಿಖ್ಖರ ಹತ್ಯಾಕಾಂಡ..! ಹೆಡ್ಲಿ ಬಾಯ್ಬಿಟ್ಟ ಡೆಡ್ಲಿ ಸತ್ಯ..!
ಉಗ್ರರ ನೆಲೆ ಪತ್ತೆಯಾದ ಹಿನ್ನೆಲೆಯಲ್ಲಿ, ಈ ಹುಡುಕಾಟ ಕಾರ್ಯಾಚರಣೆಯು ಎನ್‌ಕೌಂಟರ್‌ ಆಗಿ ಬದಲಾಯ್ತು ಎಂದು ಪೊಲೀಸರು ತಿಳಿಸಿದ್ದಾರೆ. ರಹಸ್ಯ ತಾಣದಲ್ಲಿ ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದರು. ಈ ವೇಳೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆಯ ಯೋಧರು, ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಸಿದರು. ಅಂತಿಮವಾಗಿ ಉಗ್ರರನ್ನು ನಿಗ್ರಹಿಸುವಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಯಶಸ್ವಿಯಾಗಿದೆ.
ದಿಲೀಪ್ ಡಿ. ಆರ್.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ