ಆ್ಯಪ್ನಗರ

ಜೈಲಿನಿಂದ ಆಡಳಿತ ನಡೆಸಲು ಮುಂದಾಗಿರುವ ಕೇಜ್ರಿವಾಲ್ ಗೆ ಸಂಕಷ್ಟ

ದೆಹಲಿ ಸರ್ಕಾರದ ಮದ್ಯ ಪರಿಷ್ಕರಣೆ ವಿಚಾರದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯ ಜೈಲಿನಿಂದಲೇ ಒಂದು ಸರ್ಕಾರಿ ಆದೇಶ ರವಾನಿಸಿದ್ದಾರೆ. ಈಗ ಬೇಸಿಗೆಯಾದ್ದರಿಂದ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯುಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಗೆ ದೆಹಲಿ ಸಿಎಂ ಹೊರಡಿಸಿರುವ ಸೂಚನೆಯ ಪ್ರತಿ ಈಗ ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ರಿಂದ ಇಂಥದ್ದೊಂದು ಆದೇಶ ಹೊರಬೀಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುವ ಸಾಧ್ಯತೆಗಳಿವೆ.

Edited byಚೇತನ್ ಓ.ಆರ್. | Vijaya Karnataka Web 26 Mar 2024, 1:14 am

ಹೈಲೈಟ್ಸ್‌:

  • ದೆಹಲಿ ಸರ್ಕಾರದ ಮದ್ಯ ನೀತಿ ಪರಿಷ್ಕರಣೆ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ.
  • ಆದೇಶವು 'ಫೋರ್ಜರಿ' ಎಂದು ಆರೋಪಿಸಿ ಲೆಫ್ಟಿನೆಂಟ್‌ ಗವರ್ನರ್‌ ತನಿಖೆಗೆ ಆಗ್ರಹಿಸಿದ್ದ ಬಿಜೆಪಿ.
  • ಜೈಲಿನಿಂದ ಆದೇಶ ಪ್ರತಿ ಹೊರಬಂದಿದ್ದರ ಬಗ್ಗೆ ಇ.ಡಿ. ತನಿಖೆ ನಡೆಸುವ ಸಾಧ್ಯತೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Delhi Chief Minister Arvind Kejriwal
ಹೊಸದಿಲ್ಲಿ: ಅಬಕಾರಿ ಹಗರಣದಲ್ಲಿಇ.ಡಿಯಿಂದ ಬಂಧಿತರಾಗಿ ಜೈಲುಪಾಲಾದ ಬಳಿಕ ಮೊದಲ ಸರಕಾರಿ ಆದೇಶ ಹೊರಡಿಸಿದ್ದ ದಿಲ್ಲಿಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಸಂಕಷ್ಟ ಎದುರಾಗಿದೆ. ಈ ಆದೇಶ ಪ್ರತಿ ಜೈಲಿನಿಂದ ಹೊರಗಡೆ ಹೇಗೆ ಬಂದಿತು ಹಾಗೂ ಇದರ ಹಿಂದಿನ ಕಾರಣಗಳೇನು ಎಂಬುದರ ತನಿಖೆಯನ್ನು ಇ.ಡಿ ನಡೆಸಲಿದೆ ಎನ್ನಲಾಗುತ್ತಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿಕೋರ್ಟ್‌ ನೀಡಿರುವ ಸೂಚನೆಗಳ ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಇ.ಡಿ ತನಿಖೆಯಲ್ಲಿ ಕೇಂದ್ರೀಕರಿಸಲಿದೆ. ಇ.ಡಿ ಕೇಂದ್ರ ಕಚೇರಿಯಲ್ಲಿನ 'ಮೀಟಿಂಗ್‌ ಏರಿಯಾ'ದ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.



ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರು ಜೈಲಿನಿಂದ ಆದೇಶ ಹೊರಡಿಸಿ ಬೇಸಿಗೆಯಲ್ಲಿರಾಜಧಾನಿ ಜನರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿಇಇದ್ದಾರೆ. ಈ ಆದೇಶದ ಪ್ರತಿಯನ್ನು ಸಚಿವೆ ಅತಿಶಿ ಅವರು ಸುದ್ದಿಗೋಷ್ಠಿಯಲ್ಲಿ ಓದಿದ್ದರು.

ಆದರೆ, ಕೋರ್ಟ್‌ ಸೂಚನೆಯಂತೆ ಪ್ರತಿದಿನ ಸಂಜೆ 6 ರಿಂದ 7ರ ನಡುವೆ ಅರ್ಧ ಗಂಟೆ ಅವಧಿಗೆ ಕೇಜ್ರಿವಾಲ್‌ ಪತ್ನಿ ಸುನೀತಾ, ದಿಲ್ಲಿಸಿಎಂ ಖಾಸಗಿ ಸಹಾಯಕ ಬಿಭವ್‌ ಕುಮಾರ್‌ ಅವರ ಭೇಟಿಗೆ ಅವಕಾಶವಿದೆ. ಬಾಕಿ ಅರ್ಧ ಗಂಟೆಯನ್ನು ಕೇಜ್ರಿವಾಲ್‌ ಅವರ ವಕೀಲರು ಬಳಸಿಕೊಳ್ಳಲು ಕೋರ್ಟ್‌ ಸೂಚನೆ ನೀಡಿದೆ. ಮಾ.21ರಂದು ದಿಲ್ಲಿ ಲಿಕ್ಕರ್‌ ಹಗರಣ ಸಂಬಂಧ ದಿಲ್ಲಿಸಿಎಂ ಕೇಜ್ರಿವಾಲ್‌ರನ್ನು ಇ.ಡಿ ಬಂಧಿಸಿತು.

ಲಾಕಪ್‌ನಿಂದಲೇ ಮೊದಲ ಆದೇಶ ಹೊರಡಿಸಿದ ಅರವಿಂದ್ ಕೇಜ್ರಿವಾಲ್: ಸಚಿವೆ ಆತಿಶಿ ಕಣ್ಣೀರು

ಖಲಿಸ್ತಾನಿಗಳಿಂದ ಆಪ್‌ಗೆ 133 ಕೋಟಿ ರೂ.: ಪನ್ನು ಆರೋಪ

ದಿಲ್ಲಿಅಬಕಾರಿ ನೀತಿ ಹಗರಣ ಸಂಬಂಧ ಜೈಲು ಪಾಲಾಗಿರುವ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಗುರುತರ ಆರೋಪ ಮಾಡಿದ್ದಾನೆ. ''2014-2016ರ ಅವಧಿಯಲ್ಲಿಖಲಿಸ್ತಾನಿ ಸಂಘಟನೆಗಳಿಂದ ಆಮ್‌ ಆದ್ಮಿ ಪಕ್ಷಕ್ಕೆ ಸುಮಾರು 133 ಕೋಟಿ ರೂ. (16 ದಶಲಕ್ಷ ಡಾಲರ್‌) ಹಣ ಸಂದಾಯವಾಗಿದೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್‌ ಅವರು ಉಗ್ರ ದೇವಿಂದರ್‌ ಪಾಲ್‌ ಸಿಂಗ್‌ ಭುಲ್ಲಾರ್‌ನನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು,'' ಎಂದು ಪನ್ನುನ್‌ ವಿಡಿಯೊ ಸಂದೇಶದಲ್ಲಿಹೊಸ ಬಾಂಬ್‌ ಹಾಕಿದ್ದಾನೆ.

ಅಮೆರಿಕ ಮತ್ತು ಕೆನಡಾ ಪೌರತ್ವ ಪಡೆದುಕೊಂಡಿರುವ ಪನ್ನು ವಿಡಿಯೊ ಸಂದೇಶದಲ್ಲಿಈ ಆರೋಪಗಳನ್ನು ಮಾಡಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿದೆ. ''ಅಮೆರಿಕದ ನ್ಯೂಯಾರ್ಕ್ನ ರಿಚಮಂಡ್‌ ಹಿಲ್‌ನಲ್ಲಿರುವ ಗುರುದ್ವಾರದಲ್ಲಿಕೇಜ್ರಿವಾಲ್‌ ಹಾಗೂ ಖಲಿಸ್ತಾನ ಪರ ಧೋರಣೆಯುಳ್ಳ ಸಿಖ್ಖರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಕ್ಷಕ್ಕೆ ಆರ್ಥಿಕ ನೆರವು ನೀಡಿದರೆ 1993ರ ದಿಲ್ಲಿಬಾಂಬ್‌ ದಾಳಿಯ ಸಂಚುಕೋರ ದೇವಿಂದರ್‌ ಪಾಲ್‌ ಸಿಂಗ್‌ ಭುಲ್ಲಾರ್‌ನನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಜ್ರಿವಾಲ್‌ ಭರವಸೆ ನೀಡಿದ್ದರು,'' ಎಂದು ಖಲಿಸ್ತಾನಿ ಉಗ್ರ ಹಾಗೂ 'ಸಿಖ್‌್ಸ ಫಾರ್‌ ಜಸ್ಟೀಸ್‌' ಸಂಘಟನೆಯ ನಾಯಕ ಪನ್ನು ವಿಡಿಯೊದಲ್ಲಿಆರೋಪಿಸಿದ್ದಾನೆ. ಗುರುಪತ್ವಂತ್‌ ಸಿಂಗ್‌ ಪನ್ನು ಹಿಂದೆಯೂ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ವಿರುದ್ಧ ಇಂಥದ್ದೇ ಆರೋಪಗಳನ್ನು ಹೊರಿಸಿದ್ದ.

ಅರವಿಂದ ಕೇಜ್ರಿವಾಲ್‌ ಪತ್ನಿ ಸುನೀತಾ ದಿಲ್ಲಿ ಸಿಎಂ?; ಕೇಜ್ರಿವಾಲ್ ಜೈಲಿನಿಂದ ಕಾರ್ಯಕರ್ತರಿಗೆ ನೀಡಿದ ಸಂದೇಶವೇನು?

ದಿಲ್ಲಿಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ (ಇ.ಡಿ)ಬಂಧನಕ್ಕೊಳಗಾಗಿರುವ ದಿಲ್ಲಿಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಕೋರ್ಟ್‌, ಈಗಾಗಲೇ ಮಾರ್ಚ್ 28ರವರೆಗೆ ಇ.ಡಿ ವಶಕ್ಕೆ ಕೊಟ್ಟಿದೆ. ಬಂಧನ ಖಂಡಿಸಿ 'ಐಎನ್‌ಡಿಐಎ' ಮೈತ್ರಿಕೂಟದ ನಾಯಕರು ಮಾರ್ಚ್ 31ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಮಧ್ಯೆ, ಈಗ ಖಲಿಸ್ತಾನಿ ಉಗ್ರ ಪನ್ನು ಮಾಡಿರುವ ಆರೋಪ ಸಂಚಲನ ಮೂಡಿಸಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ