ಆ್ಯಪ್ನಗರ

ಪಾಕ್‌ ಮಾಜಿ ಅಧ್ಯಕ್ಷ ಜರ್ದಾರಿ ಬಂಧನ

ಜರ್ದಾರಿ ಮತ್ತು ಅವರ ಸೋದರಿ ಫರ್ಯಾಲ್‌ ತಲ್ಪುರ್‌ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಿಸಲು ಇಸ್ಲಾಮಾಬಾದ್‌ ಹೈಕೋರ್ಟ್‌ ನಿರಾಕರಿಸಿದ ಬೆನ್ನ ಹಿಂದೆಯೇ ಈ ಬಂಧನದ ಕಾರ್ಯಾಚರಣೆ ನಡೆದಿದೆ.

PTI 11 Jun 2019, 5:00 am
ಇಸ್ಲಾಮಾಬಾದ್‌: ನಕಲಿ ಬ್ಯಾಂಕ್‌ ಖಾತೆ ಹೊಂದಿದ ಆರೋಪದಡಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರನ್ನು ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
Vijaya Karnataka Web jardari


ಈ ಪ್ರಕರಣದಲ್ಲಿ ಜರ್ದಾರಿ ಮತ್ತು ಅವರ ಸೋದರಿ ಫರ್ಯಾಲ್‌ ತಲ್ಪುರ್‌ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನು ಅವಧಿ ವಿಸ್ತರಿಸಲು ಇಸ್ಲಾಮಾಬಾದ್‌ ಹೈಕೋರ್ಟ್‌ ನಿರಾಕರಿಸಿದ ಬೆನ್ನ ಹಿಂದೆಯೇ ಈ ಬಂಧನದ ಕಾರ್ಯಾಚರಣೆ ನಡೆದಿದೆ. ಇಸ್ಲಾಮಾಬಾದ್‌ನಲ್ಲಿರುವ ನಿವಾಸದಿಂದಲೇ ಜರ್ದಾರಿಯವರನ್ನು ಬಂಧಿಸಿ ಕರೆದೊಯ್ಯಲಾಗಿದೆ. ಅವರ ಸೋದರಿ ಫರ್ಯಾಲ್‌ ವಿರುದ್ಧ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಜರ್ದಾರಿ ತಮ್ಮ ಸೋದರಿ ಜತೆಗೂಡಿ ನಕಲಿ ಬ್ಯಾಂಕ್‌ ಅಕೌಂಟ್‌ ಮೂಲಕ 15 ಕೋಟಿ ರೂ.ಗಳನ್ನು ಪಾಕಿಸ್ತಾನದಿಂದ ಹೊರಗಡೆ ಸಾಗಿಸಿದ್ದಾರೆ ಎಂದು ನ್ಯಾಷನಲ್‌ ಅಕೌಂಟಬಲಿಟಿ ಬ್ಯೂರೊ ದೂರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ