ಆ್ಯಪ್ನಗರ

ಏನಿದು ಪಾಕಿಸ್ತಾನದ ಬ್ಯಾಟ್‌?

ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನ ಸೇನೆಗೆ ಸೇರಿದ 'ಗಡಿ ನಿಯಂತ್ರಣ ಪಡೆ'ಯ(ಬ್ಯಾಟ್‌) ಐವರು ನುಸುಳುಕೋರರನ್ನು ಹೊಡೆದುರುಳಿಸಿದೆ. ಏನಿದು 'ಬ್ಯಾಟ್‌'? ಪಾಕ್‌ ಸೇನೆಯಲ್ಲಿ ಇದರ ಪಾತ್ರವೇನು?

Agencies 5 Aug 2019, 8:23 am
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ BAT ಸದ್ದು ಮಾಡುತ್ತಿದೆ. ಏನಿದೆಂಬ ಮಾಹಿತಿ ಇಲ್ಲಿದೆ. ಬಾರ್ಡರ್ ಆ್ಯಕ್ಷನ್ ಟೀಂ (Border Action Team) ಸಂಕ್ಷಿಪ್ತ ರೂಪವೇ ಬ್ಯಾಟ್. ಇದು ಜಮ್ಮು ಮತ್ತು ಕಾಶ್ಮೀರದ ಗಡಿ ಚಟುವಟಿಕೆಗಾಗಿ ಪಾಕಿಸ್ತಾನ ಸಿದ್ಧಪಡಿಸಿರುವ ಸೇನಾಪಡೆಗಳು ಮತ್ತು ಉಗ್ರಗಾಮಿಗಳನ್ನೊಳಗೊಂಡ ಗುಂಪು. ಕಾಶ್ಮೀರಕ್ಕೆ ಜೈಶೆ ಮೊಹಮದ್ ಹಾಗೂ ಇತರ ಸಂಘಟನೆಗಳ ಉಗ್ರಗಾಮಿಗಳನ್ನು ಗಡಿಯಾಚೆ ತಳ್ಳುವುದು ಇದರ ಪ್ರಮುಖ ಉದ್ದೇಶ. ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕೂಡ ಕೆಲಸ ಮಾಡಿದ್ದು ಇದೇ ಬ್ಯಾಟ್.
Vijaya Karnataka Web Kashmir encounter


ಇದೀಗ ಇದೇ ಬ್ಯಾಟ್ ತಂಡದ ನಾಲ್ವರು ಉಗ್ರಗಾಮಿಗಳು ಹತರಾಗಿದ್ದು, ಅವರ ಶವಗಳನ್ನು ತೆಗೆದುಕೊಳ್ಳುವಂತೆ ಭಾರತ ಕೇಳಿಕೊಂಡಿದ್ದರೂ, ಪಾಕಿಸ್ತಾನ ಇದಕ್ಕೆ ಸಿದ್ಧವಾಗಿಲ್ಲ.

Jammu & Kashmir Live: ಒಮರ್, ಮೆಹಬೂಬಾ ಗೃಹ ಬಂಧನ, ಸೇನಾ ನಿಯೋಜನೆ
ಏನಿದು ಆರ್ಟಿಕಲ್ 35ಎ?


BAT ಕುರಿತ ಮಾಹಿತಿ ಇಲ್ಲಿದೆ.
* ಇದು ಪಾಕಿಸ್ತಾನ ಸೇನೆಯ ಒಂದು ಅಂಗವಾಗಿದ್ದು, ಕೆಲವು ಉಗ್ರರನ್ನೂ ಒಳಗೊಂಡಿದೆ
* ಉಗ್ರರು ಭಾರತದ ಗಡಿ ನುಸುಳಲು ಅನುವು ಮಾಡಿಕೊಡುವುದು ಇದರ ಪ್ರಮುಖ ಉದ್ದೇಶ
* ಸಾಮಾನ್ಯವಾಗಿ ಪಾಕ್‌ ಸೈನಿಕರು ಹಾಗೂ ಉಗ್ರರನ್ನು ಒಳಗೊಂಡ 5-7 ಮಂದಿಯ ತಂಡ ಕಾರ್ಯಾಚರಣೆ ನಡೆಸುತ್ತದೆ
* 778 ಕಿ.ಮೀ. ಉದ್ದದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಈ ತಂಡವು 'ಬ್ಯಾಟ್‌' ಹೆಸರಿನಲ್ಲಿ ಸಕ್ರಿಯವಾಗಿದ್ದು, ಅವಕಾಶ ಸಿಕ್ಕಿದ ಕಡೆ ಉಗ್ರರನ್ನು ಒಳನುಗ್ಗಿಸಲು ಸಿದ್ಧವಾಗಿರುತ್ತದೆ
* ಸಾಮಾನ್ಯವಾಗಿ ಪಾಕಿಸ್ತಾನದ 'ವಿಶೇಷ ಸೇವಾ ತಂಡ'(ಎಸ್‌ಎಸ್‌ಜಿ) ಕಮಾಂಡೊಗಳು 'ಬ್ಯಾಟ್‌'ನ ಭಾಗವಾಗಿರುತ್ತಾರೆ
* 'ಎಸ್‌ಎಸ್‌ಜಿ' ಕಮಾಂಡೊಗಳ ಕಪ್ಪು ಸಮವಸ್ತ್ರದ ಹಿನ್ನೆಲೆಯಲ್ಲಿ ಈ ತಂಡವನ್ನು 'ಬ್ಲ್ಯಾಕ್‌ ಸ್ಟೋರ್ಕ್ಸ್‌' ಎಂದೂ ಕರೆಯಲಾಗುತ್ತದೆ
* 1999ರಲ್ಲಿ ಕಾರ್ಗಿಲ್‌ ಯುದ್ಧದ ವೇಳೆ ಮೊದಲು ಭಾರತದ ಗಡಿ ನುಸುಳಿದ್ದು ಇದೇ 'ಬ್ಲ್ಯಾಕ್ಸ್‌ ಸ್ಟೋರ್ಕ್ಸ್‌' .

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಯಾಕೆ ಬಂತು? ಇಲ್ಲಿದೆ ವಿವರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ