ಆ್ಯಪ್ನಗರ

ಷರೀಫ್‌ ಎಮ್ಮೆಗಳ ಹರಾಜಿನಿಂದ 23 ಲಕ್ಷ ರೂ

ಪಿಎಂಎಲ್‌-ಎನ್‌ ಪಕ್ಷದ ಮುಖ್ಯಸ್ಥ ನವಾಜ್‌ ಷರೀಫ್‌ ಅವರು ಪ್ರಧಾನಿಯಾಗಿದ್ದ ವೇಳೆ ಅಧಿಕೃತ ನಿವಾಸದ ಕೊಟ್ಟಿಗೆಯಲ್ಲಿ ಸಾಕಿಕೊಂಡಿದ್ದ ಎಂಟು ಎಮ್ಮೆಗಳನ್ನು ಪಾಕಿಸ್ತಾನ ಸರಕಾರ ಗುರುವಾರ ಹರಾಜು ಹಾಕಿದೆ.

Vijaya Karnataka 28 Sep 2018, 8:07 am
ಇಸ್ಲಾಮಾಬಾದ್‌: ಪಿಎಂಎಲ್‌-ಎನ್‌ ಪಕ್ಷದ ಮುಖ್ಯಸ್ಥ ನವಾಜ್‌ ಷರೀಫ್‌ ಅವರು ಪ್ರಧಾನಿಯಾಗಿದ್ದ ವೇಳೆ ಅಧಿಕೃತ ನಿವಾಸದ ಕೊಟ್ಟಿಗೆಯಲ್ಲಿ ಸಾಕಿಕೊಂಡಿದ್ದ ಎಂಟು ಎಮ್ಮೆಗಳನ್ನು ಪಾಕಿಸ್ತಾನ ಸರಕಾರ ಗುರುವಾರ ಹರಾಜು ಹಾಕಿದೆ.
Vijaya Karnataka Web NAwaj


ಷರೀಫ್‌ ಅವರ ಬೆಂಬಲಿಗ ಖ್ವಾಲಬ್‌ ಅಲಿ ಅವರು 23 ಲಕ್ಷ ರೂ.ಗೆ ಎಂಟು ಎಮ್ಮೆಗಳನ್ನು ಖರೀದಿಸಿದ್ದಾರೆ. ಬಿಡ್‌ನಲ್ಲಿ ಸರಕಾರ ತಲಾ ಒಂದು ಎಮ್ಮೆಗೆ 2.2 ಲಕ್ಷ ರೂ. ಪ್ರಾರಂಭಿಕ ಬೆಲೆ ನಿಗದಿಪಡಿಸಿತ್ತು. ಹರಾಜಿನಿಂದ ಬಂದಿರುವ ಈ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳುವ ಉದ್ದೇಶವನ್ನು ಸರಕಾರ ಹೊಂದಿದೆ. ಪ್ರಧಾನಿಯಾದ ಬೆನ್ನಲ್ಲೇ ಇಮ್ರಾನ್‌ ಖಾನ್‌ ಅವರು, ಆರ್ಥಿಕ ನಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ತಮ್ಮ ಸರಕಾರ ಮುಂದಾಗಲಿದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಎಂಟು ಬಿಎಂಡಬ್ಲ್ಯೂ ಕಾರುಗಳು, ಐದು ಎಸ್‌ಯುವಿಗಳು ಸೇರಿ 61 ಐಶಾರಾಮಿ ವಾಹನಗಳನ್ನು ಹಾಗೂ ನಾಲ್ಕು ಹೆಲಿಕಾಪ್ಟರ್‌ಗಳನ್ನು ಸರಕಾರ ಹರಾಜು ಹಾಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ