ಆ್ಯಪ್ನಗರ

ಕಾಂಗ್ರೆಸ್‌ನಲ್ಲೂ ಪಾಕಿಸ್ತಾನ ಇದೆ!

''ಕಾಶ್ಮೀರ ಜನತೆ ಸ್ವಾತಂತ್ರ್ಯ ಬಯಸುತ್ತಿದ್ದಾರೆ,'' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ನೀಡಿದ್ದ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್‌ ಮುಖಂಡ ಸೈಫುದ್ದಿನ್‌ ಸೋಜ್‌ ವಿವಾದಕ್ಕೆ ಸಿಲುಕಿದ್ದು, ಸ್ವತಃ ಕಾಂಗ್ರೆಸ್‌ ಈ ಬಗ್ಗೆ ಕಿಡಿಕಾರಿದೆ.

Vijaya Karnataka 23 Jun 2018, 10:15 am
ಹೊಸದಿಲ್ಲಿ: ''ಕಾಶ್ಮೀರ ಜನತೆ ಸ್ವಾತಂತ್ರ್ಯ ಬಯಸುತ್ತಿದ್ದಾರೆ,'' ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ನೀಡಿದ್ದ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್‌ ಮುಖಂಡ ಸೈಫುದ್ದಿನ್‌ ಸೋಜ್‌ ವಿವಾದಕ್ಕೆ ಸಿಲುಕಿದ್ದು, ಸ್ವತಃ ಕಾಂಗ್ರೆಸ್‌ ಈ ಬಗ್ಗೆ ಕಿಡಿಕಾರಿದೆ.
Vijaya Karnataka Web S S


''ಕಾಶ್ಮೀರಿಗಳಿಗೆ ಆಯ್ಕೆ ಕೊಟ್ಟರೆ, ಅವರ ಮೊದಲ ಆಯ್ಕೆ 'ಸ್ವಾತಂತ್ರ್ಯ'ವೇ ಆಗಿರುತ್ತದೆ ಎಂದು ಮುಷರಫ್‌ ಒಮ್ಮೆ ಹೇಳಿದ್ದರು. ಅವರ ಮಾತು ಸತ್ಯ. ಆದರೆ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ನನಗನ್ನಿಸುತ್ತದೆ,'' ಎಂದು ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ 'ಕಾಶ್ಮೀರ್‌: ಗ್ಲಿಂಪ್ಸೆಸ್‌ ಆಫ್‌ ಹಿಸ್ಟರಿ ಆಂಡ್‌ ಸ್ಟೋರಿ ಆಫ್‌ ಸ್ಟ್ರಗಲ್‌' ಪುಸ್ತಕದಲ್ಲಿ ಸೋಜ್‌ ಹೇಳಿದ್ದಾರೆ.

ಮಾರಾಟದ ಗಿಮಿಕ್‌: ಸೋಜ್‌ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್‌, ಇದೆಲ್ಲವೂ ಅವರ ಪುಸ್ತಕ ಮಾರಾಟ ಹೆಚ್ಚಿಸಿಕೊಳ್ಳಲು ನಡೆಸುತ್ತಿರುವ 'ಕಳಪೆ ತಂತ್ರ' ಎಂದು ಟೀಕಿಸಿದೆ. ಅಲ್ಲದೆ ಸೋಜ್‌ ವಿರುದ್ಧ ಕ್ರಮಕ್ಕೆ ಕೈಗೊಳ್ಳುವುದಾಗಿ ಪಕ್ಷದ ಜಮ್ಮು-ಕಾಶ್ಮೀರ ಘಟಕ ತಿಳಿಸಿದೆ. ''ಕಾಂಗ್ರೆಸ್‌ ಪಕ್ಷ ಮತ್ತು ಭಾರತದ ಎಲ್ಲ ಪ್ರಜೆಗಳೂ ಸೋಜ್‌ ಅವರ ಹೇಳಿಕೆಯನ್ನು ತಿರಸ್ಕರಿಸುತ್ತಾರೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ,'' ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಹೇಳಿದ್ದಾರೆ.

'ಜಮ್ಮು ಕಾಶ್ಮೀರದಲ್ಲಿ ಉಗ್ರರಿಗಿಂತಲೂ ಅಮಾಯಕ ನಾಗರಿಕರೇ ಹೆಚ್ಚು ಬಲಿಯಾಗುತ್ತಿದ್ದಾರೆ,' ಎಂದು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಅವರು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬಾರದು ಎಂದೂ ಸಹ ಸುರ್ಜೆವಾಲ ಮನವಿ ಮಾಡಿದ್ದಾರೆ. ಗುಲಾಂ ನಬಿ ಆಜಾದ್‌ ಹೇಳಿಕೆಗೆ ಲಷ್ಕರೆ ತೊಯ್ಯಬಾ ಸಂಘಟೆನ ಮುಖ್ಯಸ್ಥ ಸಹ ಬೆಂಬಲ ವ್ಯಕ್ತಪಡಿಸಿದ್ದರಿಂದ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆಜಾದ್‌ ಅವರು ತಮ್ಮ ಹೇಳಿಕೆ ಮೂಲಕ ಸೇನೆಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಗುಡುಗಿತ್ತು.

ಸೋಜ್‌ ಪಾಕಿಸ್ತಾನಕ್ಕೆ ಹೋಗಲಿ: ಸ್ವಾಮಿ


ಈ ದೇಶದ ಸಂವಿಧಾನಕ್ಕೆ ಬದ್ಧವಾಗಿರುವವರು ಇಲ್ಲಿರಲಿ. ಮುಷರ್ರಫ್‌ ಅವರನ್ನೇ ಇಷ್ಟಪಡುವವರು ಅಲ್ಲಿಗೇ ಹೋಗಲಿ, ಸೋಜ್‌ ಅವರಿಗೆ ಪಾಕಿಸ್ತಾನಕ್ಕೆ ಒನ್‌ ವೇ ಟಿಕೆಟ್‌ ನೀಡಲು ನಾವು ಎಂದಿಗೂ ಸಿದ್ಧ- ಡಾ.ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಮುಖಂಡ

ಹಲವು ಉಗ್ರ ಸಂಘಟನೆಗಳ ನಿಷೇಧ

ಅಲ್‌ ಖೈದಾ ಮತ್ತು ಐಸಿಸ್‌ ಸಂಘಟನೆಗಳ ಘಟಕಗಳಾದ 'ಅಲ್‌ಕಾಯ್ದಾ ಇಂಡಿಯನ್‌ ಸಬ್‌ಕಾಂಟಿನೆಂಟಲ್‌ (ಎಕ್ಯೂಐಎಸ್‌) ಹಾಗೂ 'ಸ್ಟೇಟ್‌ ಆಫ್‌ ಇರಾನ್‌ ಆಂಡ್‌ ಶಾಮ್‌-ಖೊರಾಸನ್‌'ಗೆ (ಐಎಸ್‌ಐಎಸ್‌-ಕೆ) ಕೇಂದ್ರ ಸರಕಾರ ನಿಷೇಧ ಹೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ