ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನ ಹೊಸ ಬಗೆಯ ಉಪಟಳಗಳನ್ನು ಆರಂಭಿಸಿದೆ. ಕಳೆದ ತಿಂಗಳು ಡ್ರೋನ್ಗಳನ್ನು ಹಾರಿಸುವ ಮೂಲಕ ದಾಳಿಗಳನ್ನು ನಡೆಸುವ ಚಟುವಟಿಕೆ ಶುರುಮಾಡಿದ್ದ ಪಾಕಿಸ್ತಾನ, ಈಗ ಭಾರತೀಯ ಸೇನಾ ಪಡೆಗೆ ನಕಲಿ ಫೋನ್ ಕರೆಗಳನ್ನು ಮಾಡತೊಡಗಿದೆ. ಸೇನಾ ಪಡೆಗಳಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನಿಂದ ಅನೇಕ ನಕಲಿ ಕರೆಗಳು ಬಂದಿವೆ. ಇಂತಹ ನಕಲಿ ಕರೆಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಎಚ್ಚರಿಕೆ ಘೋಷಣೆ ಮಾಡಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳ ಸೋಗಿನಲ್ಲಿ ಭಾರತೀಯ ಭದ್ರತಾ ಪಡೆಗಳ ಕಚೇರಿಗಳಿಗೆ ಈ ನಕಲಿ ಕರೆಗಳನ್ನು ಪದೇ ಪದೇ ಮಾಡುತ್ತಿದ್ದು, ಅದನ್ನು ಹೆಚ್ಚಿಸಲು ಐಎಸ್ಐ ಉದ್ದೇಶಿಸಿದೆ. ಇವುಗಳಲ್ಲಿ ಕೆಲವು ಸಂಖ್ಯೆಗಳ ಮೂಲಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದು, ವಿಭಿನ್ನ ಫೋನ್ ಸಂಖ್ಯೆಗಳಿಂದ ಕರೆಗಳು ಬರುತ್ತಿವೆ.
ಈ ಹಿಂದೆಯೂ ಇಂತಹ ನಕಲಿ ಕರೆಗಳು ಬರುತ್ತಿದ್ದವು. ಈ ಬಗ್ಗೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ರವಾನಿಸಲಾಗಿತ್ತು. ಸ್ವಾತಂತ್ರ್ಯೋತ್ಸವ ದಿನದ ಸಂಭ್ರಮಾಚರಣೆ ಸಮೀಪಿಸುತ್ತಿರುವುದರಿಂದ ಇಂತಹ ನಕಲಿ ಕರೆಗಳ ಬಗ್ಗೆ ಹೆಚ್ಚು ಎಚ್ಚರ ವಹಿಸುವಂತೆ ಹಾಗೂ ಯಾವುದೇ ಮಾಹಿತಿ ರವಾನೆಯಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ.