ಆ್ಯಪ್ನಗರ

ಭಾರತದ ಮೇಲೆ 10 ಸರ್ಜಿಕಲ್ ದಾಳಿ: ಪಾಕ್ ಎಚ್ಚರಿಕೆ

ಲಂಡನ್‌ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್‌ ಜಾವೇದ್‌ ಬಾಜ್ವಾ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಜ.ಆಸಿಫ್‌ ಗಫೂರ್‌, ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

Vijaya Karnataka 15 Oct 2018, 7:57 am
ಇಸ್ಲಾಮಾಬಾದ್‌: ಪಾಕ್‌ ಗಡಿಯೊಳಗೆ ನುಗ್ಗಿ ಭಾರತ ಒಂದು ಸರ್ಜಿಕಲ್‌ ದಾಳಿ ಮಾಡಿದರೆ, ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ 10 ಸರ್ಜಿಕಲ್‌ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.
Vijaya Karnataka Web Surgical Strike


ಲಂಡನ್‌ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್‌ ಜಾವೇದ್‌ ಬಾಜ್ವಾ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಜ.ಆಸಿಫ್‌ ಗಫೂರ್‌, ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

''ನಮ್ಮ ವಿರುದ್ಧ ದುಸ್ಸಾಹಸಕ್ಕೆ ಕೈ ಹಾಕುವ ಯಾರಿಗೇ ಆದರೂ, ಪಾಕಿಸ್ತಾನದ ಶಕ್ತಿ ಸಾಮರ್ಥ್ಯ‌ಗಳ ಬಗ್ಗೆ ಕಿಂಚಿತ್ತೂ ಅನುಮಾನ ಇರಬಾರದು. ಏಕೆಂದರೆ ಪಾಕಿಸ್ತಾನ ಅಂತಹ ನಡೆಗಳಿಗೆ ದಿಟ್ಟ ಉತ್ತರ ನೀಡಲಿದೆ,'' ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಚೀನಾ ಜತೆಗಿನ ಆರ್ಥಿಕ ಕಾರಿಡಾರ್‌ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಗಫೂರ್‌, ಇದರಿಂದ ದೇಶದ ಆರ್ಥಿಕತೆ ಬಲಗೊಳ್ಳಲಿದೆ ಎಂದಿದ್ದಾರೆ.

ದೇಶದಲ್ಲಿ ಮಾಧ್ಯಮಗಳನ್ನು ನಿಯಂತತ್ರಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ ಎಂಬ ಆರೋಪ ತಳ್ಳಿ ಹಾಕಿರುವ ಅವರು, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ದೇಶ ಈಗ ಅಭಿವೃದ್ಧಿಯ ಮೂಡ್‌ನಲ್ಲಿದೆ. ಮಾಧ್ಯಮಗಳು ಒಳ್ಳೆಯ ಸಂಗತಿಗಳನ್ನೂ ವರದಿ ಮಾಡಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ