ಆ್ಯಪ್ನಗರ

ಪಾಕಿಸ್ತಾನಿ ಹಿಂದೂ ಅಲ್ಪಸಂಖ್ಯಾತರು ಭಾರತೀಯ ಪ್ರಜೆಯಾಗಿ ಸ್ವೀಕಾರ

ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡಿದ್ದ 90 ಹಿಂದುಗಳು ಶುಕ್ರವಾರ ಭಾರತೀಯ ಪ್ರಜೆಯ ಗುರುತಿನ ಚೀಟಿ ಪಡೆದುಕೊಳ್ಳಲಿದ್ದಾರೆ.

TIMESOFINDIA.COM 21 Jun 2018, 6:54 pm
ಅಹಮದಾಬಾದ್‌: ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡಿದ್ದ 90 ಹಿಂದುಗಳು ಶುಕ್ರವಾರ ಭಾರತೀಯ ಪ್ರಜೆಯ ಗುರುತಿನ ಚೀಟಿ ಪಡೆದುಕೊಳ್ಳಲಿದ್ದಾರೆ.
Vijaya Karnataka Web citizen


ಅಹಮದಾಬಾದ್‌ನ ಜಿಲ್ಲಾಧಿಕಾರಿ ವಿಕ್ರಾಂತ್‌ ಪಾಂಡೆ ದಾಖಲೆ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ. ಕಳೆದ ವರ್ಷದ ಜುಲೈನಿಂದ ನವಂಬರ್‌ ತಿಂಗಳಲ್ಲಿ ಪಾಕಿಸ್ತಾನದಿಂದ ಬಂದ ಅನೇಕ ಸಿಂಧಿ ಸಮುದಾಯದ ಕುಟುಂಬಗಳಿಗೆ ಭಾರತೀಯ ಪ್ರಜೆಯಾಗಿ ಸ್ವೀಕರಿಸಿ, ಅಗತ್ಯ ದಾಖಲೆಗಳನ್ನು ನೀಡಲಾಗಿತ್ತು. ದೇಶದಲ್ಲಿ ಅಹಮದಾಬಾದ್‌ ಜಿಲ್ಲೆಯು ಅತಿ ಹೆಚ್ಚು ಮಂದಿಗೆ ಭಾರತೀಯ ಪ್ರಜೆಯಾಗುವ ಅವಕಾಶ ಕಲ್ಪಿಸಿ ಕೊಡುತ್ತಿದ್ದು, ಈ ಪೈಕಿ ಹೆಚ್ಚಿನ ಅರ್ಜಿಗಳು ಪಾಕಿಸ್ತಾನದ ಹಿಂದುಗಳೇ ಆಗಿದ್ದಾರೆ. ಈ ವರೆಗೆ 360 ಮಂದಿಯನ್ನು ಸೇರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಹಿಂದು, ಬೌದ್ಧ, ಕ್ರೈಸ್ತ, ಪಾರ್ಸಿ, ಜೈನರು, ಸಿಕ್ಖ ಸಮುದಾಯಕ್ಕೆ ಸೇರಿದವರನ್ನು (ಅಲ್ಪಸಂಖ್ಯಾತರು) ಭಾರತೀಯ ಪ್ರಜೆಯಾಗಿ ಸ್ವೀಕರಿಸಲು ಅವಕಾಶವಿರುವುದಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ