ಆ್ಯಪ್ನಗರ

‘ಕೌನ್ ಬನೇಗಾ ಕರೋಡ್‌ಪತಿ’ ಹೆಸರಲ್ಲಿ ಪಾಕ್ ಕಳ್ಳರ ಮೋಸ!: ಎಚ್ಚರವಿರಿ ಎಂದಿದೆ ಭಾರತೀಯ ಸೇನೆ

ನೀವು ಚಾಪೆ ಕೆಳಗೆ ತೂರಿದ್ರೆ ನಾವು ರಂಗೋಲಿ ಕೆಳಗೆ ತೂರುತ್ತೇವೆ ಅಂತಾರೆ ಪಾಪಿ ಪಾಕಿಸ್ತಾನದ ಕಿರಾತಕರು. ಭಾರತದ ವಿರುದ್ಧ ಸಂಚು ಮಾಡೋಕೆ ಸಿಗುವ ಯಾವ ಅವಕಾಶವನ್ನೂ ಪಾಕಿಸ್ತಾ ಬಿಡಲ್ಲ. ಭಾರತದ ಜನಪ್ರಿಯ ಟಿವಿ ಶೋ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಇದೀಗ ಪಾಕಿಸ್ತಾನಕ್ಕೆ ಅಸ್ತ್ರವಾಗಿದೆ!

TIMESOFINDIA.COM 22 Sep 2019, 4:43 pm
ಹೊಸ ದಿಲ್ಲಿ: ಅಮಿತಾಬ್‌ ಬಚ್ಚನ್ ಅವರ ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್‌ಪತಿ ಇದೀಗ ಪಾಕಿಸ್ತಾನಕ್ಕೆ ವರವಾಗುತ್ತಿದೆ! ಪಾಕಿಸ್ತಾನದ ಕಿರಾತಕರು ಬಿಗ್‌ ಬಿ ಕಾರ್ಯಕ್ರಮದ ಹೆಸರಲ್ಲಿ ಭಾರತದ ಅಮಾಯಕ ಜನರನ್ನು ಸುಲಿಗೆ ಮಾಡಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಮೋಸ ಮಾಡಲು ಸಂಚು ರೂಪಿಸಿದ್ದಾರೆ ಅನ್ನೋ ಮಾಹಿತಿಯನ್ನು ಭದ್ರತಾ ಪಡೆಗಳು ಬಹಿರಂಗಪಡಿಸಿವೆ.
Vijaya Karnataka Web amitab cyber crime


‘ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಗೆ ನೆಹರು ಕಾರಣ’: ಇತಿಹಾಸ ಕೆದಕಿ ಮಾತಲ್ಲೇ ತಿವಿದ ಶಾ

ಅಮಿತಾಬ್ ಅವರ ಟಿವಿ ಶೋ ಹೆಸರಲ್ಲಿ ಪಾಕಿಸ್ತಾನದ ಹ್ಯಾಕರ್‌ಗಳು ಮೋಸ ಮಾಡ್ತಿದ್ದಾರೆ ಅನ್ನೋದ್ರ ಬಗ್ಗೆ ರಕ್ಷಣಾ ಇಲಾಖೆಯ ಸೈಬರ್‌ ಘಟಕಕ್ಕೆ ಖಚಿತ ಮಾಹಿತಿ ಲಭ್ಯವಾಗಿದೆ. ಕೌನ್ ಬನೇಗಾ ಕರೋಡ್‌ಪತಿ ಹೆಸರಲ್ಲಿ ನಕಲಿ ವಾಟ್ಸಪ್ ಗ್ರೂಪ್‌ಗಳನ್ನು ಮಾಡಿ ಆ ಮೂಲಕ ಜನರಿಗೆ ಸಂದೇಶ ರವಾನೆ ಮಾಡಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

‘ಶಾರನ್ನು ಭೇಟಿಯಾಗಿದ್ದು ನೆರೆಪರಿಹಾರಕ್ಕಲ್ಲ, ಅನರ್ಹರ ಬಚಾವ್‌ಗಾಗಿ’: ಬಿಎಸ್‌ವೈಗೆ ಎಚ್ಡಿಕೆ ಚಾಟಿ

ಈ ವಾಟ್ಸಪ್‌ ಗ್ರೂಪ್‌ಗಳ ಅಡ್ಮಿನ್‌ಗಳ ಪೈಕಿ, 2 ಪಾಕಿಸ್ತಾನದ ನಂಬರ್‌ಗಳು ಪತ್ತೆಯಾಗಿವೆ. ಹೀಗಾಗಿ, ಕರೋಡ್‌ಪತಿ ಹೆಸರಲ್ಲಿ ಯಾವುದೇ ಗ್ರೂಪ್ ಇದ್ದರೆ ಕೂಡಲೇ ಆ ಗ್ರೂಪ್‌ಗಳಿಂದ ಎಕ್ಸಿಟ್ ಆಗುವಂತೆ ರಕ್ಷಣಾ ಇಲಾಖೆ ಎಚ್ಚರಿಕೆ ನೀಡಿದೆ. ತಮ್ಮ ಮೊಬೈಲ್‌ ರಿಸೆಟ್‌ ಮಾಡಿಕೊಳ್ಳುವಂತೆಯೂ ಸೈಬರ್ ಘಟಕ ಸೂಚನೆ ನೀಡಿದೆ. ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಪಾಕಿಸ್ತಾನಿ ವ್ಯಕ್ತಿಯ ನಂಬರ್ ಸಹಿತ ಮಾಹಿತಿ ಸೇವ್ ಆಗಿದ್ದರೆ, ಆತ ನಿಮ್ಮನ್ನು ಆಹ್ವಾನ ನೀಡದೆಯೇ ಗ್ರೂಪ್‌ಗಳಿಗೆ ಸೇರಿಸಬಹುದಾಗಿದೆ.

‘ವಿದೇಶಿ ನೆಲದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರಧಾನಿಗೆ ಗೌರವ ಕೊಡಿ’: ತರೂರ್

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪಾಕಿಸ್ತಾನದ ಬೇಹುಗಾರಿಕಾ ಪಡೆಗಳು ಸಾಕಷ್ಟು ಚುರುಕಾಗಿವೆ. ಭಾರತದಲ್ಲಿ ವದಂತಿಗಳನ್ನು, ಸುಳ್ಳು ಸುದ್ದಿಗಳನ್ನು ಹರಡಲು ಭಾರೀ ಸಾಹಸ ನಡೆಸುತ್ತಿವೆ. ಸುಳ್ಳು ಸುದ್ದಿ ಹರಡೋದಕ್ಕೆ ಇಂಟರ್‌ ನೆಟ್‌ ಜಗತ್ತನ್ನು ಬಳಸಿಕೊಳ್ಳುವುದು ಪಾಕಿಸ್ತಾನಕ್ಕೆ ಸುಲಭ ಸಾಧ್ಯವಾಗಿದ್ದು, ಜನರು ಎಚ್ಚರಿಕೆ ವಹಿಸಬೇಕೆಂದು ರಕ್ಷಣಾ ಇಲಾಖೆ ಸೂಚನೆ ನೀಡಿದೆ.

ಸೈನ್ಯಾಧಿಕಾರಿಗಳ ಹೆಸರಿನಲ್ಲೇ 200ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿ ಮಾಡಲಾಗಿದೆ. ಕರ್ತವ್ಯದಲ್ಲಿರುವ, ಈಗಾಗಲೇ ನಿವೃತ್ತರಾಗಿರುವ ಅಧಿಕಾರಿಗಳ ಹೆಸರಲ್ಲಿ ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳು ಇರೋದನ್ನ ಸೇನೆ ಪತ್ತೆ ಹಚ್ಚಿದೆ. ಈ ಖಾತೆಗಳ ಮೂಲಕ ಕಾಶ್ಮೀರ ವಿಚಾರ ಸೇರಿದಂತೆ ಹಲವು ಸುಳ್ಳು ಸುದ್ದಿಗಳನ್ನು ಪಾಕಿಸ್ತಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ಬರೆದು ಪ್ರಕಟಿಸಲಾಗುತ್ತಿದೆ.

ಟ್ವಿಟರ್‌ನಲ್ಲಿ ಇಂಥಾ ಹಲವಾರು ನಕಲಿ ಖಾತೆಗಳನ್ನು ಗುರುತಿಸಿ ಆ ಖಾತೆಗಳನ್ನು ರದ್ದುಪಡಿಸಲಾಗಿದೆ. ಜೊತೆಯಲ್ಲೇ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಜನರಿಗೂ ಸುಳ್ಳು ಮಾಹಿತಿ ನಂಬಬೇಡಿ ಎಂಬ ಸಂದೇಶವನ್ನು ಸೇನೆ ರವಾನಿಸಿದೆ.

ಸೈನ್ಯಾಧಿಕಾರಿಗಳನ್ನು ಇಂಟರ್‌ನೆಟ್‌ನಲ್ಲಿ ಯುವತಿಯರ ಹೆಸರಲ್ಲಿ ಪರಿಚಯ ಮಾಡಿಕೊಳ್ಳುವ ಮೂಲಕ, ಸೇನೆಯ ರಹಸ್ಯ ಮಾಹಿತಿಯನ್ನು ಕದಿಯಲು ಪಾಕ್ ಮೂಲದ ಕಿರಾತಕರು ಪ್ರಯತ್ನಿಸುತ್ತಿರುತ್ತಾರೆ, ಅಂಥವರ ಬಗ್ಗೆಯೂ ಗಮನವಿರಲಿ ಎಂದು ಸೇನೆ ಎಚ್ಚರಿಕೆ ನೀಡಿದೆ.

ಮಗಳು ನಿಮ್ಮ ಮಡಿಲಿನಾಚೆ ಬೆಳೆಯಬಹುದು. ಆದ್ರೆ, ಹೃದಯದಾಚೆಯಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ