ಆ್ಯಪ್ನಗರ

ಹಫೀಜ್‌ ಬಂಧನ ವಿಸ್ತರಣೆ

ಮುಂಬಯಿ ಸರಣಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.

PTI 25 Jul 2019, 5:00 am
ಲಾಹೋರ್‌: ಭಯೋತ್ಪಾದನೆಗೆ ಆರ್ಥಿಕ ನೆರವಿನ ಮೂಲಕ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇರೆಗೆ ಬಂಧಿತನಾಗಿರುವ ಜಮಾತ್‌-ಉದ್‌-ದವಾ(ಜೆಯುಡಿ) ಮುಖ್ಯಸ್ಥ ಹಾಗೂ ಮುಂಬಯಿ ಸರಣಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಪಾಕಿಸ್ತಾನ ಗುಜ್ರಾನ್‌ವಾಲಾದಲ್ಲಿನ ಉಗ್ರ ನಿಗ್ರಹ ಕೋರ್ಟ್‌(ಎಟಿಸಿ) ಬುಧವಾರ ವಿಚಾರಣೆ ನಡೆಸಿ ಬಂಧನ ಅವಧಿ ವಿಸ್ತರಿಸಿದೆ. ಜತೆಗೆ ಪಂಜಾಬ್‌ ಪ್ರಾಂತ್ಯದ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ ಕೋರ್ಟ್‌, ಆಗಸ್ಟ್‌ 7ರೊಳಗೆ ಉಗ್ರ ಹಫೀಜ್‌ ವಿರುದ್ಧ ಸಂಪೂರ್ಣ ಆರೋಪಪಟ್ಟಿಯನ್ನು ಸಲ್ಲಿಸುವಂತೆ ಹೇಳಿದೆ.
Vijaya Karnataka Web 502995_5397241_hafiz-saeed_updates

ಪಾಕ್‌ ಪೊಲೀಸರಿಂದ ಬಂಧನ ಎದುರಿಸುವ ಸುಳಿವು ಸಿಕ್ಕ ನಂತರ ಉಗ್ರ ಹಫೀಜ್‌ ಜಾಮೀನು ಪಡೆಯಲೆಂದು ಲಾಹೋರ್‌ಗೆ ತೆರಳುತ್ತಿದ್ದಾಗ ಜುಲೈ 17ರಂದು ಪೊಲೀಸರು ಆತನನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ