ಆ್ಯಪ್ನಗರ

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಐಸಿಜೆಯಲ್ಲಿನ ಪಾಕ್‌ ವಕೀಲರಿಂದ ಒಪ್ಪಿಗೆ

ವಿಶ್ವಸಂಸ್ಥೆಯಂಥ ಜಾಗತಿಕ ವೇದಿಕೆಗಳಲ್ಲಿ 370ನೇ ವಿಧಿ ರದ್ದತಿ ವಿಚಾರವನ್ನು ಒಯ್ದು ಭಾರತದ ಮೇಲೆ ಒತ್ತಡ ಹೇರುವ ತಂತ್ರ ವಿಫಲವಾಗಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಖುರೇಷಿ ಹೇಳಿಕೆ ನಿರಾಸೆ ಮೂಡಿಸಿದೆ.

PTI 4 Sep 2019, 5:00 am
ಇಸ್ಲಾಮಾಬಾದ್‌: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಭಾರತ ಕ್ರಮವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ಖಾವರ್‌ ಖುರೇಷಿ ಹೇಳಿದ್ದಾರೆ.
Vijaya Karnataka Web khureshi


ವಿಶ್ವಸಂಸ್ಥೆಯಂಥ ಜಾಗತಿಕ ವೇದಿಕೆಗಳಲ್ಲಿ 370ನೇ ವಿಧಿ ರದ್ದತಿ ವಿಚಾರವನ್ನು ಒಯ್ದು ಭಾರತದ ಮೇಲೆ ಒತ್ತಡ ಹೇರುವ ತಂತ್ರ ವಿಫಲವಾಗಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಖುರೇಷಿ ಹೇಳಿಕೆ ನಿರಾಸೆ ಮೂಡಿಸಿದೆ. ಖುರೇಷಿ ಅವರು ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಪಾಕಿಸ್ತಾನ ಸರಕಾರದ ಪರವಾಗಿ ವಾದಿಸಿದ್ದಾರೆ.

''ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿಲ್ಲ. 370ನೇ ವಿಧಿ ರದ್ದತಿಯಿಂದ ಹಕ್ಕುಗಳನ್ನು ಮೊಟಕುಗೊಳಿಸಿ, ನರಹತ್ಯೆ ನಡೆಸಲಾಗುತ್ತಿದೆ ಎಂಬ ವಾದದಲ್ಲಿ ಕೂಡ ಹುರುಳಿಲ್ಲ. ಹಾಗಾಗಿ ಈ ವಿಚಾರವನ್ನು ಐಸಿಜೆಗೆ ಕೂಡ ಕೊಂಡೊಯ್ಯಲಾಗಲ್ಲ,'' ಎಂದು ವಕೀಲ ಖುರೇಷಿ ಹೇಳಿದ್ದಾರೆ.

ಭಾರತದ ಅವಿಭಾಜ್ಯ ಅಂಗ:

ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಬೆಂಬಲ ಇಲ್ಲ ಎನ್ನುವುದನ್ನು ಒಪ್ಪಿಕೊಂಡಿರುವ ಖುರೇಷಿ, ಜಗತ್ತಿನ ದೃಷ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ''ಜಮ್ಮು -ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನೀಯರೇ ನಿಲುವೇ ಬೇರೆ, ಜಗತ್ತಿನ ನಿಲುವೇ ಬೇರೆ ಆಗಿದೆ ಎನ್ನುವುದು ವಾಸ್ತವ. ಹೊರದೇಶದಲ್ಲಿ ಕೂತು ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ಕುರಿತಾದ ಬಿಕ್ಕಟ್ಟು ಗಮನಿಸುವವರಿಗೆ ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗವೆಂಬ ಅಭಿಪ್ರಾಯ ಮೂಡುತ್ತದೆ,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ