ಆ್ಯಪ್ನಗರ

ನ್ಯಾಷನಲ್‌ ಗ್ಯಾಲರಿ ವಿರುದ್ಧ ಮತ್ತೆ ಪಾಲೇಕರ್‌ ಆಕ್ರೋಶ

ಕಳೆದ ಶುಕ್ರವಾರ ಕಲಾವಿದ ಪ್ರಭಾಕರ ಬರ್ವೆ ಅವರ ಸ್ಮರಣೆಯ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಲ್ಲಿ ಅಮೋಲ್‌ ಪಾಲೇಕರ್‌ ಸಂಸ್ಕೃತಿ ಇಲಾಖೆಯ ನಡೆಯನ್ನು ಟೀಕಿಸಿದ್ದರು.

Vijaya Karnataka 11 Feb 2019, 5:00 am
ಮುಂಬಯಿ: ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ (ಎನ್‌ಜಿಎಂಎ)ಯ ಮುಂಬಯಿ ಮತ್ತು ಬೆಂಗಳೂರು ಕೇಂದ್ರಗಳ ಸಲಹಾ ಸಮಿತಿಯನ್ನೇ ರದ್ದುಪಡಿಸಿದ ಸಂಸ್ಕೃತಿ ಸಚಿವಾಲಯದ ನಿರ್ಧಾರವನ್ನು ಪ್ರಶ್ನಿಸಿದ ನಿರ್ದೇಶಕ ಅಮೋಲ್‌ ಪಾಲೇಕರ್‌ ಅವರು ಈಗ ಎನ್‌ಜಿಎಂಎಯ ನಡೆಗಳನ್ನೂ ಕಟುವಾಗಿ ಟೀಕಿಸಿದ್ದಾರೆ. ಕಳೆದ ಶುಕ್ರವಾರ ಕಲಾವಿದ ಪ್ರಭಾಕರ ಬರ್ವೆ ಅವರ ಸ್ಮರಣೆಯ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಲ್ಲಿ ಅಮೋಲ್‌ ಪಾಲೇಕರ್‌ ಸಂಸ್ಕೃತಿ ಇಲಾಖೆಯ ನಡೆಯನ್ನು ಟೀಕಿಸಿದ್ದರು. ಆಗ ಎನ್‌ಜಿಎಂಎಯ ಕೆಲವು ಸದಸ್ಯರು ಅವರ ಭಾಷಣಕ್ಕೆ ತಡೆ ಒಡ್ಡಿದ್ದರು. ಈ ವಿಷಯವನ್ನು ಭಾನುವಾರ ಮತ್ತೆ ಪ್ರಸ್ತಾಪಿಸಿರುವ ಪಾಲೇಕರ್‌, ಎನ್‌ಜಿಎಂಎ ಕೇಂದ್ರ ಸರಕಾರದ ವಿಮರ್ಶಕರಿಗೆ ತಡೆ ಒಡ್ಡುತ್ತಿದೆ ಎಂದು ಅವರು ಪರೋಕ್ಷವಾಗಿ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ