ಆ್ಯಪ್ನಗರ

ವಂಚಕ ವರನಿಂದ ಪಾರುಮಾಡಿತು ಪ್ಯಾನ್ ಕಾರ್ಡ್

ನಕಲಿ ಹೆಸರು ಹೇಳಿಕೊಂಡು ಅವಿವಾಹಿತನಂತೆ ಪೋಸು ಕೊಡುತ್ತ ಮತ್ತೊಂದು ಮದುವೆಯಾಗ ಹೊರಟಿದ್ದ ವಂಚಕನೊಬ್ಬ ಪ್ಯಾನ್ ಕಾರ್ಡ್‌ನಿಂದಾಗಿ ಕಂಬಿ ಎಣಿಸುವಂತಾಗಿದೆ.

Maharashtra Times 31 Jul 2018, 3:17 pm
ಮುಂಬಯಿ: ನಕಲಿ ಹೆಸರು ಹೇಳಿಕೊಂಡು ಅವಿವಾಹಿತನಂತೆ ಪೋಸು ಕೊಡುತ್ತ ಮತ್ತೊಂದು ಮದುವೆಯಾಗ ಹೊರಟಿದ್ದ ವಂಚಕನೊಬ್ಬ ಪ್ಯಾನ್ ಕಾರ್ಡ್‌ನಿಂದಾಗಿ ಕಂಬಿ ಎಣಿಸುವಂತಾಗಿದೆ.
Vijaya Karnataka Web Marriage1 1


ವಿಖ್ರೋಲಿ ನಿವಾಸಿಯಾಗಿರುವ ಮಹಿಳೆ ಕೆಲ ತಿಂಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದುಕೊಂಡು ಹೊಸ ಸಂಗಾತಿಯ ಹುಡುಕಾಟದಲ್ಲಿದ್ದಳು. ವಿವಾಹ ವೆಬ್ಸೈಟ್‌ನಿಂದ ಆಕೆಗೆ ಶೈಲೇಶ್ ಗಾಯಕ್ವಾಡ್ ಎಂಬಾತನ ಪರಿಚಯವಾಗಿದೆ. ಕೆಲ ಬಾರಿ ಭೇಟಿಯಾದ ಬಳಿಕ ಆತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಮದುವೆಗೆ ಕೆಲವು ದಿನಗಳಿರುವಾಗ ಮಹಿಳೆಗೆ ಅಚಾನಕ್ ಆಗಿ ಗಾಯಕ್ವಾಡನ ಪ್ಯಾನ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ಶೌರ್ಯ ಸಾವಂತ್ ಎಂಬ ಹೆಸರಿತ್ತು. ಅನುಮಾನಗೊಂಡ ಮಹಿಳೆ ಗಾಯಕ್ವಾಡ್ ಮೊಬೈಲ್ ಫೋನ್ ಪರಿಶೀಲಿಸಿದಾಗ ಇನ್ನೊಂದು ಮಹಿಳೆಯ ಜತೆಗೂ ಆತನಿಗೆ ಸಂಬಂಧವಿರುವುದು ಪತ್ತೆಯಾಗಿದೆ.

ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ಮದುವೆ ಮುರಿದುಕೊಂಡು ಸಾವಂತ್ ವಿರುದ್ಧ ವಂಚನೆಯ ಪ್ರಕರಣ ದಾಖಲಿಸಿದ್ದಾಳೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಗೆ ಈಗಾಗಲೇ ಮದುವೆಯಾಗಿದ್ದು 4 ವರ್ಷದ ಮಗನಿದ್ದಾನೆ, ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಮೂಲವರದಿ: Maharashtra Times

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ