ಆ್ಯಪ್ನಗರ

ಭಯೋತ್ಪಾದನೆ ನಿಲ್ಲಿಸದೆ ಪಾಕ್‌ ಜತೆ ಮಾತಿಲ್ಲ

ಭಯೋತ್ಪಾದನೆ ನಿಗ್ರಹಿಸುವವರೆಗೆ ಪಾಕಿಸ್ತಾನದ ಜತೆ ಯಾವುದೇ ಸಮಗ್ರ ಮಾತುಕತೆ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಜನರು ಸಾಯುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಜತೆ ಮಾತುಕತೆ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂದು ಅವರು ಹೇಳಿದ್ದಾರೆ.

Vijaya Karnataka 29 May 2018, 9:59 am
ಹೊಸದಿಲ್ಲಿ: ಭಯೋತ್ಪಾದನೆ ನಿಗ್ರಹಿಸುವವರೆಗೆ ಪಾಕಿಸ್ತಾನದ ಜತೆ ಯಾವುದೇ ಸಮಗ್ರ ಮಾತುಕತೆ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಜನರು ಸಾಯುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಜತೆ ಮಾತುಕತೆ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂದು ಅವರು ಹೇಳಿದ್ದಾರೆ.
Vijaya Karnataka Web susu1_1464861642


''ನಾವು ಪಾಕಿಸ್ತಾನದ ಜತೆ ಮಾತುಕತೆಗೆ ಸದಾ ಸಿದ್ಧ. ಆದರೆ, ಅದು ಮೊದಲು ಉಗ್ರರಿಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಬೇಕು. ಭಯೋತ್ಪಾದನೆ ಮತ್ತು ಮಾತುಕತೆ ಏಕಕಾಲದಲ್ಲಿ ನಡೆಯುವುದು ಸಾಧ್ಯವಿಲ್ಲ,'' ಎಂದು ನರೇಂದ್ರ ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿದ ಸಂದರ್ಭ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಆದಾಗ್ಯೂ ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಯೋತ್ಪಾದನೆಗೆ ಸಂಬಂಧಿಸಿ ಮಾತುಕತೆ ನಡೆಸಲಿದ್ದಾರೆ ಎಂದು ಅವರು ನುಡಿದರು.

ಇತಿಹಾಸ ತಿರುಚುವ ಪಾಕ್‌
: ಗಿಲ್ಗಿಟ್‌ ಮತ್ತು ಬಲ್ಟಿಸ್ತಾನ್‌ನ ಆಡಳಿತ ನಿಯಂತ್ರಣಕ್ಕೆ ಸಂಬಂಧಿಸಿದ ಆದೇಶಕ್ಕೆ ಸಂಬಂಧಿಸಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಸಚಿವೆ, ಪಾಕಿಸ್ತಾನ ಇತಿಹಾಸವನ್ನು ತಿರುಚುತ್ತಲೇ ಬಂದಿದೆ ಎಂದರು. ''ನಮಗೆ ಇತಿಹಾಸ ಮತ್ತು ಭೂಗೋಳದ ಪಾಠ ಮಾಡಲು ಯತ್ನಿಸುವ ಪಾಕಿಸ್ತಾನ ತಾನು ಮಾತ್ರ ಕಾನೂನಿನ ಮೇಲೆ ನಂಬಿಕೆ ಇಟ್ಟಿಲ್ಲ,'' ಎಂದು ಹೇಳಿದರು ಸುಷ್ಮಾ.

ಮೋದಿ ಆಡಳಿತಾವಧಿಯ ನಾಲ್ಕು ವರ್ಷದಲ್ಲಿ ಸರಕಾರ ಜಾಗತಿಕ ಮಟ್ಟದಲ್ಲಿ ಅಪೂರ್ವ ಸಾಧನೆ ಮಾಡಿದೆ. 2014ರ ಬಳಿಕ ಭಾರತ ನಾಲ್ಕು ರಫ್ತು ನಿಯಂತ್ರಣ ಪ್ರಭುತ್ವಗಳಲ್ಲಿ ಮೂರರ ಸದಸ್ಯತ್ವವನ್ನು ಪಡೆದಿದೆ. 192 ದೇಶಗಳ ಪೈಕಿ 186 ರಾಷ್ಟ್ರಗಳ ಜತೆ ಸಂಪರ್ಕ ಸಾಧಿಸಿದೆ.

- ಸುಷ್ಮಾ ಸ್ವರಾಜ್‌, ವಿದೇಶಾಂಗ ವ್ಯವಹಾರಗಳ ಸಚಿವೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ