ಆ್ಯಪ್ನಗರ

ಜೂ.1ರಿಂದ ರೈಲು ಸಂಚಾರ ಆರಂಭ: ಭಯ ಹುಟ್ಟಿಸಿದ ಮುಂಬೈ-ಬೆಂಗಳೂರು ಟ್ರೇನ್!

ದೇಶದಲ್ಲಿ ಜೂನ್‌ 1ರಿಂದ ರೈಲು ಸಂಚಾರ ಆರಂಭಕ್ಕೆ ರೈಲ್ವೆ ಇಲಾಖೆ ಅವಕಾಶ ನೀಡಿದೆ. ಈಗಾಗಲೇ ಹಲವಾರು ರೈಲುಗಳಿಗೆ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಮುಂಬೈ- ಬೆಂಗಳೂರು ರೈಲಿಗೆ ಟಿಕೆಟ್‌ ಬುಕಿಂಗ್‌ ಈಗಾಗಲೇ ಆರಂಭವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

Vijaya Karnataka Web 28 May 2020, 3:56 pm
ಬೆಂಗಳೂರು: ದೇಶದಲ್ಲಿ ಜೂನ್‌ 1ರಿಂದ ರೈಲು ಸಂಚಾರ ಆರಂಭಕ್ಕೆ ರೈಲ್ವೆ ಇಲಾಖೆ ಅವಕಾಶ ನೀಡಿದೆ. ಈಗಾಗಲೇ ಹಲವಾರು ರೈಲುಗಳಿಗೆ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ.
Vijaya Karnataka Web indian railway


ಎಲ್ಲ ರಾಜ್ಯಗಳಿಂದಲೂ ರೈಲುಗಳು ಬೆಂಗಳೂರಿಗೆ ಆಗಮಿಸಲಿವೆ. ಮುಂಬೈ- ಬೆಂಗಳೂರು ರೈಲಿಗೆ ಟಿಕೆಟ್‌ ಬುಕಿಂಗ್‌ ಈಗಾಗಲೇ ಆರಂಭವಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಹಾಟ್‌ಸ್ಪಾಟ್‌ ಮುಂಬೈನಿಂದ ರೈಲು ಸಂಚಾರಕ್ಕೆ ಅವಕಾಶ ನೀಡಿರುವುದು ರಾಜ್ಯದ ಜನತೆಯಲ್ಲಿ ಭಯ ಹುಟ್ಟಿಸಿದೆ.

ಆರ್‌ಬಿಐ ಬಾಂಡ್‌ ರದ್ದು - ಜನತೆಯ ಮೇಲಿನ ಕ್ರೂರ ಪ್ರಹಾರ ಎಂದ ಚಿದಂಬರಂ

ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರ ಪೈಕಿ ಮುಂಬೈ ಸೇರಿ ಹೊರ ರಾಜ್ಯಗಳಿ ಬಂದವರೇ ಹೆಚ್ಚಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರೈಲು ಸಂಚಾರ ಆರಂಭಿಸುವುದರಿಂದ ಕೊರೊನಾ ಸೋಂಕು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಲಾಕ್‌ಡೌನ್‌ ನಂತರ ಸಂಚಾರಕ್ಕೆ ಸಿದ್ಧವಾಗುತ್ತಿವೆ ಖಾಸಗಿ ಬಸ್‌ಗಳು

ಮೆಟ್ರೋ ಚಾಲನೆಗೂ ಸಿದ್ದತೆ
ಲಾಕ್‌ಡೌನ್‌ ಕಾರಣದಿಂದ ಸ್ಥಗಿತಗೊಂಡಿದ್ದ ಬೆಂಗಳೂರು ಮೆಟ್ರೋ ಸಂಚಾರವನ್ನು ಮತ್ತೆ ಆರಂಭಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಒಂದು ವಾರದಿಂದ ಮೆಟ್ರೋ ಸಿಬ್ಬಂದಿ ಸಿದ್ಧತೆಯಲ್ಲಿ ಇದ್ದಾರೆ. ಬಿಎಂಆರ್‌ಸಿಎಲ್‌ ಅನುಮತಿಗಾಗಿ ಕಾದಿದೆ. ಲಾಕ್‌ಡೌನ್‌ ಜಾರಿಯಾದ ದಿನದಿಂದಲೂ ರೈಲು ಹಾಗೂ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಿಸಲು ಸಿದ್ಧತೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ