ಆ್ಯಪ್ನಗರ

ಕಳೆದ ವರ್ಷ ರೈಲಿನಲ್ಲಿ ಕಳವಾಗಿದ್ದು 1.95ಲಕ್ಷ ಟವೆಲ್, 55,573 ಬೆಡ್‌ಶೀಟ್, 55,573 ತಲೆದಿಂಬು ಕವರ್, 7,043 ಹೊದಿಕೆ

ಪ್ರಯಾಣಿಕರು ಕಳ್ಳತನಕ್ಕಿಳಿಯುತ್ತಿರುವುದರಿಂದ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 4,000 ಕೋಟಿ ನಷ್ಟವಾಗಿದೆ ಎಂದು ರೈಲ್ವೆ ವರದಿ ತಿಳಿಸಿದೆ

Indiatimes 5 Oct 2018, 12:03 pm
ಹೊಸದಿಲ್ಲಿ: ಕಳೆದ ವರ್ಷ ರೈಲಿನಲ್ಲಿ 1.95ಲಕ್ಷ ಟವೆಲ್, 55,573 ಬೆಡ್‌ಶೀಟ್, 55,573 ತಲೆದಿಂಬು ಕವರ್, 7,043 ಹೊದಿಕೆಗಳನ್ನು ಕದಿಯಲಾಗಿದೆ ಎಂದು ಪಶ್ಚಿಮ ರೈಲ್ವೆ ಬಹಿರಂಗಪಡಿಸಿದೆ.
Vijaya Karnataka Web Railway


ಕಿಟಕಿಯ ಕಬ್ಬಿಣದ ಗ್ರಿಲ್ಸ್, ವಾಶ್‌ರೂಮ್ ಶವರ್, ಹಳಿಗಳನ್ನು ಸಹ ಕದಿಯಲಾಗಿದ್ದು, ಕಳೆದ ವರ್ಷ ರೈಲ್ವೆ ರಕ್ಷಣಾ ಪಡೆ (RPF) ವಶಪಡಿಸಿಕೊಂಡ ಕದ್ದ ಮಾಲುಗಳ ಮೌಲ್ಯ 2.97 ಕೋಟಿ ಎಂದು ತಿಳಿದುಬಂದಿದೆ.

ಅಷ್ಟೇ ಅಲ್ಲದೆ ಪ್ರತಿವರ್ಷ ಅಂದಾಜು 200 ಶೌಚಾಲಯ ಮಗ್, 1,000 ನಲ್ಲಿ ಟ್ಯಾಪ್, ಸುಮಾರು 300 ಫ್ಲಷ್ ಪೈಪ್‌ಗಳು ಕಳ್ಳತನವಾಗುತ್ತದೆ. ಅದನ್ನು ಕಡಿಮೆ ಬೆಲೆಗೆ ಮಾರಿ ಹಣ ಮಾಡುತ್ತಾರೆ ಎಂದು ರೈಲ್ವೆ ಇಲಾಖೆ ವರದಿ ತಿಳಿಸುತ್ತದೆ.

ಕೇಂದ್ರ ರೈಲ್ವೆ, ಸಿಪಿಆರ್‌ಒ ಸುನೀಲ್ ಉದಾಸಿ ಹೇಳುವ ಪ್ರಕಾರ ಏಪ್ರಿಲ್ - ಸೆಪ್ಟೆಂಬರ್ 2018 ರವರೆಗೆ 79,350 ಟವಲ್, 27,545 ಬೆಡ್‌ಶೀಟ್, 21,050 ತಲೆದಿಂಬು ಕವರ್, 2,150 ದಿಂಬುಗಳು ಮತ್ತು 2,065 ಹೊದಿಕೆಗಳನ್ನು ಕಳವು ಮಾಡಲಾಗಿದೆ. ಅಂದಾಜು 62ಲಕ್ಷ ಮೌಲ್ಯದ ವಸ್ತುಗಳು ನಾಪತ್ತೆಯಾಗಿವೆ.

ಕಳ್ಳತನಕ್ಕೆ ಇತ್ತೀಚಿನ ನಿದರ್ಶನವೆಂದರೆ ರತ್ಲಾಂ ನಿವಾಸಿ ಶಬ್ಬೀರ್ ರೋಟಿವಾಲಾ ಎಂಬುವವ ಇತ್ತೀಚೆಗೆ ಮೂರು ಹೊದಿಕೆ, 6 ಬೆಡ್‌ಶೀಟ್, ಮೂರು ತಲೆದಿಂಬು ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ. ವಿಶೇಷವೆಂದರೆ ಆದ ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದ.

ಹೀಗೆ ಪ್ರಯಾಣಿಕರು ಕಳ್ಳತನಕ್ಕಿಳಿಯುತ್ತಿರುವುದರಿಂದ ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 4,000 ಕೋಟಿ ನಷ್ಟವಾಗಿದೆ ಎಂದು ರೈಲ್ವೆ ವರದಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ