ಆ್ಯಪ್ನಗರ

ಪಕೋಡಾವಾಲಾನನ್ನೂ ಮೀರಿಸಿದ ಚಾಟ್‌ವಾಲಾ:1.2 ಕೋಟಿ ರೂ. ಅಕ್ರಮ ಆಸ್ತಿ ಘೋಷಣೆ

ಇತ್ತೀಚೆಗಷ್ಟೇ ಪಕೋಡಾ ಮಾರುತ್ತಿದ್ದ ಆದಾಯ ತೆರಿಗೆ ಇಲಾಖೆಗೆ 60 ಲಕ್ಷ ರೂ. ಅಘೋಷಿತ ಆದಾಯವನ್ನು ಒಪ್ಪಿಸಿದ್ದರು. ಅದೇ ರೀತಿ, ಪಂಜಾಬ್‌ನ ಪಟಿಯಾಲಾದ ಖ್ಯಾತ ಚಾಟ್‌ವಾಲಾ ಐಟಿ ಇಲಾಖೆಗೆ 1 ಕೋಟಿ 20 ಲಕ್ಷ ರೂ. ಬಹಿರಂಗಪಡಿಸದ ಆದಾಯವನ್ನು ನೀಡಿದ್ದಾರೆ.

TIMESOFINDIA.COM 19 Oct 2018, 9:00 am
[This story originally published in Times Of India on Oct 19, 2018]
Vijaya Karnataka Web chaatwala building


ಲೂಧಿಯಾನ:
ಪಂಜಾಬ್‌ನ ಖ್ಯಾತ ಚಾಟ್‌ವಾಲಾ ಒಬ್ಬರು 1 ಕೋಟಿ 20 ಲಕ್ಷ ರೂ. ಅಕ್ರಮ ಆಸ್ತಿಯನ್ನು ಘೋಷಿಸಿಕೊಂಡು, ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಚಾಟ್‌ ವ್ಯಾಪಾರದ ಜತೆಗೆ ಆಹಾರ ಕ್ಯಾಟರಿಂಗ್ ಮಾಡುವುದನ್ನು ಅವರು ಮಾಡುತ್ತಿದ್ದರು.

ಅಲ್ಲದೆ, ಅವರು ಬಹಿರಂಗಪಡಿಸಿರುವ ಆದಾಯದ ಮೇಲೆ ಚಾಟ್ಸ್‌ ವ್ಯಾಪಾರದ ಮಾಲೀಕರು ಸುಮಾರು 52 ಲಕ್ಷ ರೂ. ತೆರಿಗೆ ಕಟ್ಟಬೇಕಿದೆ. ಲುಧಿಯಾನಾ - 3 ಕಚೇರಿಯ ಪ್ರಮುಖ ಆಯುಕ್ತ ಪರ್ನೀತ್ ಸಛ್‌ದೇವ್ ಹಾಗೂ ಪಟಿಯಾಲಾ ಕಮಿಷನರೇಟ್‌ನ ಆದೇಶದ ಮೇರೆಗೆ ಚಾಟ್‌ವಾಲಾನ ಕಚೇರಿ ಬಳಿ ಐಟಿ ಇಲಾಖೆ ಸರ್ವೇ ನಡೆಸಿತ್ತು.

ಆ ವೇಳೆ, ಕುರುಕಲು ತಿಂಡಿ ಮಾರುವವರು ಅಕ್ರಮ ಆಸ್ತಿ ಹೊಂದಿದ್ದಾರೆ ಹಾಗೂ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ದೊಡ್ಡ ಹೂಡಿಕೆಯನ್ನು ಮಾಡಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅಲ್ಲದೆ, ಕಳೆದ 2 ವರ್ಷಗಳಿಂದ ಐಟಿ ರಿಟರ್ನ್ಸ್‌ ಕೂಡ ಸಲ್ಲಿಸಿರಲಿಲ್ಲ ಎಂಬುದು ಬಯಲಾಗಿತ್ತು.

ಪಂಜಾಬ್‌ನ ಪ್ರಖ್ಯಾತ ಚಾಟ್‌ವಾಲಾ ಆಗಿರುವ ಆತ ಎರಡು ಪಾರ್ಟಿ ಹಾಲ್‌ಗಳನ್ನು ನಿರ್ಮಿಸಿದ್ದರು. ಹಾಗೂ ಒಂದು ಸಮಾರಂಭಕ್ಕೆ ಚಾಟ್ಸ್‌ ಮಾರಲು ಸುಮಾರು ಎರಡೂವರೆ ಲಕ್ಷ ರೂ.ನಿಂದ ಮೂರು ಲಕ್ಷ ರೂ. ದವರೆಗೆ ಶುಲ್ಕ ವಿಧಿಸುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಇನ್ನು, ಅವರ ವ್ಯಾಪಾರದ ಬಗ್ಗೆ ಸರಿಯಾದ ದಾಖಲೆ ನೀಡಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಅವರು ಇನ್ನೂ ಹೆಚ್ಚು ತೆರಿಗೆ ವಂಚಿಸಿರುವ ಸಾಧ್ಯತೆ ಇದೆ. ಹೀಗಾಗಿ, ಮಾಲೀಕನ ವಿರುದ್ಧ ತನಿಖೆ ಆರಂಭಿಸುವುದಾಗಿಯೂ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ