ಆ್ಯಪ್ನಗರ

ಮುಫ್ತಿ ಕುಟುಂಬ ರಾಜಕಾರಣ: ರಾಜಕೀಯ ಭವಿಷ್ಯ ಅತಂತ್ರ

ಕುಟುಂಬ ರಾಜಕಾರಣ ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ಜಮ್ಮು ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ರಾಜಕೀಯ ಭವಿಷ್ಯ ಸಂಧಿಗ್ನತೆಗೆ ಸಿಲುಕಿದೆ.

Vijaya Karnataka Web 10 Jul 2018, 4:46 pm
ಶ್ರೀನಗರ: ಕುಟುಂಬ ರಾಜಕಾರಣ ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ಜಮ್ಮು ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ.
Vijaya Karnataka Web Mehabuba mufti


ಮೆಹಬೂಬ ವಿರುದ್ಧ ಪಿಡಿಪಿ ನಾಯಕರು ಬಹಿರಂಗ ಹೇಳಿಕೆ ನೀಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರ ಪತನಗೊಂಡ ಬಳಿಕ ಅಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಲ್ಲಿದೆ.

ಮೆಹಬೂಬ ಆಡಳಿತ ಮತ್ತು ಕಾರ್ಯವೈಖರಿಯೇ ಸರಕಾರ ಪತನಕ್ಕೆ ಪರೋಕ್ಷ ಕಾರಣ ಎಂದಿರುವ ಪಿಡಿಪಿ ನಾಯಕರು, ಪಕ್ಷ ತೊರೆಯುತ್ತಿದ್ದಾರೆ. ಮುಫ್ತಿ ನಾಯಕತ್ವದಲ್ಲಿ ಅಸಮಾಧಾನಗೊಂಡಿರುವ 14 ಶಾಸಕರು ಪಿಡಿಪಿ ತೊರೆಯಲಿದ್ದು, ಕಳೆದ ವಾರವೇ ಈ ಬಗ್ಗೆ ನಿರ್ಧಾರ ಪ್ರಕಟಿಸಿದ್ದರು.

ಮೆಹಬೂಬ ಮುಫ್ತಿ ಆಕೆಯ ಸಹೋದರ ತಸಾದುಕ್ ಮುಫ್ತಿಗೆ ಪ್ರವಾಸೋದ್ಯಮ ಸಚಿವ ಖಾತೆ ನೀಡಿದ್ದು, ಸೋದರಮಾವ ಸರ್ತಾಜ್ ಮದನಿಗೆ ಕೆಲವೊಂದು ಅನುಕೂಲ ಮಾಡಿಕೊಟ್ಟಿದ್ದು ಸಹಿತ ಹಲವು ವಿಚಾರಗಳ ಬಗ್ಗೆ ಪಿಡಿಪಿ ನಾಯಕರು ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಪಕ್ಷ ತೊರೆಯಲಿದ್ದು, ಇದರಿಂದ ಪಿಡಿಪಿ ರಾಜಕೀಯ ಭವಿಷ್ಯ ಮತ್ತು ಮೆಹಬೂಬ ಮುಫ್ತಿ ಮುಂದಿನ ನಡೆ ಕೂಡ ತೊಂದರೆಗೆ ಸಿಲುಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ