ಆ್ಯಪ್ನಗರ

ಕಾಸ್‌ಗಂಜ್‌ ಹಿಂಸೆ: ದುಷ್ಕರ್ಮಿಗಳಿಗೆ ಸಿಎಂ ಯೋಗಿ ಕಠಿಣ ವಾರ್ನಿಂಗ್

ಕಾಸ್‌ಗಂಜ್‌ನಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದ ವಿರುದ್ಧ ಮೌನ ಮುರಿದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅರಾಜಕತೆ ಸೃಷ್ಟಿಸುವವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Vijaya Karnataka Web 30 Jan 2018, 5:20 pm
ಲಖನೌ: ಕಾಸ್‌ಗಂಜ್‌ನಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದ ವಿರುದ್ಧ ಮೌನ ಮುರಿದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅರಾಜಕತೆ ಸೃಷ್ಟಿಸುವವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Vijaya Karnataka Web perpetrators of kasganj violence wont be spared up cm yogi adityanath
ಕಾಸ್‌ಗಂಜ್‌ ಹಿಂಸೆ: ದುಷ್ಕರ್ಮಿಗಳಿಗೆ ಸಿಎಂ ಯೋಗಿ ಕಠಿಣ ವಾರ್ನಿಂಗ್


ಕಳೆದ ಶುಕ್ರವಾರ ಕಾಸ್‌ಗಂಜ್‌ನಲ್ಲಿ ಆರಂಭವಾದ ಹಿಂಸಾಚಾರಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿ, ಇನ್ನಿಬ್ಬರು ಗಾಯಗೊಂಡಿದ್ದರು.

'ನಮ್ಮ ಸರಕಾರ ಪ್ರತಿಯೊಬ್ಬ ಪ್ರಜೆಗೂ ಭದ್ರತೆ ಮತ್ತು ರಕ್ಷಣೆ ನೀಡಲು ಬದ್ಧವಾಗಿದೆ. ಅರಾಜಕತೆ ಸೃಷ್ಟಿಸುವವರು ಯಾರೇ ಆಗಿದ್ದರೂ ಸುಮ್ಮನೆ ಬಿಡುವುದಿಲ್ಲ' ಎಂದು ಯೋಗಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಹಿಂಸೆಗೆ ಪ್ರಚೋದನೆ ನೀಡುವವರನ್ನು ಕಠಿಣವಾಗಿ ಶಿಕ್ಷಿಸಲಾಗುವುದು. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.

ಗಣರಾಜ್ಯೋತ್ಸವ ದಿನದಂದು ಕನಿಷ್ಠ ಮೂರು ಅಂಗಡಿಗಳು, ಎರಡು ಬಸ್‌ಗಳು ಮತ್ತು ಒಂದು ಕಾರು ಬೆಂಕಿಗಾಹುತಿಯಾಗಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ವರೆಗೆ 118 ಮಂದಿಯನ್ನು ಬಂಧಿಸಲಾಗಿದೆ.

ಈ ಹಿಂಸಾಚಾರ ಉತ್ತರ ಪ್ರದೇಶಕ್ಕೆ ಒಂದು 'ಕಪ್ಪು ಚುಕ್ಕೆ' ಎಂದು ರಾಜ್ಯಪಾಲ ರಾಮ್‌ ನಾಯ್ಕ್‌ ಬಣ್ಣಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ