ಆ್ಯಪ್ನಗರ

ಈ ಯೋಧನ ಫೋಟೋಗೆ ನಿಮ್ಮ ಒಂದು ಲೈಕ್ ಸಾಕು!

ಬಿಸಿಲು, ಮಳೆ, ಚಂಡಮಾರುತ, ಪ್ರವಾಹ...ಯಾವುದೇ ಆಪತ್ತು ಎದುರಾದರೂ ದೇಶ ರಕ್ಷಣೆ ವಿಚಾರದಲ್ಲಿ ನಮ್ಮ ಸೈನಿಕರು ರಾಜಿಯಾಗಲ್ಲ ಎಂಬುದಕ್ಕೆ ನಿದರ್ಶನವೇ ಈ ಚಿತ್ರ. ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆದರೆ ಅಲ್ಲಿನ ಗಡಿಭಾಗದಲ್ಲಿರುವ ಸೈನಿಕರು ಮಾತ್ರ ಪ್ರವಾಹದಲ್ಲೇ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಏಜೆನ್ಸೀಸ್ 8 Jul 2017, 11:29 pm
ಬಿಸಿಲು, ಮಳೆ, ಚಂಡಮಾರುತ, ಪ್ರವಾಹ...ಯಾವುದೇ ಆಪತ್ತು ಎದುರಾದರೂ ದೇಶ ರಕ್ಷಣೆ ವಿಚಾರದಲ್ಲಿ ನಮ್ಮ ಸೈನಿಕರು ರಾಜಿಯಾಗಲ್ಲ ಎಂಬುದಕ್ಕೆ ನಿದರ್ಶನವೇ ಈ ಚಿತ್ರ. ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಆದರೆ ಅಲ್ಲಿನ ಗಡಿಭಾಗದಲ್ಲಿರುವ ಸೈನಿಕರು ಮಾತ್ರ ಪ್ರವಾಹದಲ್ಲೇ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ.
Vijaya Karnataka Web picture of a jawan standing in a flood will make you pride
ಈ ಯೋಧನ ಫೋಟೋಗೆ ನಿಮ್ಮ ಒಂದು ಲೈಕ್ ಸಾಕು!


ಈ ಸಂದರ್ಭದಲ್ಲಿ ಮೇಜರ್ ಸುರೇಂದ್ರ ಪೂನಿಯಾ ಎಂಬ ಸೈನಿಕಾಧಿಕಾರಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಯೋಧರೊಬ್ಬರ ಫೋಟೋ ಈಗ ವೈರಲ್ ಆಗಿದೆ. 'ನಿನ್ನೆ ಇಂದು ನಾಳೆ ಯಾವಾಗಾದರೂ, ಏನಾದರೂ, ಎಲ್ಲಿಯಾದರೂ...ನಾವಿರುತ್ತೇನೆ' ಎಂದು ಮಾಡಿರುವ ಆ ಪೋಸ್ಟ್ ಸೈನಿಕರ ಶಿಸ್ತು, ಬದ್ಧತೆಯನ್ನು ತೋರುತ್ತದೆ.

ದೇಶದಲ್ಲಿನ ಭಿನ್ನ ವಾತಾವರಣದ ನಡುವೆ ಸೈನಿಕರು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಜಮ್ಮು ಕಾಶ್ಮೀರದ ರಕ್ತಹೆಪ್ಪುಗಟ್ಟುವಂತಹ ಚಳಿಯಲ್ಲಿ...ರಾಜಸ್ಥಾನದ ಸುಡುವ ಬಿಸಿಲಿನಲ್ಲಿ, ಬೆಟ್ಟಗಳಲ್ಲಿ, ಕಾಡುಗಳಲ್ಲಿ, ಕ್ರೂರ ಮೃಗಗಳು, ಪ್ರತ್ಯೇಕತಾವಾದಿಗಳು...ಹೀಗೆ ಅದೆಷ್ಟೋ ಪ್ರತಿಕೂಲ ಪರಿಸ್ಥಿತಿಗಳ ನಡುವೆ ನಮ್ಮ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಯಾಕೆಂದರೆ ಇದೆಲ್ಲಾ ನಮಗಾಗಿ.. ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣವಾಗಿಡುತ್ತಿರುವ ನಮ್ಮ ಸೈನಿಕರಿಗೆ ಸೆಲ್ಯೂಟ್ ಮಾಡದಿರಲು ಸಾಧ್ಯವೇ?!
"Whatever ...Wherever ... Yesterday, Today, Tomorrow & Forever ...You will find me here" - Indian Soldier Jai Hind 🇮🇳 @adgpi pic.twitter.com/8hD9HP3gpf — Maj Surendra Poonia (@MajorPoonia) July 5, 2017

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ